May 15, 2024

Bhavana Tv

Its Your Channel

ಉದಯಪುರದ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ, ಭಟ್ಕಳದಲ್ಲಿ ಪ್ರತಿಭಟನೆ

ಭಟ್ಕಳ: ರಾಜಸ್ತಾನದ ಉದಯ ಪುರದಲ್ಲಿ ಬಡ ಹಿಂದೂ ಟೇಲರ್ ಕನ್ನಯ್ಯಲಾಲ್ ಅವರನ್ನು ಗ್ರಾಹಕರ ಸೋಗಿನಲ್ಲಿ ಬಂದು ಶಿರಚ್ಛೇದನ ಮಾಡಿದ ಮುಸ್ಲಿಂ ಮತಾಂಧರನ್ನು ಕೂಡಲೇ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಭಟ್ಕಳ ತಾಲ್ಲೂಕಿನ 3 ಸಂಘಟನೆಗಳು ಬೃಹತ್ ಪ್ರತಿಭಟನೆ ಮಾಡುವುದರ ಮೂಲಕ ಸಹಾಯಕ ಆಯುಕ್ತರ ಮೂಲಕ ಪ್ರಧಾನಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಭಟ್ಕಳ ತಾಲೂಕಿನ ಹಿಂದೂ ಜಾಗರಣ ವೇದಿಕೆ, ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ಹಾಗೂ ವಿಶ್ವ ಹಿಂದೂ ಪರಿಷತ್ ನಿಂದ ಮನವಿಯನ್ನು ಸಲ್ಲಿಸಿದ್ದಾರೆ, ನೂಪುರ್ ಶರ್ಮ ಅವರ ಬೆಂಬಲಿಸಿ ತಮ್ಮ ಫೇಸ್ಬುಕ ಖಾತೆಯಲ್ಲಿ ಸ್ಟೇಟಸ್ ಹಾಕಿರುವ ಒಂದೇ ಕಾರಣಕ್ಕಾಗಿ ರಾಜಸ್ಥಾನದ ಜೈಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಕನ್ನಯ್ಯಲಾಲ್ ಎಂಬ ಅಮಾಯಕ ಹಿಂದೂ ಟೇಲರರನ್ನು ಮುಸ್ಲಿಂ ಮತಾಂಧರು ಭಯೋತ್ಪಾದಕರು ಅಮಾನವೀಯ ರೀತಿಯಲ್ಲಿ ಅಮಾನುಷವಾಗಿ ಶಿರಚ್ಚೇದನ ಮಾಡಿರುವುದನ್ನು ಉಗ್ರವಾಗಿ ಖಂಡಿಸುತ್ತಿದೆ ಅಲ್ಲದೆ ಇಸ್ಲಾಂಯೇತರ ಧರ್ಮದ ಜನರಿಗೆ ಇಸ್ಲಾಂ ಬಗ್ಗೆ ಭಯ ಹುಟ್ಟಿಸುವಂತೆ ಸಂದೇಶ ರವಾನಿಸುವ ನಿಟ್ಟಿನಲ್ಲಿ ದಾರುಣವಾಗಿ ಕೊಲೆಗೈದಿರುವ ಪೈಶಾಚಿಕ ಕೃತ್ಯದ ವಿಡಿಯೋವನ್ನು ಈ ರಾಕ್ಷಸ ಮನಸ್ಥಿತಿಯ ಮುಸ್ಲಿಂ ಮತಾಂಧರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವ ಮೂಲಕ ಸಾಮಾನ್ಯ ಜನರಲ್ಲಿ ಆತಂಕ ಹಾಗೂ ಭಯವನ್ನು ಹುಟ್ಟಿಸಿದ್ದಾರೆ. ಮಾನವ ಕುಲಕ್ಕೆ ಮಾರಕವಾಗಿರುವ ಇವರನ್ನು ಕೂಡಲೇ ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.
ಅದೇ ರೀತಿ ಭಯಾನಕ ಕೃತ್ಯಗಳು ಮರುಕಳಿಸದಂತೆ ತಡೆಯಲು ಮುಂದಿನ ದಿನಗಳಲ್ಲಿ ಇಂಥ ಪೈಶಾಚಿಕ ಮನಸ್ಥಿತಿಯ ಮುಸ್ಲಿಂ ಮತಾಂಧರನ್ನು ಗುರುತಿಸಿ ಅವರನ್ನು ಹೆಡೆಮುರಿ ಕಟ್ಟುವ ಜೊತೆಗೆ ಇಂಥ ಮತಾಂತರ ರಕ್ಷಣೆಗೆ ನಿಲ್ಲುವಂಥ ಸಂಸ್ಥೆಗಳ ಹಾಗೂ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ,ಕೇಂದ್ರ ಸರ್ಕಾರಕ್ಕೆ ಹಾಗೂ ರಾಜಸ್ತಾನದ ರಾಜ್ಯಪಾಲರಿಗೆ ಮನವಿ ನೀಡಿದ್ದಾರೆ.

ಹಿಂದೂ ಪರಿಷತ್ ಮುಖಂಡ ಶಂಕರ ಶೆಟ್ಟಿ ಮಾತನಾಡಿ ಈ ಕೃತ್ಯ ಮಾಡಿರುವ ಮತಾಂದರನ್ನು ಸರ್ಕಾರ ಗಲ್ಲು ಶಿಕ್ಷೆ ನೀಡಬೇಕೆಂಬುವುದು ನಮ್ಮ ಬೇಡಿಕೆಯಾಗಿದೆ ಎಂದ ಅವರು ಇಂತಹ ಕೊಲೆಗಡುಕರ ಮನಸ್ಸಿನಲ್ಲಿ ಮಾನಸಿಕವಾಗಿ ಒಂದು ಯೋಚನೆ ಇದ್ದು ಇಂತಹ ಹತ್ಯೆ ಮಾಡಿದರೆ ನಾನು ನೇರವಾಗಿ ಸ್ವರ್ಗಕ್ಕೆ ಹೋಗುತ್ತೇನೆ ಎಂಬ ಹುಚ್ಚು ನಂಬಿಕೆ ಇದ್ದು ಇಂಥವರಿಗೆ ಬುದ್ಧಿ ಜೀವಿಗಳು ಅವರ ಮನಸ್ಥಿತಿಯನ್ನು ಪರಿವರ್ತನೆ ಮಾಡಿ ಒಳ್ಳೆಯ ಸಂದೇಶ ನೀಡಿಬೇಕು ಎಂದರು.
ನAತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿಂದೂ ಜಾಗರಣ ವೇದಿಕೆ ಮುಖಂಡ ರಾಮಕೃಷ್ಣ ನಾಯ್ಕ ಮಾತನಾಡಿ ಕನ್ನಯ್ಯಲಾಲ್ ನನ್ನ ವೃತ್ತಿ ಬಾಂದವನಾಗಿದ್ದು ಅವರನ್ನು ಹತ್ಯೆ ಮಾಡಿದ ಪಾಪಿಗಳಿಗೆ ಕಾನೂನಿನ ಅಡಿಯಲ್ಲಿ ಶೀಘ್ರ ಗಲ್ಲು ಶಿಕ್ಷೆ ಆಗಬೇಕೆಂದ ಅವರು ನೂಪುರ್ ಶರ್ಮರವರ ಫೋಟೋವನ್ನು ತಮ್ಮ ಪ್ರೊಫೈಲ್ ಹಾಕಿರುದಕ್ಕೆ ನೀವು ಅವರನ್ನು ಹತ್ಯೆ ಮಾಡುತ್ತೀರಾ ಎಂದರೆ ಬಹು ಸಂಖ್ಯಾತ ಎಷ್ಟು ದೇವಸ್ಥಾನವನ್ನು ನೀವು ಧ್ವಂಸ ಮಾಡಿ ದಾಳಿ ಮಾಡಿದ್ದೀರಿ, ಎಷ್ಟು ದೇವರ ವಿಗ್ರಹವನ್ನು ನೀವು ನಾಶ ಮಾಡಿದ್ದೀರಿ ಆ ಸಮಯದಲ್ಲಿ ಹಿಂದೂಗಳಾದ ನಾವು ತಲ್ವಾರ್, ಕತ್ತಿ ಹಿಡಿದು ನಾವು ಎಷ್ಟು ಜನರನ್ನು ಹತ್ಯೆ ಮಾಡಿದ್ದೇವೇ ಎಂದು ಪ್ರಶ್ನಿಸಿದ ಅವರು ಬಹು ಸಂಖ್ಯಾತ ಹಿಂದುಗಳನ್ನು ಕೆಣಕಬೇಡಿ ನಾವು ಕಾನೂನನ್ನು ಗೌರವಿಸುತ್ತೇವೆ ಹಾಗೂ ಪಾಲನೆ ಮಾಡುತ್ತೇವೆ ಆದರೆ ಹಿಂದುಗಳಾದ ನಾವು ಕಾನೂನನ್ನು ಕೈಗೆತ್ತಿಕೊಂಡರೆ ನಿಮ್ಮ ಪರಿಸ್ಥಿತಿ ಏನಾಗಬಹುದು ಎಂದು ಆಲೋಚನೆ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಂತರ 3 ಸಂಘಟನೆಗಳ ಮುಖಂಡರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಪೂರ್ವದಲ್ಲಿ ಭಟ್ಕಳದ ಪ್ರವಾಸಿ ಮಂದಿರದಿAದ ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭನಾ ಮೆರವಣಿಗೆ ಹೊರಟು ಶಂಸುದ್ದಿನ ಸರ್ಕಲ್ ಮಾರ್ಗವಾಗಿ ಪುನಃ ತಾಲೂಕಾ ಪಂಚಾಯತ್ ಮಾರ್ಗವಾಗಿ ತಾಲೂಕಾ ಆಡಳಿತ ಸೌಧಕ್ಕೆ ಬಂದು ಮನವಿ ಅರ್ಪಿಸಿದರು.
ಈ ಸಂಧರ್ಭದಲ್ಲಿ ವಿಶ್ವ ಹಿಂದು ಪರಿಷತ್ ಸದಸ್ಯರಾದ ಸುರೇಶ ಆಚಾರ್ಯ,ವಾಮನ ಶಿರಸಾಟ, ಸುರೇಂದ್ರ ಭಟ್ಕಳಕರ, ರಾಮಣ್ಣ ಬಳೆಗಾರ, ಗಣಪತಿ ಸುಬ್ಬುಮನೆ, ಹಿಂದೂ ಜಾಗರಣಾವೇದಿಕೆ ಪ್ರಮುಖರಾದ ದಿನೇಶ ಗವಾಳಿ, ರಾಘವೇಂದ್ರ ನಾಯ್ಕ, ತುಳಸಿದಾಸ ನಾಯ್ಕ ಬಿಜೆಪಿ ಯುವಮೋರ್ಚಾದ ಮಹೇಂದ್ರ ನಾಯ್ಕ ರಾಘವೇಂದ್ರ ನಾಯ್ಕ ಬಿಜೆಪಿ ಮಂಡಲದ ರಾಜೇಶ ನಾಯ್ಕ ರವಿ ನಾಯ್ಕ ಜಾಲಿ, ಸುರೇಶ ಕೋಣೆಮನೆ, ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ ಹನುಮಾನ ನಗರ ಸೇರಿದಂತೆ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

error: