May 2, 2024

Bhavana Tv

Its Your Channel

ಭಟ್ಕಳ ತರಬಿಯತ್ ಎಜ್ಯುಕೇಶನ್ ಸೊಸೈಟಿ ಯ ಐ.ಸಿ.ಎಸ್.ಇ ಪಠ್ಯಕ್ರಮದ ನ್ಯೂಶಮ್ಸ್ ಶಾಲೆಯಲ್ಲಿ ವಾರ್ಷಿಕ ಸಾಂಸ್ಕೃತಿಕ ಕಲೋತ್ಸವ

ಭಟ್ಕಳ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಐ.ಸಿ.ಎಸ್.ಇ ಪಠ್ಯಕ್ರಮದ ನ್ಯೂಶಮ್ಸ್ ಶಾಲೆಯಲ್ಲಿ ಗುರುವಾರ ವಾರ್ಷಿಕ ಸಾಂಸ್ಕೃತಿಕ ಕಲೋತ್ಸವ ಜರುಗಿತು.
ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳ ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಮೋಂಟೆಸ್ಸರಿ ಮಕ್ಕಳ ಪ್ರತಿಭೆಗಳನ್ನು ಕಂಡು ಮಾರುಹೋದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳ ಜೀವನದಲ್ಲಿ ಶಾಲಾಶಿಕ್ಷಣ ಯಾವರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸಿದರು.ಡಿಜಿಟೀಕರಣದ ಈ ಕಾಲದಲ್ಲಿ ವಿದ್ಯಾರ್ಥಿಗಳನ್ನು ಪ್ರಾಯೋಗಿಕವಾಗಿ ರೂಪಿಸಬೇಕಿದೆ ಎಂದ ಅವರು ಪಾಲಕರು ಸಹ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.
ಮೋAಟೇಸ್ಸರಿ ವಿದ್ಯಾರ್ಥಿಗಳು ಡಾ.ಬಾಬಾ ಸಾಹೇಬ್, ಅಂಬೇಡ್ಕರ್, ಎಪಿಜೆಅಬ್ದುಲ್ ಕಲಾಂ, ಇಂದಿರಾಗಾAಧೀ ಮತ್ತಿತರ ಮಹಾನ್ ವ್ಯಕ್ತಿಗಳ ರೂಪವನ್ನು ಧರಿಸಿ ವೇದಿಕೆಯಲ್ಲಿ ಐತಿಹಾಸಿಕ ವಾತವರಣ ಸೃಷ್ಟಿಸಿದ್ದರು.
ಈ ಸಂದರ್ಭದಲ್ಲಿ ಸ್ನೇಹಾ ವಿಶೇಷ ಶಾಲೆಯ ಮಾಲತಿ ಉದ್ಯಾವರ್, ಪುರಸಭೆ ಆರೋಗ್ಯಾಧಿಕಾರಿ ಸೋಜಿಯ ಸೋನಿ, ಕಾರ್ಯದರ್ಶಿ ಅನಂ ಆಲಾ ಎಂ.ಟಿ, ಮತ್ತಿತರರು ಉಪಸ್ತಿತರಿದ್ದರು. ಪ್ರಾಂಶುಪಾಲ ಲಿಯಾಖತ್ ಅಲಿ ಅಧ್ಯಕ್ಷತೆ ವಹಿಸಿದ್ದರು.

error: