May 15, 2024

Bhavana Tv

Its Your Channel

73 ನೇ ಗಣರಾಜ್ಯೋತ್ಸವದಲ್ಲಿ ಚಿತ್ರಾಪುರದ ದೈಹಿಕ ಶಿಕ್ಷಕರಾದ ರಾಮದಾಸ ಆಗೇರರಿಗೆ ಸನ್ಮಾನ

ಭಟ್ಕಳ:-73 ನೇ ಗಣರಾಜ್ಯೋತ್ಸವದ ಶುಭ ದಿನದಂದು ಭಟ್ಕಳ ತಾಲೂಕು ಆಡಳಿತ ವತಿಯಿಂದ ನಡೆಯುವ ಕ್ರೀಡಾ ಸಾಧಕರ ಸನ್ಮಾನಕ್ಕೆ ಸ.ಮಾ.ಹಿ.ಪ್ರಾ.ಶಾಲೆ ಚಿತ್ರಾಪುರದ ದೈಹಿಕ ಶಿಕ್ಷಕರಾದ ರಾಮದಾಸ ಆಗೇರ ಭಾಜನರಾಗಿದ್ದಾರೆ. ಇವರು ಶಿಕ್ಷಣ ಇಲಾಖೆಯಲ್ಲಿ 16 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು.ಕ್ರೀಡಾ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ರಾಜ್ಯಮಟ್ಟ ದಿಂದ ರಾಷ್ಟ್ರಮಟ್ಟದವರೆಗೂ ಕಳುಹಿಸುತ್ತಿದ್ದಾರೆ.

ಪ್ರಸ್ತುತ ಸ.ಮಾ.ಹಿ.ಪ್ರಾ.ಶಾಲೆ ಚಿತ್ರಾಪುರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸತತ 4 ವರ್ಷಗಳಲ್ಲಿ 9 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸುವುದರ ಜೊತೆಗೆ ಇದೇ ಶಾಲೆಯ ವಿದ್ಯಾರ್ಥಿ
ಕುಲದೀಪಕುಮಾರ 2018-19 ನೇ ಸಾಲಿನ ಪ್ರಾಥಮಿಕ ಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಚಕ್ರ ಎಸೆತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಊರಿನ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದು ಇದರ ಶ್ರೇಯಸ್ಸು ವಿದ್ಯಾರ್ಥಿಯ ಸತತ ಪ್ರಯತ್ನದ ಜೊತೆಗೆ ದೈಹಿಕ ಶಿಕ್ಷಕ ರಾಮದಾಸ ಆಗೇರರವರ ಸತತ ತರಬೇತಿಗೆ ಸಲ್ಲುತ್ತದೆ.
ಇದೇ ವರ್ಷ ಹರಿಯಾಣ ರಾಜ್ಯದ ರೋತಕನಲ್ಲಿ ನಡೆದ ರಾಷ್ಟ್ರಮಟ್ಟದ ಯು-14 ಕ್ರೀಡಾಕೂಟದಲ್ಲಿ ಚಕ್ರವನ್ನು 47 ಮೀಟರ ಎಸೆಯುವುದರ ಮೂಲಕ ಪೈನಲ್ ತಲುಪಿ ಜಿಲ್ಲೆಗೆ ಕೀರ್ತಿ ತಂದಿರುತ್ತಾನೆ.ಇವರ ಮಾರ್ಗದರ್ಶನದಲ್ಲಿ ಬೆಳೆದ ಶಿಷ್ಯ ಕುಲದೀಪಕುಮಾರ ಜಗತ್ಪಾಲ ಕಶ್ಯಪ್ ,2019 ರಲ್ಲಿ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಚಕ್ರವನ್ನು 48.58 ಮೀಟರ್ ಎಸೆಯುವುದರ ಮೂಲಕ ಯು-14 ಬಾಲಕರ ಚಕ್ರ ಎಸೆತದ ಕರ್ನಾಟಕದ ನೂತನ ದಾಖಲೆಗೂ ಕಾರಣನಾಗಿದ್ದಾನೆ.
ಕೇವಲ ವ್ಯಯಕ್ತಿಕ ಆಟಗಳಲ್ಲದೇ ಇವರ ಶಾಲಾ ವಿದ್ಯಾರ್ಥಿಗಳು ಗುಂಪು ಆಟಗಳಾದ ಖೋಖೋ, ಕಬಡ್ಡಿ,ಥ್ರೋಬಾಲ್ ,ರಿಲೆ ಓಟಗಳಲ್ಲಿ ಜಿಲ್ಲೆ ಹಾಗೂ ವಿಭಾಗ ಮಟ್ಟದವರೆಗೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗೆಯೇ ಪ್ರತಿವರ್ಷವೂ ಯುವಜನಸೇವಾ ಇಲಾಖೆಯವರು ನಡೆಸುವ ಕ್ರೀಡಾಪಟುಗಳ ಆಯ್ಕೆಯಲ್ಲಿ ಇವರ ಶಾಲಾ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ.
ಹಾಗೆಯೇ ರಾಮದಾಸ ಆಗೇರವರು ಸೇವಾದಳದ ಶಿಕ್ಷಕರಾಗಿ ಮಕ್ಕಳಲ್ಲಿ ಶಿಸ್ತು ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುತ್ತಿದ್ದಾರೆ.ಇವರ ಸೇವಾದಳದ ವಿದ್ಯಾರ್ಥಿ ತಂಡಗಳು ಜಿಲ್ಲಾಮಟ್ಟಕ್ಕೆ ಪಥಸಂಚಲನದಲ್ಲಿ ಆಯ್ಕೆಯಾಗುತ್ತಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾಗುವ ಸಂವೇದ ಇ ಕಲಿಕಾ ಕಾರ್ಯಕ್ರಮದಲ್ಲಿ 6 ನೇ ತರಗತಿಯ ದೈಹಿಕ ಶಿಕ್ಷಣದ ಮನರಂಜನೆ ಪಾಠವನ್ನು ನೀಡುವುದರ ಮೂಲಕ ಶಿಕ್ಷಣ ಇಲಾಖೆಯ ಎಲ್ಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.ಹಾಗೆಯೇ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳ ಕ್ರೀಡಾ ತರಬೇತಿಯನ್ನು ನೀಡುತ್ತಿದ್ದು ಚಿತ್ರಾಪುರ ಊರಿನ ನಾಗರಿಕರ ಹಾಗೂ ಸುತ್ತಮುತ್ತ ಶಿಕ್ಷಕ ವೃಂದದವರ ಪ್ರೀತಿ ,ವಿಶ್ವಾಸ,ಗೌರವಕ್ಕೆ ಪಾತ್ರರಾಗಿದ್ದಾರೆ.ಇವರ ಕ್ರೀಡಾಸಾಧನೆಗೆ ಅರ್ಹ ಪ್ರಶಸ್ತಿ ತಾಲೂಕು ಆಡಳಿತ ನೀಡಿ ಗೌರವಿಸಿದೆ . ಇವರ ಸೇವೆಯಿಂದ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಹಾರೈಸೋಣ

error: