May 17, 2024

Bhavana Tv

Its Your Channel

ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಟ್ಕಳ:- ಭಾರತದ ಗುರುಕುಲ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿದರೂ, ಅಪಾರ ಗ್ರಂಥಗಳನ್ನು ಸುಟ್ಟು ಭಸ್ಮ ಮಾಡಿದರೂ ಶೈಕ್ಷಣಿಕವಾಗಿ ಭಾರತವುಜಗತ್ತಿನ ಗಮನ ಸೆಳೆಯುವಂತಾಗಲು ಕಾರಣ ಭಾರತದಲ್ಲಿರುವ ಸಮರ್ಥ ಶಿಕ್ಷಕರು ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರರಾಜೇಶ ನಾಯಕ ಹೇಳಿದರು. ಅವರು ದಿ ನ್ಯೂಇಂಗ್ಲೀಷ ಪಿ.ಯುಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕ ದಿನಾಚರಣೆಯಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಕ ವೃತ್ತಿಅತ್ಯಂತ ಶ್ರೇಷ್ಠವಾಗಿದ್ದು ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡುವುದರಜೊತೆಗೆ ಮನೆಯ ಮೊದಲ ಗುರುತಂದೆತಾಯಿಯAದಿರಿಗೂ ಸಹ ಪ್ರೀತಿಸಿ, ಆದರಿಸಿ ಗೌರವಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾ ವಿದ್ಯಾಲಯದಲ್ಲಿಓದುತ್ತಿರುವ ವಿದ್ಯಾರ್ಥಿಗಳ ಶಿಕ್ಷಕ ಪಾಲಕರಾದ ನಿವೃತ್ತ ಶಿಕ್ಷಕ ರೂಪ್ಲಾಕಾಮತ, ಹಿರಿಯ ಪ್ರಾಥಮಿಕ ಶಾಲೆ ಬೆಳಕೆಯ ಶಿಕ್ಷಕಿ ತಾರಾ ಪ್ರದೀಪ ಶೆಟ್ಟಿ, ಕಿರಿಯ ಪ್ರಾಥಮಿಕ ಶಾಲೆ, ಬೆಂಗ್ರೆಯ ಶಿಕ್ಷಕಿ ಜಯಾ ಪ್ರಭು, ಉಪನ್ಯಾಸಕ ಕೃಷ್ಣಾ ಸೋಮಯ್ಯ ಮೊಗೇರ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಚಿಟ್ಟಿಹಕ್ಕಲ್‌ನ ಶಿಕ್ಷಕಿ ರಾಜೀವಿ ಎಂ. ಮೊಗೇರಅವರಿಗೆಗುರುವಂದನೆ ಸಲ್ಲಿಸಲಾಯಿತು. ಪ್ರಾಂಶುಪಾಲ ಡಾ! ವಿರೇಂದ್ರ ಶ್ಯಾನಭಾಗ ಸ್ವಾಗತಿಸಿದರು, ಉಪನ್ಯಾಸಕರಾಮ ನಾಯ್ಕ ವಂದಿಸಿದರು, ವಿದ್ಯಾರ್ಥಿಗಳಾದ ಕೃಪಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಜಯಂತ ನಾಯ್ಕ ನಿರೂಪಿಸಿದರು.

error: