May 16, 2024

Bhavana Tv

Its Your Channel

ಐ.ಆರ್.ಬಿ ಕಾಮಗಾರಿ ವಿರುದ್ಧ ಭಟ್ಕಳದಲ್ಲಿ ನಾಗರಿಕ ಸಭೆ

ಭಟ್ಕಳ ನಗರದಲ್ಲಿ ಸಭೆ ಸೇರಿದ್ದ ನಾಗರೀಕರು ಪರಸ್ಪರ ಚರ್ಚಿಸಿ ಹೆದ್ದಾರಿ ಇಲಾಖೆಯವರು ಭಟ್ಕಳ ನಗರದಲ್ಲಿ ಮೂಲ ಡಿಸೈನ್ ಇದ್ದಂತೆಯೇ ಹೆದ್ದಾರಿಯನ್ನು ಮಾಡಬೇಕು ಎನ್ನುವ ಕುರಿತು ಒತ್ತಡ ತರಬೇಕು. ಒಂದು ವೇಳೆ ಹೆದ್ದಾರಿ ಇಲಾಖೆ, ಐ.ಆರ್.ಬಿ. ಇದಕ್ಕೆ ಒಪ್ಪದೇ ಇದ್ದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿ ಹೆದ್ದಾರಿ ಕಾಮಗಾರಿಯನ್ನು ಆರಂಭಿಸದAತೆ ತಡೆಯಬೇಕು ಎನ್ನುವ ನಿರ್ಣಯವನ್ನು ಕೈಗೊಳ್ಳಲಾಯಿತು.

ನಗರ ಮಧ್ಯದಲ್ಲಿ ಹಾದು ಹೋಗುವ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಆರಂಭವಾಗುವ ಮೊದಲೇ ನಗರದಲ್ಲಿ ಪಿಲ್ಲರ್‌ಗಳನ್ನು ಹಾಕಿ ಫ್ಲೆöÊ ಓವರ್ ಮಾಡಬೇಕು ಯಾವುದೇ ಕಾರಣಕ್ಕೂ ಮಣ್ಣು ತುಂಬಿ ರ‍್ಯಾಂಪ್ ಮಾಡುವುದು ಸೂಕ್ತವಲ್ಲ ಎಂದು ಮನವರಿಕೆ ಮಾಡಿಕೊಟ್ಟ ನಂತರವೇ ಹೆದ್ದಾರಿ ಇಲಾಖೆ ನಗರದಲ್ಲಿ ೩೦೦ ಮೀಟರ್ ಫ್ಲೆöÊ ಓವರ್ ಮಾಡಲು ಒಪ್ಪಿಗೆ ಸೂಚಿಸಿದ್ದಲ್ಲದೇ ಅದೇ ರೀತಿಯಾಗಿ ನೀಲಿ ನಕ್ಷೆಯನ್ನು ತಯಾರಿಸಿತ್ತು. ಆದರೆ ಮುಂದಿನ ದಿನಗಳಲ್ಲಿ ಹೆದ್ದಾರಿ ಕಾಮಗಾರಿ ಆರಂಭವಾದರೂ ನಗರದಲ್ಲಿ ಮಾತ್ರ ಹಾಗೆಯೇ ಬಿಟ್ಟು ಈಗ ತರಾತುರಿಯಲ್ಲಿ ಮಣ್ಣು ತುಂಬಿ ರ‍್ಯಾಂಪ್ ಮಾಡಿ ಹೆದ್ದಾರಿ ಕಾಮಗಾರಿಯನ್ನು ಮುಗಿಸಲು ಹೊರಟಿರುವುದಲ್ಲದೇ ಈ ಬಗ್ಗೆ ಪ್ರಶ್ನಿಸಿದರೆ ಹಣಕಾಸಿನ ಲೆಕ್ಕಾಚಾರ ಮುಂದಿಡುವ ಜಾಣತನ ತೋರಿಸುತ್ತಿದ್ದಾರೆ. ಎನ್ನುವ ಅಭಿಪ್ರಾಯ ನಾಗರೀಕರ ಸಭೆಯಲ್ಲಿ ವ್ಯಕ್ತವಾಯಿತು.

ಈ ಬಗ್ಗೆ ನಗರದಲ್ಲಿ ಸಭೆ ಸೇರಿದ್ದ ನಾಗರೀಕರು ಪರಸ್ಪರ ಚರ್ಚಿಸಿ ಹೆದ್ದಾರಿ ಇಲಾಖೆಯವರು ಭಟ್ಕಳ ನಗರದಲ್ಲಿ ಮೂಲ ಡಿಸೈನ್ ಇದ್ದಂತೆಯೇ ಹೆದ್ದಾರಿಯನ್ನು ಮಾಡಬೇಕು ಎನ್ನುವ ಕುರಿತು ಒತ್ತಡ ತರಬೇಕು. ಒಂದು ವೇಳೆ ಹೆದ್ದಾರಿ ಇಲಾಖೆ, ಐ.ಆರ್.ಬಿ. ಇದಕ್ಕೆ ಒಪ್ಪದೇ ಇದ್ದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿ ಹೆದ್ದಾರಿ ಕಾಮಗಾರಿಯನ್ನು ಆರಂಭಿಸದAತೆ ತಡೆಯಬೇಕು ಎನ್ನುವ ನಿರ್ಣಯವನ್ನು ಸಹ ಮಾಡಲಾಯಿತು. ಈ ಹಿಂದೆ ಇದ್ದ ಹೆದ್ದಾರಿ ವಿನ್ಯಾಸವನ್ನು ತರಾತುರಿಯಲ್ಲಿ ಮಾಡಿ ಮುಗಿಸುವ ಉದ್ದೇಶದಿಂದ ಬದಲಿಸಿದರೆ ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ. ನಾಗರೀಕರ ಒಪ್ಪಿಗೆ ಇಲ್ಲದೇ ಯಾವುದೇ ಕಾಮಗಾರಿಯನ್ನು ಮಾಡುವಂತಿಲ್ಲ ಎನ್ನುವ ಅಭಿಪ್ರಾಯವೂ ಕೂಡಾ ವ್ಯಕ್ತವಾಯಿತು.
ಭಟ್ಕಳ ನಗರ ಅತ್ಯಂತ ಸುಂದರ ನಗರವಾಗಿದ್ದು ಇಲ್ಲಿ ಹೆದ್ದಾರಿಯಂಚಿನಯಲ್ಲಿಯೇ ಬಸ್ ನಿಲ್ದಾಣ ಇದೆ, ಅಲ್ಲದೇ ಬೃಹತ್ ನೈಸರ್ಗಿಕ ಬಂದರಕ್ಕೆ ಹೋಗುವುದಕ್ಕೆ ಸಂಪರ್ಕ ರಸ್ತೆಯೂ ಕೂಡಾ ಹೆದ್ದಾರಿಯಿಂದಲೇ ಇದ್ದು ಒಂದು ವೇಳೆ ರ‍್ಯಾಂಪ್ ಮಾಡಿ ಮಣ್ಣೂ ತುಂಬಿಸಿದ್ದೇ ಆದಲ್ಲಿ ಭಟ್ಕಳ ಬಸ್ ನಿಲ್ದಾಣಕ್ಕೆ ಹೋಗಲು ಅರ್ಧ ಕಿ.ಮಿ. ಸುತ್ತು ಹಾಕಬೇಕಾಗುತ್ತದೆ. ಇದೇ ರಸ್ತೆಗೆ ಹೊಂದಿಕೊAಡು ಸಾಗರ ರಸ್ತೆ ಇದ್ದು ಇಲ್ಲಿ ಕಾಲೇಜು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ಇದೆ, ಅಲ್ಲದೇ ಬಂದರಿಗೆ ಹೋಗುವ ನೂರಾರು ವಾಹನಗಳಿಗೆ, ಮೀನುಗಾರರಿಗೆ ವೃಥಾ ತೊಂದರೆಯಾಗಲಿದೆ ಎನ್ನುವ ಮಾತು ಸಭೆಯಲ್ಲಿ ಕೇಳಿ ಬಂತು. ಭಟ್ಕಳ ನಗರದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಾಹನಗಳಿದ್ದು ಹೆದ್ದಾರಿಯ ಅಕ್ಕಪಕ್ಕದಲ್ಲಿ ಸರ್ವಿಸ್ ರಸ್ತೆಯನ್ನು ನೀಡದೇ ಇದ್ದಲ್ಲಿ ದಿನಾಲೂ ಅಪಘಾತಗಳಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ಎರಡೂ ಕಡೆಗಳಲ್ಲಿ ಸರ್ವಿಸ್ ರಸ್ತೆಯ ಅವಶ್ಯಕತೆ ಇದ್ದು ಈ ಹಿಂದೆ ಸರ್ವಿಸ್ ರಸ್ತೆ ಪ್ರಸ್ತಾಪ ಇರುವುದನ್ನು ಏಕಾ ಎಕಿ ಕೈಬಿಡಲು ಕಾರಣ ಮಾತ್ರ ತಿಳಿದಿಲ್ಲ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಈ ಹಿಂದೆ ಫ್ಲೆöÊ ಓವರ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದ ಹೆದ್ದಾರಿ ಇಲಾಖೆ ಈಗ ವೆಚ್ಚದ ಕುರಿತು ಮಾತನಾಡುತ್ತಿದೆ. ಅನೇಕ ಕಡೆಗಳಲ್ಲಿ ಈಗಾಗಲೇ ಮೂಲ ನಕ್ಷೆಯನ್ನ ಬದಲಿಸಿ ವೆಚ್ಚ ಕಡಿಮೆ ಮಾಡಿಕೊಂಡಿದ್ದರೂ ಮತ್ತೆ ನಗರದಲ್ಲಿಯೂ ಕೂಡಾ ವೆಚ್ಚ ಕಡಿಮೆ ಮಾಡುವುದು ಸರಿಯಲ್ಲ ಇಲ್ಲಿ ಸಾವಿರಾರು ಜನರ ಜೀವದ ಜೊತೆ ಚೆಲ್ಲಾಟ ಆಡಲು ಬಿಡುವುದಿಲ್ಲ ಎನ್ನುವುದು ನಾಗರೀಕರ ಅಭಿಪ್ರಾಯವಾಗಿದೆ. ಒಂದು ಅಭಿಪ್ರಾಯದ ಪ್ರಕಾರ ಐ.ಆರ್.ಬಿ. ಕಂಪೆನಿಗೆ ನೀಡಿದ್ದ ಅವಧಿ ಮುಗಿದು ಮುಂದುವರಿಸಿದ್ದ ಅವಧಿಯೂ ಕೂಡಾ ಮುಗಿಯುತ್ತಾ ಬಂದಿದೆ. ಇನ್ನು ಪಿಲ್ಲಾರ್ ಹಾಕಿ ಫ್ಲೆöÊ ಓವರ್ ನಿರ್ಮಾಣ ಮಾಡುವುದು ಕಷ್ಟ ಸಾಧ್ಯವಾದ್ದರಿಂದ ರ‍್ಯಾಂಪ್ ಮಾಡಿ ಆದಷ್ಟು ಬೇಗ ಕೆಲಸ ಮುಗಿಸುವ ಹುನ್ನಾರದಲ್ಲಿದೆ. ಈ ರೀತಿ ರಾಷ್ಟಿçÃಯ ಹೆದ್ದಾರಿ ವಿನ್ಯಾಸವನ್ನೇ ಪದೇ ಪದೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿದರೆ ಜನ ಸಾಮಾನ್ಯರಿಗಾಗುವ ತೊಂದರೆಗೆ ಯಾರು ಹೊಣೆ ಎನ್ನುವ ಮಾತು ಕೇಳಿ ಬಂತು.
ಒಟ್ಟಾರೆ ಭಟ್ಕಳ ನಗರದಲ್ಲಿ ಈ ಹಿಂದೆ ಇದ್ದ ನಕ್ಷೆಯಂತೆಯೇ ಹೆದ್ದಾರಿಯನ್ನು ಮಾಡಿಕೊಂಡು ಹೋಗಬೇಕು, ಯಾವುದೇ ಕಾರಣಕ್ಕೂ ಮಣ್ಣು ತುಂಬಿ ರ‍್ಯಾಂಪ್ ಮಾಡಲು ಬಿಡುವುದಿಲ್ಲ ಎನ್ನುವ ಅಭಿಪ್ರಾಯದೊಂದಿಗೆ ಸಭೆ ಮುಕ್ತಾಯವಾಯಿತು.
ಸಭೆಯಲ್ಲಿ ಶಾಸಕ ಸುನಿಲ್ ನಾಯ್ಕ ಅವರ ಗೌರವಾಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ಮಾಡಿಕೊಂಡು ರಿಕ್ಷಾ ಯೂನಿಯನ್, ಟೆಂಪೋ ಯೂನಿಯನ್, ಪ್ರಮುಖ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಮುಂದಿನ ಹೋರಾಟದ ರೂಪುರೇಷೆ ಮಾಡುವಂತೆ ನಿರ್ಣಯಿಸಲಾಯಿತು. ಸಭೆಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ಭಟ್ಕಳ ಅರ್ಬನ್ ಬ್ಯಾಂಕ ಉಪಾಧ್ಯಕ್ಷ ಎಮ್.ಆರ್.ನಾಯ್ಕ, ತಂಝೀಮ್ ಅಧ್ಯಕ್ಷ ಎಸ್. ಎಂ. ಪರ್ವೇಜ್, ಹೆದ್ದಾರಿ ಹೋರಾಟ ಸಮಿತಿಯ ರಾಜೇಶ ನಾಯಕ, ತಂಜೀಮ್ ಉಪಾಧ್ಯಕ್ಷ ಅತೀರ‍್ರೆಹಮಾನ್ ಮುನೀರಿ, ಇನಾಯತುಲ್ಲಾ ಶಾಬಂದ್ರಿ, ಸತೀಶ್ ಕುಮಾರ್ ನಾಯ್ಕ, ಎಂ.ಎಸ್. ಮೊಹತೆಶಂ, ಸಂತೋಷ ನಾಯ್ಕ, ಅಬ್ದುರ್ ರಕೀಬ್ ಎಂ.ಜೆ., ಅಬ್ದುಲ್ ಮಾಜೀದ್, ಕೆ.ಎಂ. ಅಷ್ಫಾಕ್ ಮುಂತಾದವರು ಉಪಸ್ಥಿತರಿದ್ದರು.

error: