May 17, 2024

Bhavana Tv

Its Your Channel

ರಾಜ್ಯ ಅರ್ಬನ್ ಮೊಬಿಲಿಟಿ ಗ್ರ‍್ಯಾಂಡ್ ಚಾಲೆಂಜ್ ಗೆದ್ದುಕೊಂಡ ಡಾ. ಸಚಿನ್ ಭಟ್ಟ

ಭಟ್ಕಳ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಪ್ರತಿಷ್ಟಿತ ರಾಜ್ಯ ಅರ್ಬನ್ ಮೊಬಿಲಿಟಿ ಗ್ರ‍್ಯಾಂಡ್ ಚಾಲೆಂಜ್‌ನ್ನು ಡಾ. ಸಚಿನ್ ಭಟ್ಟ ಗೆದ್ದುಗೊಂಡಿದ್ದಾರೆ.

ಪೋಲೀಸರಿಗೆ ಅಪಘಾತ ಸಂದರ್ಭಗಳಲ್ಲಿ ಕನಿಷ್ಟ ಮಾನವ ಹಸ್ತಕ್ಷೇಪದೊಂದಿದೆ ಮಾಹಿತಿ ಕಲೆಹಾಕಲು ಹಾಗೂ ಪ್ರಥಮ ಮಾಹಿತಿ ವರದಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಲು ನೆರವಾಗುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಹತ್ತು ಲಕ್ಷ ರೂಪಾಯಿಗಳ ಸ್ಟಾರ್ಟ್ಅಪ್ ಅನುದಾನ ಪಡೆದಿದ್ದಾರೆ. ಕೃತಕ ಬುದ್ಧಿಮತ್ತೆಯನ್ನಾಧರಿಸಿದ ಈ ತಂತ್ರಜ್ಞಾವು ಅಪಘಾತ ಸ್ಥಳದಲ್ಲಿ ತೆಗೆದ ಚಿತ್ರಗಳಿಂದ ಅಪಘಾತದ ಸ್ಥಳ ಹಾಗೂ ತೀವ್ರತೆಯನ್ನು ಲೆಕ್ಕಹಾಕಿ ಹತ್ತಿರದ ಆಸ್ಪತ್ರೆಗೆ ಮಾಹಿತಿಯನ್ನು ಕಳಿಸುತ್ತದೆ. ಮಾತ್ರವಲ್ಲದೇ ಅಪಘಾತವಾದ ವಾಹನದ ನಂಬರ್ ಪ್ಲೇಟ್ ಗುರುತಿಸಿ ಪೋಲೀಸರಿಗೆ ಮಾಹಿತಿ ರವಾನಿಸುತ್ತದೆ. ಅಪಘಾತ ದತ್ತಾಂಶದ ಸ್ವಯಂಚಾಲಿತ ಉತ್ಪಾದನೆಯನ್ನು ಅಪಘಾತದ ಕಾರಣಗಳು ಮತ್ತು ಪರಿಹಾರಗಳನ್ನು ವಿಶ್ಲೇಷಿಸಲು ಪರಿಣಾಮಕಾರಿಯಾಗಿ ಬಳಿಸಿಕೊಳ್ಳಬಹುದಾಗಿದೆ.
ಮೂಲತಹ ಶಿರಾಲಿಯವರಾದ ಡಾ. ಸಚಿನ್ ಭಟ್ಟ ಕುಮಟಾದಲ್ಲಿ ವಾಸ್ತವ್ಯ ಮಾಡಿ ಬಂದಿದ್ದು ಪ್ರಸ್ತುತ ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಡಾ. ಸಚಿನ್ ಭಟ್ಟರ ಸರ್ಜಿಕಲ್ ಸ್ಪಾಂಜುಗಳ ಮೇಲಿನ ಸಂಶೋಧನೆಗೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಸ್ಟಾರ್ಟ್ಅಪ್ ಆಗಿ ಗುರುತಿಸಿರುವುದನ್ನು ಸ್ಮರಿಸಬಹುದು. ವಿದ್ಯಾಲಯದ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ಟ ಹಾಗೂ ಆಡಳಿತ ಮಂಡಳಿ ಇವರ ಸಾಧನೆಗಾಗಿ ಅಭಿನಂದಿಸಿದ್ದಾರೆ.

error: