May 16, 2024

Bhavana Tv

Its Your Channel

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಾಯಿ ದೇಹದ ಆರೋಗ್ಯದ ಕನ್ನಡಿ ವಿಷಯದ ಕುರಿತು ಕಾರ್ಯಕ್ರಮ

ಭಟ್ಕಳದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಯುವ ರೆಡ್ ಕ್ರಾಸ್ ಘಟಕ, ಆಂತರಿಕ ಗುಣಮಟ್ಟ ಭರವಸಾ ಕೋಶ ಇವುಗಳ ಸಹಯೋಗದೊಂದಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬಾಯಿ ದೇಹದ ಆರೋಗ್ಯದ ಕನ್ನಡಿ ಎನ್ನುವ ವಿಷಯದ ಕುರಿತು ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಉಪಸ್ಥಿತರಿದ್ದು ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಆರ್.ನಾಯ್ಕ ಅವರು ವಿದ್ಯಾರ್ಥಿ ಜೀವನ ಅತಿ ಮುಖ್ಯವಾಗಿದ್ದು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಒಂದು ಉತ್ತಮ ಅವಕಾಶ ಇಲ್ಲಿದೆ. ಸರಕಾರಿ ಕಾಲೇಜಿನಲ್ಲಿ ಅತ್ಯುತ್ತಮ ಬೋಧಕ ಸಿಬ್ಬಂದಿಗಳಿದ್ದು ಅವರಿಂದ ಉತ್ತಮ ಶಿಕ್ಷಣ, ಮಾರ್ಗದರ್ಶನ ಹಾಗೂ ಅಗತ್ಯದ ಮಾಹಿತಿಯನ್ನು ಪಡೆದುಕೊಂಡು ಉತ್ತಮ ಪ್ರಜೆಗಳಾಗುವಂತೆ ಕೋರಿದರು. ಇನ್ನು ಮುಂದಿನ ದಿನಗಳು ಬಹಳ ಕಠಿಣ ದಿನಗಳು ಬರುತ್ತಿದ್ದು ಎಲ್ಲವೂ ಖಾಸಗೀಕರಣಗೊಳ್ಳುತ್ತಿದೆ. ಸರಕಾರದ ಕೆಲಸ ಕನಸಿನ ಕೂಸಾಗಲಿದ್ದು ಖಾಸಗೀ ಬೃಹತ್ ಕಂಪೆನಿಗಳನ್ನು ಹೊಕ್ಕುವಲ್ಲಿ ಕೌಶಲ್ಯ ವೃದ್ಧಿಸಿಕೊಳ್ಳಬೇಕಾಗುತ್ತದೆ ಎಂದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಎಲ್ಲರೂ ತಯಾರಿಗುವಂತೆ ಕರೆ ನೀಡಿದರು.

ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಾವಿತ್ರಿ ಸ್ಪೆಷಾಲಿಟಿ ಡೆಂಟಲ್ ಕೇರ್ ಇದರ ವೈದ್ಯಾಧಿಕಾರಿ ಡಾ. ರವಿ ನಾಯ್ಕ ಅವರು ಮಾತನಾಡಿ ಮನುಷ್ಯನ ಆರೋಗ್ಯ ಆತನ ಮುಖ ಚಹರೆಯಲ್ಲಿಯೇ ತಿಳಿಯುತ್ತದೆ ನಾವು ನಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳೂವುದು ಅತೀ ಮುಖ್ಯವಾಗಿದೆ. ದೇಹದ ಆರೋಗ್ಯಕ್ಕೆ ಬಾಯಿಯ ಆರೋಗ್ಯವು ಪೂರಕವಾಗಿದ್ದು ಪ್ರತಿಯೋರ್ವರೂ ಕೂಡಾ ಈ ದೆಶೆಯಲ್ಲಿ ಜಾಗೃತರಾಗಿರಬೇಕು ಎಂದರು.
ಪಿ.ಪಿ.ಟಿ.ಯು ಮೂಲಕ ಬಾಯಿ ಆರೋಗ್ಯದ ಕುರಿತು ವಿವಿಧ ಸ್ಲೈಡುಗಳನ್ನು ತೋರಿಸಿದ ಅವರು ಅಗತ್ಯದ ವಿವರಣೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಭಾಗೀರಥಿ ನಾಯ್ಕ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ನೀವು ಜೀವನದಲ್ಲಿ ಶಿಸ್ತನ್ನು ಅಳವಡಿಸಕೊಳ್ಳಬೇಕು. ಶಿಸ್ತಿನ ಜೀವನ ಆರೋಗ್ಯಕ್ಕೆ ಪೂರಕಾಗಿದ್ದು ಅಶಿಸ್ತಿನಿಂದ ಕೂಡಿದ ಜೀವನದಿಂದ ಮುಂದೆ ಭಾರೀ ಬೆಲೆ ತೆರಬೇಕಾದೀತು ಎಂದರು. ವಿದ್ಯಾರ್ಥಿ ಜೀವನದಿಂದಲೇ ಶಿಸ್ತನ್ನು ಬೆಳೆಸಿಕೊಂಡು ಮುಂದೆ ಉತ್ತಮವಾದ ಜೀವನ ನಡೆಸಲು ಸಾಧ್ಯ ಎಂದೂ ಅವರು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುರೇಶ ಮೆಟಗಾರ್, ಲಿಂಗಪ್ಪ ಗೋಟೂರು, ಹಿರಿಯ ಉಪನ್ಯಾಸಕ ಆರ್.ಜಿ. ಪಟಗಾರ ಮುಂತಾದವರು ಉಪಸ್ಥಿತರಿದ್ದರು.
ಪಾರ್ವತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರೆಡ್‌ಕ್ರಾಸ್ ಸಂಚಾಲಕ ನರಸಪ್ಪ ಕೆ.ಸಿ. ಸ್ವಾಗತಿಸಿದರು. ಉಪನ್ಯಾಸಕಿ ವೈಶಾಲಿ ಜಿ.ಆರ್. ನಿರ್ವಹಿಸಿದರು. ಉಪನ್ಯಾಸಕಿ ಪ್ರೇಮಾ ಆಚಾರಿ ವಂದಿಸಿದರು.

error: