April 29, 2024

Bhavana Tv

Its Your Channel

ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪೀಠೋಪಕರಣ ಜಪ್ತಿ

ಭಟ್ಕಳ: ಸರಕಾರಿ ಶಾಲೆಯೊಂದರ ಬಾಡಿಗೆಯನ್ನ ನೀಡದೇ ಸತಾಯಿಸುತ್ತಿರುವ ಶಿಕ್ಷಣ ಇಲಾಖೆಯ ವಿರುದ್ಧ ನ್ಯಾಯಾಲಯದಿಂದ ಆದೇಶ ತಂದಿದ್ದ ಮಗ್ದಂ ಕಾಲೋನಿ ಜಮಾತ್ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ ಘಟನೆ ಗುರುವಾರ ಬೆಳಿಗ್ಗೆ ಜರುಗಿದೆ.

೧೯೭೨ರಲ್ಲಿ ಮಗ್ದಂ ಕಾಲೋನಿ ಜಮಾತ್ ವತಿಯಿಂದ ಕಟ್ಟಡವನ್ನು ಕಟ್ಟಿ ಶಾಲೆ ನಡೆಸಲು ಶಿಕ್ಷಣ ಇಲಾಖೆಗೆ ಬಾಡಿಗೆಗೆ ನೀಡಲಾಗಿತ್ತು. ತಿಂಗಳಿಗೆ ರೂ.೧೧೧/- ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿತ್ತು. ನಂತರ ೧೯೮೩-೮೪ರಲ್ಲಿ ಜಾಗಾದ ಕೊರತೆ ಎದುರಾಗಿದ್ದರಿಂದ ಇನ್ನೊಂದು ಕೋಣೆಯನ್ನು ಸೇರಿಸಲಾಗಿದ್ದು, ನಂತರ ಮತ್ತೊಂದು ಕೋಣೆಯನ್ನು ಸಹ ಸೇರಿಸಿ ಕಟ್ಟಡವನ್ನು ಬಾಡಿಗೆ ರೂ.೩೩೨/-ಕ್ಕೆ ನೀಡಲಾಗಿತ್ತು. ಬಾಡಿಗೆಯನ್ನು ನೀಡದ ವಿರುದ್ಧ ಜಮಾತ್ ೨೦೦೫ರಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ದಾವೆಯಲ್ಲಿ ಪ್ರತಿ ವರ್ಷಕ್ಕೆ ರೂ.೮,೯೧೬/- ನೀಡಬೇಕೆಂದು ಕೋರಲಾಗಿತ್ತು. ನ್ಯಾಯಾಲಯದ ಆದೇಶ ನೀಡಲಾಗಿದ್ದು ಮಗ್ದಂ ಕಾಲೋನಿ ಜಮಾತೆಗೆ ಶಿಕ್ಷಣ ಇಲಾಖೆ ವಾರ್ಷಿಕವಾಗಿ ರೂ.೮,೯೧೬/-, ನ್ಯಾಯಾಲಯದ ಖರ್ಚು ರೂ.೨,೪೯೮/- ಹಾಗೂ ಶೇ.೬ ಬಡ್ಡಿದರವನ್ನು ಹಾಕಿ ಕೊಡಬೇಕು ಎಂದು ೨೦೧೪ರಲ್ಲಿ ಆದೇಶ ನೀಡಿತ್ತು.
ನ್ಯಾಯಾಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕಾರವಾರ ಹಾಗೂ ಸರಕಾರದ ಪರವಾಗಿ ಜಿಲ್ಲಾಧಿಕಾರಿಗಳನ್ನು ಪಕ್ಷಗಾರರನ್ನಾಗಿ ಮಾಡಲಾಗಿತ್ತು. ಒಟ್ಟೂ ರೂ.೧,೪೯,೯೯೮/- ಪಾವತಿ ಮಾಡದ ವಿರುದ್ಧ ಮಗ್ದಂ ಕಾಲೋನಿ ಜಮಾತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ವಸೂಲಾತಿಗಾಗಿ ಕೋರಿತ್ತು. ನ್ಯಾಯಾಲಯ ದಿನಾಂಕ ೧೪/೦೯/೨೦೨೧ರಂದು ಆದೇಶ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಚರಸ್ವತ್ತುಗಳನ್ನು ಜಪ್ತಿ ಮಾಡುವಂತೆ ಆದೇಶ ನೀಡಿತ್ತು. ಅದರಂತೆ ನ್ಯಾಯಾಲಯದ ಬೇಲಿಫ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಚರ ಸ್ವತ್ತುಗಳಾದ ಕಂಪ್ಯೂಟರ್, ಟೇಬಲ್, ಕುರ್ಚಿಗಳು ಸೇರಿದಂತೆ ಇತರೇ ವಸ್ತುಗಳನ್ನು ಜಪ್ತಿ ಮಾಡಿದರು.

ಈ ವೇಳೆ ಕಚೇರಿಗೆ ನ್ಯಾಯಾಲಯದಲ್ಲಿ ದಾವೆ ಹಾಕಿದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಬಂದಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಒಂದು ತಿಂಗಳ ಅವಧಿಯನ್ನು ಕೇಳಿದ್ದು ಜಮಾತುಲ್ ಮುಸ್ಲಿಮಿನ್ ಅವರಲ್ಲಿ ಕೇಳಿದ್ದು ನ್ಯಾಯಾಲಯದ ಆದೇಶಕ್ಕೆ ವಿರುದ್ದವಾಗಿ ನಾವು ನಡೆದುಕೊಳ್ಳಲು ಸಾಧ್ಯವಿಲ್ಲ ಜಪ್ತಿಯ ಆದೇಶದಂತೆ ನಮಗೆ ಸಿಗಬೇಕಾದ ಹಣ ನೀಡಬೇಕು ಇದಕ್ಕೆ ನ್ಯಾಯಾಲಯದ ಆದೇಶದಂತೆ ಮುಂದುವರೆಯಲಿ ಎಂದು ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ ಸಾದಿಕ್ ಮಟ್ಟಾ ತಿಳಿಸಿದರು.
ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದು ಸರಕಾರಿ ಕಚೇರಿಯ ಜೊತೆಗೆ ಸಾರ್ವಜನಿಕರ ಆಸ್ತಿ ಆಗಿದ್ದು ಇದರಲ್ಲಿ ನ್ಯಾಯಾಲಯದಿಂದ ಲಗತ್ತು ಆದೇಶ ತರಬೇಕಾಗಿತ್ತಾ ಎಂದು ಪ್ರಶ್ನಿಸಿದಕ್ಕೆ ಅಧ್ಯಕ್ಷ ಮಟ್ಟಾ ಸಾಧಿಕ್ ಸತತ ೮ ದಿನದಿಂದ ಕಚೇರಿಗೆ ಬರುತ್ತಿದ್ದು ಹಣ ನೀಡುವ ಬಗ್ಗೆ ದಿನವನ್ನು ಮುಂದುಡುತ್ತಿದ್ದಾರೆ ಹೊರತು ಹಣ ಪಾವತಿಯಾಗಿಲ್ಲವಾಗಿದೆ ಇದಕ್ಕೆ ಯಾರು ಹೊಣೆ. ಇದರಲ್ಲಿ ಜಮಾತುಲ್ ಮುಸ್ಲಿಮಿನ್ ಎಲ್ಲಾ ಪದಾಧಿಕಾರಿಗಳಿಂದ ನೀವು ಕೇಳಿದ ಕಾಲಾವಕಾಶ ಅವಧಿಯ ಬಗ್ಗೆ ಚರ್ಚಿಸಿ ತಿಳಿಸಬೇಕಾಗುತ್ತದೆ ತಕ್ಷಣಕ್ಕೆ ನ್ಯಾಯಾಲಯದ ಆದೇಶ ಪಾಲನೆ ಆಗಬೇಕು ಎಂದು ಅಧ್ಯಕ್ಷ ಮಟ್ಟಾ ಸಾದಿಕ್ ಹೇಳಿದರು.
ಅಂತ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೆರ ಅವರು ಇದರಲ್ಲಿ ನಮ್ಮ ಮೇಲಾಧಿಕಾರಿಗಳ ಸೂಚನೆಯಂತೆ ನಾನು ನಡೆದುಕೊಳ್ಳಬೇಕಿದೆ. ಅವರು ಒಂದು ತಿಂಗಳ ಅವಧಿಯಲ್ಲಿ ಹಣ ಪಾವತಿ ಮಾಡುವುದಾಗಿ ಹೇಳಿದ್ದು ಇದಕ್ಕೆ ಜಮಾತುಲ್ ಮುಸ್ಲಿಮಿನ್ ಮುಗ್ದುಮ್ ಕಾಲೋನಿ ಅವರು ಅವಕಾಶ ನೀಡಬೇಕೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕಚೇರಿಯ ಸಿಬ್ಬಂದಿಗಳಿಗೂ ಶಾಕ್:
ಒಂದು ಕ್ಷಣಕ್ಕೆ ನ್ಯಾಯಾಲಯದಿಂದ ಆದೇಶದಂತೆ ಜಪ್ತಿಗೆ ಗುರುವಾರದಂದು ಬೆಳಿಗ್ಗೆ ಆಗಮಿಸಿದ ನ್ಯಾಯಾಲಯದ ಬೆಲೀಫ್ ರಾದ ಗಣಪತಿ ಅವರು ನ್ಯಾಯಾಲಯದ ಆದೇಶ ತಿಳಿಸಿದಾಗ ಅವರೆಲ್ಲರಿಗೂ ಆಶ್ಚರ್ಯಗೊಂಡಿದ್ದು ಕಚೇರಿಯ ಕೆಲಸದ ನಡುವೆಯೇ ಕಂಪ್ಯೂಟರ್ ಸಹಿತ ಉಪಕರಣ, ಕುರ್ಚಿ ಟೇಬಲ್ ಗಳನ್ನು ಅಧಿಕಾರಿಗಳು, ಸಿಬ್ಬಂದಿಗಳ ಮುಂದೆಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬರುವಿಕೆಯ ವರೆಗು ಕಾದು ನಂತರ ಜಪ್ತಿ ಪ್ರಕ್ರಿಯೆಯನ್ನು ನಡೆಸಲಾಯಿತು.

error: