May 15, 2024

Bhavana Tv

Its Your Channel

ಮಂಕಿ ಠಾಣೆ ಪಿಎಸೈ ಅಶೋಕ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ವತಿಯಿಂದ ಭಟ್ಕಳ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಕೆ

ಭಟ್ಕಳ: ಮಂಕಿ ಠಾಣೆ ಪಿಎಸೈ ಅಶೋಕ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ವತಿಯಿಂದ  ಭಟ್ಕಳ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದರು

ಟ್ಯಾಕ್ಸಿ ಚಾಲಕ ಗಣಪತಿ ಹರೀಶ ನಾಯ್ಕ ಕುಮಟಾದಿಂದ ಧರ್ಮಸ್ಥಳಕ್ಕೆ ಬಾಡಿಗೆಗೆ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ ೬೬ ಅನಂತವಾಡಿ ಚೆಕ್ ಪೋಸ್ಟ್ ಬಳಿ ಮಂಕಿ   ಪಿಎಸೈ ಅಶೋಕ ಟ್ಯಾಕ್ಸಿ ಯನ್ನು ಪರಿಶೀಲಿಸಲು ನಿಲ್ಲಿಸಲು ಸೂಚಿಸಿದ್ದಾರೆ. ರಾತ್ರಿ ವೇಳೆ ಹೆದ್ದಾರಿಯ ಮಧ್ಯದಲ್ಲಿ ಟ್ಯಾಕ್ಸಿ ನಿಲ್ಲಿಸುವುದು ತಪ್ಪು  ಎಂದು ಸ್ವಲ್ಪ ಮುಂದೆ ಹೋಗಿ ಟ್ಯಾಕಿಯನ್ನು ಸೈಡ್ ನಿಲ್ಲಿಸುತ್ತಿರುವ ವೇಳೆ ಉದ್ರೇಕದಿಂದ ಬಂದ ಪಿಎಸೈ ಅಶೋಕ ಎನ್ನುವವರು ಅವಾಚ್ಯ ಶಬ್ದದಿಂದ ಬೈದು ಬಂದು ಏಕಾಏಕಿ ಹೊಡೆದು ಟ್ಯಾಕಿಯ ಆರ್.ಸಿ ಕಾರ್ಡ್ ಮತ್ತು ಲೈಸನ್ಸ್  ಪಡೆದುಕೊಳ್ಳುತ್ತಾರೆ. ೬ ರಿಂದ ೮ ಸಾವಿರ ಹಣವನ್ನು ಕೇಳಿದ್ದಾರೆ. ನಂತರ ಟ್ಯಾಕ್ಸಿ  ಚಾಲಕ ಹರೀಶ ನಾಯ್ಕ ದಂಡ ಹಣವನ್ನು ಕೋರ್ಟ್ ನಲ್ಲಿ ತುಂಬುತ್ತೇನೆ ಎಂದು ಹೇಳಿದಾಗ ಅದರಿಂದ ಮತ್ತು ಉದ್ರೇಕಗೊಂಡವರು ನನ್ನ ಗಾಡಿಯಲ್ಲಿ ಇರುವ ಜನರ ಮುಂದೆ ನನ್ನನ್ನು ಅವಾಚ್ಯ ಶಬ್ದದಿಂದ ಬೈದಿದ್ದಾರೆ ಹಾಗೂ ನಂತರ ಸೀಟ್ ಬೆಲ್ಟ್ ಮತ್ತು ಸಮವಸ್ತ್ರ ಧರಿಸಿಲ್ಲವೆಂದು ಹೊನ್ನಾವರದ ಕೋರ್ಟ್ ನಲ್ಲಿ ದಂಡ ತುಂಬಲು ಹೇಳಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ

ಈ ವೇಳೆ ಮಾತನಾಡಿದ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ಜಿಲ್ಲಾಧ್ಯಕ್ಷ ನವೀನ ನಾಯ್ಕ ಮಾತನಾಡಿ ಓರ್ವ ಟ್ಯಾಕ್ಸಿ ಚಾಲಕನ ಮೇಲೆ ಪಿ.ಎಸ್.ಐ ಈ ರೀತಿ ಹಲ್ಲೆ ಮಾಡಿರುವುದು ತಪ್ಪು ಇದನ್ನು ನಮ್ಮ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ಖಂಡಿಸಿದೆ. ಹಾಗೂ ವಾಹನ ಪರವಾನಿಗೆ ಪತ್ರವನ್ನು  ಕಸಿದುಕೊಂಡು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಇದರಿಂದ ಟ್ಯಾಕ್ಸಿ ಚಾಲಕ ಹರೀಶ ನಾಯ್ಕ ಟ್ಯಾಕಿ ಚಾಲನೆ ಮಾಡದೆ ಹಾಗೂ ನಿಲ್ಲಿಸಿದ್ದಾರೆ ಇದಕ್ಕೆ ಕಾರಣರಾದ ಪಿ.ಎಸ್.ಐ ಅಶೋಕ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ನಮ್ಮ ಚಾಲಕರ ಮೇಲೆ ಈ ರೀತಿ ದೌರ್ಜನ್ಯ ನಡೆಯ ಬಾರದು ಇಂದೊAದು ಎಚ್ಚರಿಕೆ ಎಂದ ಅವರು ಜಿಲ್ಲೆಯಲ್ಲಿ ವೈಟ್ ಬೋರ್ಡ್ ಕಾರುಗಳ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಕೂಡ ಮನವಿ ಮಾಡಿಕೊಂಡರು

ನAತರ ಡಿ.ವೈ.ಎಸ್ಪಿ ಕೆ.ಯು ಬೆಳ್ಳಿಯಪ್ಪ ಮನವಿ ಸ್ವೀಕರಿಸಿ ಈ ಬಗ್ಗೆ ವಿಚಾರಣೆ ನಡೆಸಿ ಘಟನೆ ನಡೆದಿರುವುದು ಸತ್ಯ ಎಂದು ತಿಳಿದು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೆವೆ ಎಂದ ಅವರು ಮುಂದಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ಟ್ಯಾಕ್ಸಿ ಚಾಲಕರಿಗೆ ಈ ರೀತಿ ತೊಂದರೆ ಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನವೀನ ನಾಯ್ಕ ಕುಮಟಾ, ರಕ್ಷಾಧಿಕರಿ ಮಜೀದ್ ಭಟ್ಕಳ,ಕಾರ್ಯದರ್ಶಿ ಮೋಹನ್ ಭಟ್ಕಳ ,ರಂಜನ್ ದೇವಾಡಿಗ ಮುರ್ಡೇಶ್ವರ ಫಾರೂಕ್ ಮುರ್ಡೇಶ್ವರ,ಶ್ರೀಕಾಂತ್ ಹೊನ್ನಾವರ
ಸಂದೀಪ್ ಹೊನ್ನಾವರ, ಸಂದೀಪ್ ಯಲ್ಲಾಪುರ , ಶ್ರೀನಿವಾಸ ಅಂಕೋಲಾ ,ಸುಬ್ಬು ಕುಮಟಾ,ಫೈಸಲ್ ಭಟ್ಕಳ,ಮಂಜು ಭಟ್ಕಳ,ಫೈರೋಜ್ ಭಟ್ಕಳ, ಫ್ರಾನ್ಸಿಸ್ ಕಾರವಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: