May 16, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ , ಉ.ಕ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಘವೇಂದ್ರ ವಿರೂಪಾಕ್ಷಪ್ಪ ಗಡೆಪ್ಪ

ಭಟ್ಕಳ: ಕನ್ನಡ ಸಾಹಿತ್ಯ ಪರಿಷತನ ಈಗಿನ ಬೆಳವಣಿಗೆ ಕುಂಠಿತವಾಗಿದ್ದು ಪ್ರಚಾರದ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆಂದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಘವೇಂದ್ರ ವಿರೂಪಾಕ್ಷಪ್ಪ ಗಡೆಪ್ಪನವರ ಹೇಳಿದರು.

ಅವರು ಗುರುವಾರದಂದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಕನ್ನಡದ ಮೇಲಿನ ಅಪಾರ ಅಭಿಮಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿರುವ ನಾಡು, ನುಡಿ, ಸಂಸ್ಕೃತಿಯನ್ನು ಬೆಳವಣಿಗೆ ಮಾಡುವ ಉದ್ದೇಶದಿಂದ ಶೀರ್ಷಿಕೆಯನ್ನು ನೋಡಿ ನಿಮ್ಮಲ್ಲಿ ಒಬ್ಬನಾಗಿ ಚುನಾವಣೆ ಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ಈ ಕನ್ನಡ ಅಭಿಮಾನಕ್ಕೆ ನೀವೆಲ್ಲರೂ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನನ್ನನ್ನು ಗೆಲ್ಲಿಸಬೇಕು ಎಂದರು.

ಸಾಹಿತ್ಯ ಪರಿಷತ್ ಗೆ ೧೦೦ ವರ್ಷದ ಇತಿಹಾಸವಿದ್ದು ಇಂದು ಅದು ವ್ಯಾಪಾರೀಕರಣವಾಗುತ್ತಿದೆ. ಆ ಕೆಲಸ ಮುಂದೆ ಆಗಬಾರದು. ಅದಕ್ಕೆ ಒಂದು ಘನತೆ ಇದೆ. ಆ ಘನತೆಯನ್ನು ಉಳಿಸಿಕೊಂಡು ಹೋಗುತ್ತೇನೆ ಹಾಗೂ ದಾಂಡೇಲಿ ಮೂಲದವನಾಗಿದ್ದ ನಾನು ೧೬ ವರ್ಷದಿಂದ ವಿವಿಧ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದು, ವಕೀಲನಾಗಿ ವೃತ್ತಿ ಕೆಲಸ ಮಾಡುತ್ತಿದ್ದೇನೆ ಎಂದ ಅವರು ಸಾಹಿತ್ಯ ಪರಿಷತ್ ಹಿರಿಯ ಸಾಹಿತಿಗಳ ವಿದ್ವಾಂಸರ ಕೊಡುಗೆ ಆಗಿದ್ದರಿಂದ ಅಂತಹ ಹಿರಿಯರನ್ನು ಹಂತ ಹಂತವಾಗಿ ಗೌರವಿಸುವ ಜೊತೆಗೆ ನಿಷ್ಕಾಮ ಪ್ರೀತಿಯಿಂದ ಹಿರಿಯ ಪಟ್ಟಿ ಮಾಡಿ ಪ್ರೋತ್ಸಾಹಿಸುತ್ತೇನೆ ಎಂದರು.

ಪ್ರತಿ ವಾರ್ಷಿಕ ಆಯ ವ್ಯಯ ಪತ್ರವನ್ನು ಸಾರ್ವಜನಿಕರ ಸಭೆಯಲ್ಲಿ ಬಹಿರಂಗ ಪಡಿಸುವ ಜೊತೆಯಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟ ಪರಿಷತ್ತಿಗೆ ನಾನು ಕೃತಘ್ನನಾಗಿರುತ್ತೇನೆ. ಜಿಲ್ಲೆಯಲ್ಲಿ ಪ್ರತಿಯೊಬ್ಬ ಸದಸ್ಯನಿಗೆ ಪರಿಷತ್ ನ ಆಗು ಹೋಗುಗಳ ಬಗ್ಗೆ ವಿವರಿಸುತ್ತೇನೆ. ಗಡಿನಾಡ ಭಾಗದ ಕನ್ನಡ ಶಾಲೆಯನ್ನು ಆಗಾಗ ಸಂದರ್ಶಿಸಿ ಕನ್ನಡದ ಸಮಸ್ಯೆ ಬಗೆಹರಿಸಲು ಸಂಬAಧ ಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಲಿದ್ದೇನೆ. ಹಾಗೂ ಜಿಲ್ಲೆಯಲ್ಲಿ ಕನ್ನಡಿಗರಿಗೆ ಸ್ಥಳೀಯ ಖಾಸಗಿ ಸಂಸ್ಥೆಯಲ್ಲಿ ನೌಕರಿ ಸಿಗುವಂತೆ ಹಾಗೂ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಪ್ರಯತ್ನ ನನ್ನಿಂದಾಗಲಿದೆ. ಮುಖ್ಯವಾಗಿ ಪರಿಷತ್ ನಲ್ಲಿ ಹಣದ ವಿಷಯದಲ್ಲಿ ಪಾರದರ್ಶಕತೆ ಕಾಪಾಡುತ್ತೇನೆ ಎಂದರು.

ಉತ್ತರ ಕನ್ನಡ ಕಸಾಪದ ಪ್ರಚಾರದ ಕೊರತೆಯಿಂದಾಗಿ ಈಗಿರುವ ಸದಸ್ಯರ ಸಂಖ್ಯೆ ಬಹಳ ಕಡಿಮೆ ಇರುವುದು ಬೇಸರ ತಂದಿದೆ. ಹಾಗೂ ಈ ಚುನಾವಣೆಯಲ್ಲಿ ಲಕ್ಷಗಟ್ಟಲೇ ಹಣವನ್ನು ವ್ಯಯಮಾಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅದನ್ನು ಬಿಟ್ಟು ಸೇವಾ ಮನೋಭಾವನೆ ಇಂದ ಚುನಾವಣೆಗೆ ಸ್ಪರ್ಧಿಸಲಿ ಎಂದರು.

ಈ ಸಂದರ್ಭದಲ್ಲಿ ಹಿತೈಷಿಗಳಾದ ಅಕ್ರಮ ಖಾನ್, ಸಂದೀಪ ಭಂಡಾರಿ ಇದ್ದರು

error: