May 16, 2024

Bhavana Tv

Its Your Channel

ರೈತರೊಂದಿಗೆ ಸಂವಾದ, ಸಭೆಯನ್ನು ಯಾವುದೋ ಸಭಾಭವನದಲ್ಲಿ ಮಾಡದೇ ರೈತರ ಮನೆ, ಜಗ್ಗುಲಿ, ಹೊಲ, ಗದ್ದೆಯಲ್ಲಿ ನಡೆಸಲು ಸೂಚನೆ- ಈರಣ್ಣ ಕಡಾಡಿ

ಭಟ್ಕಳ: ಇನ್ನು ಮುಂದೆ ರೈತರೊಂದಿಗೆ ಸಂವಾದ, ಸಭೆಯನ್ನು ಯಾವುದೋ ಸಭಾಭವನದಲ್ಲಿ ಮಾಡದೇ ರೈತರ ಮನೆ, ಜಗ್ಗುಲಿ, ಹೊಲ, ಗದ್ದೆಯಲ್ಲಿ ನಡೆಸಲು ಜಿಲ್ಲಾ ಪ್ರವಾಸದ ವೇಳೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ಅವರು ಬುಧವಾರದಂದು ಭಟ್ಕಳ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಪ್ರವಾಸದ ವೇಳೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ದೇಶದಲ್ಲಿ ಈ ಮೊದಲಿನಿಂದಲೂ ಇಂಜಿನಿಯರ, ವೈದ್ಯ ನ್ಯಾಯವಾದಿಗಳ ವೃತ್ತಿಯೂ ಅವರ ಕುಟುಂಬದಲ್ಲಿ ಮುಂದುವರೆಸಿಕೊAಡು ಹೋಗಲಿದ್ದು ಅದರಂತೆಯೇ ರೈತರ ಮಕ್ಕಳು ರೈತರೇ ಆಗಬೇಕು. ಇಂಜಿನಿಯರ, ವೈದ್ಯ, ನ್ಯಾಯವಾದಿಗಳ ವೃತ್ತಿಯಲ್ಲಿದ್ದವರು ಮುಂದೆ ಕೃಷಿ ಕ್ಷೇತ್ರದತ್ತ ಬರಬೇಕು ಎನ್ನುವ ಉದ್ದೇಶದೊಂದಿಗೆ ರೈತ ಮೋರ್ಚಾ ತನ್ನ ಕಾರ್ಯಚಟುವಟಿಕೆಯನ್ನು ಮುಂದುವರೆಸಿದೆ ಎಂದರು.

ದೇಶದಲ್ಲಿ ನಮ್ಮ ಸರಕಾರ ಮೂರು ಕೃಷಿ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ವಿರೋಧ ಪಕ್ಷವೂ ೨೦ ವರ್ಷದಿಂದ ನಡೆಸುತ್ತಿದ್ದ ಚರ್ಚೆಯಲ್ಲಿ ರಚಿಸಲಾದ ಮೂರು ತಜ್ಞರ ಸಮಿತಿಯ ಆಧಾರದಂತೆ ಜಾರಿಗೆ ತರಲಾಗಿದೆ. ಆದರೆ ಈ ಹಂತದಲ್ಲಿ ವಿರೋಧ ಪಕ್ಷವೂ ರೈತನ್ನು ಪ್ರಚೋದಿಸಿ ನಮ್ಮ ಸರಕಾರದ ವಿರುದ್ದದ ಹೋರಾಟಕ್ಕಿಳಿಸಿದ್ದರು. ಇದರಲ್ಲಿ ಯಾವ ಕಾಯ್ದೆಯೂ ರೈತರ ವಿರುದ್ಧವಾಗಿದೆ ಎಂಬುದನ್ನು ರೈತರು ತಿಳಿಸುವಲ್ಲಿ ವಿಫಲವಾಗಿದ್ದು ಪ್ರಧಾನಿ ಮೋದಿ ಅವರು ೧೮ ಬಾರಿ ಮಾತುಕತೆ ನಡೆಸಿದ್ದಾರೆ. ಸುಪ್ರಿಂ ಸಹ ಮಧ್ಯ ಪ್ರವೇಶ ಮಾಡಿ ಕಾನೂನನ್ನು ತಡೆಹಿಡಿದಿದೆ ಎಂದರು.

ನ್ಯಾಯಾಲಯದಿAದ ರಚಿತವಾದ ತಜ್ಞರ ಸಮಿತಿ ಎದುರು ಸಹ ರೈತರು ತಮ್ಮ ಮಂಡನೆಯನ್ನು ತಿಳಿಸುವಲ್ಲಿ ವಿಫಲರಾಗಿದ್ದಾರೆ. ೧೮ ತಿಂಗಳ ಕಾಲ ಕಾಯ್ದೆಯು ಲೋಕಸಭೆಯಲ್ಲಿ ಜಾರಿಯಾಗಿದ್ದರು ನಂತರ ತಡೆಹಿಡಿದರು ಸಹ ರಸ್ತೆಯನ್ನು ಬಿಟ್ಟು ಬಂದಿಲ್ಲ. ಇದೊಂದು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ. ಇದೊಂದು ರೈತ ಹೋರಾಟ ಆಗದೇ ಹೈಜಾಕ ಆಗಿದೆ ಎಂದು ಹೇಳಿದರು.
ದೇಶದಲ್ಲಿ ಈಗಾಗಲೇ ೧೦ ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಪ್ರಧಾನಿ ಮೋದಿ ಅವರದ್ದಾಗಿದೆ. ಇದರಲ್ಲಿ ರಾಜ್ಯಕ್ಕೆ ನೀಡಲಾದ ಗುರಿಯೂ ಪೂರ್ಣಗೊಂಡಿದೆ. ೭೫ನೇ ವರ್ಷದ ಸ್ವಾತಂತ್ರ‍್ಯೋತ್ಸವದ ಹಿನ್ನೆಲೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆಯ ಗುರಿಗೆ ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕೆಂದು ರಾಜ್ಯದ ರೈತ ಮೋರ್ಚಾ ಪ್ರವಾಸದ ಸಭೆಯಲ್ಲಿ ಚಿಂತನೆ ಮಾಡುತ್ತಿದ್ದೇವೆ ಎಂದರು.

ಪ್ರತಿ ವರ್ಷ ನಮ್ಮ ಸರಕಾರಗಳು ಕೇವಲ ೭೫ ಸಾವಿರ ಕೋಟಿ ರೂ.ಗಳನ್ನು ಕಿಸಾನ್ ಸಮ್ಮಾನ ನಿಧಿಯ ಮೂಲಕ ರೈತನ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ೨೦೨೦-೨೧ರ ಕೃಷಿ ಬಜೆಟನಲ್ಲಿ ಹಿಂದಿನ ಯಾವುದೇ ಸರಕಾರ ನೀಡಿದಂತಹ ಹಣವನ್ನು ಬಿಡುಗಡೆ ಮಾಡಿದ್ದು ಒಟ್ಟು ೧,೪೭,೭೫೦ ಕೋಟಿ ರೂ.ಗಳನ್ನು ರೈತರಿಗಾಗಿ ಮೀಸಲಿಟ್ಟಿದ್ದೇವೆ ಎಂದರು.

ಈ ಸಂಧರ್ಭದಲ್ಲಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ,ಜಿಲ್ಲಾ ಸಹ ಪ್ರಬಾರಿ ಪ್ರಸನ್ನ ಕೆರೆಕೈ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ್, ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಮುಂತಾದವರು ಇದ್ದರು..

error: