May 19, 2024

Bhavana Tv

Its Your Channel

ಯಶಸ್ವಿಯಾಗಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಭಟ್ಕಳ:ಮುಂಡಳ್ಳಿಯ ಶ್ರೀ ಶಾರದಂಬ ಸೇವಾ ಟ್ರಸ್ಟ್ ಹಾಗೂ ಹೆಗಡೆ ಫೌಂಡೇಶನ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಮುಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ ನಾಯ್ಕ್ ಉದ್ಘಾಟಿಸಿದರು. ಶಾರದಾಂಬ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶುಕ್ರಯ್ಯ ಡಿ. ಹಳ್ಳೆರ ಮಾತನಾಡುತ್ತಾ ಧಾರ್ಮಿಕ ಕಾರ್ಯಗಳ ಜೊತೆ ಅನೇಕ ಸಾಮಾಜಿಕ ಸೇವೆಗಳನ್ನ ಆರೋಗ್ಯ ಸೇವೆಗಳನ್ನು ನೀಡುತ್ತಾ ಬಂದಿದ್ದೇವೆ ಇದೇ ರೀತಿ ಊರಿನವರ ಸಹಕಾರ ಸದಾ ಇರಲಿ ಎಂದು ಆಶಿಸಿದರು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ನಾಯ್ಕ ಶಾರದಂಬ ಸೇವ ಟ್ರಸ್ಟ್ ನ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿ ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ಮುಡೇಶ್ವರದ ಉಪ ಪ್ರಾಂಶುಪಾಲರಾದ ಕೆ .ಮರಿಸ್ವಾಮಿ ಮಾತನಾಡುತ್ತಾ, ಪಂಚ ಜ್ಞಾನೇಂದ್ರಿಯಗಳಲ್ಲಿ ಅತಿ ಮುಖ್ಯವಾದ ಇಂದ್ರಿಯ ವೆಂದರೆ ನಮ್ಮ ಕಣ್ಣುಗಳು. ಅಂಧರ ಬಾಳಿಗೆ ಬೆಳಕಾಗುವ ಕಾರ್ಯವನ್ನ ನಮ್ಮ ಮರಣ ನಂತರ ನಮ್ಮ ಕಣ್ಣುಗಳನ್ನ ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗೋಣ ನೇತ್ರದಾನ ಅಂಧರ ದೃಷ್ಟಿ ನೀಡುವ ಜೀವನ ದಾನವಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೇರೋನಿಕ, ಎಸ್ .ಡಿ .ಎಂ .ಸಿ ಅಧ್ಯಕ್ಷರಾದ ರಾಜೇಶ್ ನಾಯ್ಕ ,ಉದ್ಯಾಮಿ ಮಂಜುನಾಥ್ ನಾಯ್ಕ, ಸಮಾಜಸೇವಕರಾದ ನಜೀರ್ ಖಾಸಿಂ ಜಿ, ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ನಾಯ್ಕ ಉಪಸ್ಥಿತರಿದ್ದರು.
ಕಣ್ಣಿನ ತಪಾಸಣೆ ಶಿಬಿರದಲ್ಲಿ 95 ಅಧಿಕ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ, ಅನೇಕರಿಗೆ ಉಚಿತ ಔಷಧಿಗಳನ್ನು ಸಹ ವಿತರಿಸಲಾಯಿತು ಹಾಗೂ ಅವಶ್ಯಕತೆ ಇರುವ ಬಡವರಿಗೆ 50% ಡಿಸ್ಕೌಂಟ್ ನೊಂದಿಗೆ ಲೇಸರ್ ಚಿಕಿತ್ಸೆ ನೀಡಲಾಗುವುದು ಎಂದು ಡಾ// ಹರ್ಷಿತ್ ಹೆಗ್ಗಡೆ ತಿಳಿಸಿದರು.

error: