May 17, 2024

Bhavana Tv

Its Your Channel

ಜೂಜು ಅಡ್ಡೆಯ ಮೇಲೆ ದಾಳಿ

ಭಟ್ಕಳ ತಾಲೂಕಿನ ಸರ್ಪನಕಟ್ಟೆ ಕವೂರು ಕ್ರಾಸ್‌ನಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಆರೋಪಿಯನ್ನು ತಲಾಂದ ನಿವಾಸಿ ಜಿತೇಂದ್ರ ಶ್ರೀಧರ ನಾಯ್ಕ (28) ಎಂದು ಗುರುತಿಸಲಾಗಿದ್ದು, ಆತನಿಂದ ರು, 700 ನಗದು, ಓಸಿ ಚೀಟಿ, ಪೆನ್ನು ಇತ್ಯಾದಿಗಳನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಐ ಭರತ್ ತನಿಖೆ ಕೈಗೊಂಡಿದ್ದಾರೆ.

error: