May 13, 2024

Bhavana Tv

Its Your Channel

ತೆಂಗಿನಗುoಡಿ ಬಂದರು ಜಟ್ಟಿಯಲ್ಲಿ ಟಿಪ್ಪರ್ ನಿಯಂತ್ರಣ ತಪ್ಪಿ ಆಳಕ್ಕೆ

ಭಟ್ಕಳ: ಕಳೆದ ಮಂಗಳವಾರ ಸಂಭವಿಸಿದ ಭಟ್ಕಳ ತಾಲೂಕಿನ ತೆಂಗಿನಗುAಡಿ ಬಂದರು ಜಟ್ಟಿಗೆ ಹೊಂದಿಕೊoಡ ಕಾಂಕ್ರೀಟ್ ಪ್ರದೇಶದ ಕುಸಿತ ಘಟನೆಗೆ ಸಂಬoಧಿಸಿದoತೆ, ಬಂದರು ಹಾಗೂ ಮೀನುಗಾರಿಕಾ ಇಲಾಖೆ ಆರಂಭಿಸಿರುವ ದುರಸ್ತಿ ಕಾರ್ಯಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.

ಬಂದರು ಪ್ರದೇಶದ ಕುಸಿತ ಪ್ರದೇಶಕ್ಕೆ ಕಲ್ಲು ತುಂಬಿಸಲು ಬಂದ ಟಿಪ್ಪರ್, ಗುಂಡಿಯ ಅಂಚಿಗೆ ಬಂದು ನಿಯಂತ್ರಣ ತಪ್ಪಿ ಆಳಕ್ಕೆ ಬಿದ್ದಿದ್ದು,ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಜಟ್ಟಿಗೆ ಹೊಂದಿಕೊAಡು ಬಂದರು ಪ್ರದೇಶದ ಉದ್ದಕ್ಕೂ, ಆಳದಲ್ಲಿ ಮರಳು ಜಾರಿರುವ ಸಾಧ್ಯತೆ ಕಂಡು ಬಂದಿದ್ದು, ಮತ್ತಷ್ಟು ಸಿಮೆಂಟ್ ಕಾಂಕ್ರಿಟ್ ಹೊದಿಕೆ ಕುಸಿಯುವ ಭೀತಿ ಎದುರಾಗಿದೆ.
ಪರಿಣಾಮವಾಗಿ ಕಳೆದ ೫-೬ ವರ್ಷಗಳ ಹಿಂದೆ ನಿರ್ಮಾಣಗೊಂಡ ತೆಂಗಿನಗುAಡಿ ಬಂದರು ಪ್ರದೇಶದುದ್ದಕ್ಕೂ ದುರಸ್ಥಿ ಕಾರ್ಯ ಅಥವಾ ಪುನರ್ ನಿರ್ಮಾಣ ಕಾರ್ಯ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಘಟನೆಯಿಂದ ಇಲ್ಲಿನ ಮೀನುಗಾರರು ಬೆಚ್ಚಿ ಬಿದ್ದಿದ್ದು, ಮೀನುಗಾರಿಕಾ ಇಲಾಖೆ ಹಾಗೂ ಬಂದರು ಇಲಾಖೆಯ ಕಾಮಗಾರಿಯ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಹೊನ್ನಾವರ ಉಪವಿಭಾಗದ ಬಂದರು ಇಲಾಖೆಯ ಅಭಿಯಂತರ ರಾಮದಾಸ ಆಚಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದೆ ಸಂಭವಿಸಬಹುದಾದ ಅಪಾಯದ ಬಗ್ಗೆ ಮೀನುಗಾರರೊಂದಿಗೆ ಚರ್ಚೆ ನಡೆಸಿದ್ದಾರೆ.
ಬಂದರು ಅಭಿವೃದ್ಧಿಯ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಸುರಿಯುವ ಮುನ್ನ ಕಾಮಗಾರಿಗೆ ಸಂಬAಧಿಸಿದAತೆ ಇಲ್ಲಿನ ಮೀನುಗಾರರೊಂದಿಗೆ ಚರ್ಚಿಸದೇ ಮುಂದಡಿ ಇಟ್ಟಿರುವುದೇ ಇದಕ್ಕೆಲ್ಲ ಕಾರಣ. ಈಗ ಆಗಿರುವ ನಷ್ಟಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

error: