May 17, 2024

Bhavana Tv

Its Your Channel

ಕ್ಷುಲ್ಲಕ ರಾಜಕಾರಣ ಶಾಸಕರಿಗೆ ಶೋಭೆ ತರುವಂತದ್ದಲ್ಲ -ತಂಜೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಪರ್ವಾಜ್, ಪ್ರಧಾನ ಕಾರ್ಯದರ್ಶಿ ಎಂ.ಜೆ. ಅಬ್ದುಲ್ ರಖೀಬ್ ಜಂಟಿ ಹೇಳಿಕೆ

ಭಟ್ಕಳ ಆಸರಕೇರಿಯ ನಿಚ್ಚಲಮಕ್ಕಿ ದೇವಸ್ಥಾನದ ದ್ವಾರ ಮಂಟಪ ನಿರ್ಮಾಣ ಹಾಗೂ ಟಿಪ್ಪು ಸುಲ್ತಾನ್ ಮಹಾದ್ವಾರ ನಿರ್ಮಾಣ ಸಂಬAಧಿಸಿದAತೆ ಉಂಟಾದ ವಿವಾದದಲ್ಲಿ ಶಾಸಕ ಸುನಿಲ್ ನಾಯ್ಕ ಉದ್ದೇಶ ಪೂರ್ವಕವಾಗಿ ತಂಝೀಮ್ ಸಂಸ್ಥೆ ಹಾಗೂ ಇಸ್ಲಾಂ ಧರ್ಮವನ್ನು ಎಳೆದು ತಂದಿದ್ದು ಇಂತಹ ಕ್ಷುಲ್ಲಕ ರಾಜಕಾರಣ ಶಾಸಕರಿಗೆ ಶೋಭೆ ತರುವಂತದ್ದಲ್ಲ ಎಂದು ತಂಜೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಪರ್ವಾಜ್, ಪ್ರಧಾನ ಕಾರ್ಯದರ್ಶಿ ಎಂ.ಜೆ. ಅಬ್ದುಲ್ ರಖೀಬ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇವಸ್ಥಾನದ ದ್ವಾರ ಮಂಟಪ ನಿರ್ಮಾಣಕ್ಕೆ ತಂಝೀಮ್ ಸಂಸ್ಥೆ ಅಡ್ಡಿಪಡಿಸಿಲ್ಲ ಎಂದೂ ಸ್ಪಷ್ಟನೆ ನೀಡಿದ ಅವರು ತಂಝೀಮ್ ಯಾವುದೇ ರೀತಿಯ ಆಕ್ಷೇಪವನ್ನು ವ್ಯಕ್ತಪಡಿಸಿಲ್ಲ ಮತ್ತು ಪುರಸಭೆಗೆ ದೂರನ್ನೂ ಕೂಡಾ ನೀಡಿಲ್ಲ. ಶಾಸಕ ಸುನಿಲ್ ನಾಯ್ಕ ಉದ್ದೇಶ ಪೂರ್ವಕವಾಗಿ ಈ ಪ್ರಕರಣದಲ್ಲಿ ತಂಝೀಮ್ ಸಂಸ್ಥೆಯನ್ನು ಎಳೆದು ತರುತ್ತಿರುವುದನ್ನು ಪ್ರಜ್ಞಾವಂತರು ಗಮನಿಸುತ್ತಿದ್ದಾರೆ. ಅಲ್ಲದೆ ಮಾತು ಮಾತಿಗೆ ಇದು ಪಾಕಿಸ್ಥಾನವಲ್ಲ ಎಂಬ ಹೇಳಿಕೆ ನೀಡುತ್ತಿದ್ದು ಇದರಿಂದ ನಮಗೆ ತುಂಬಾ ನೋವಾಗಿದೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಇಂತಹ ಹೊಣೆಗೇಡಿತನದ ಹೇಳಿಕೆ ನೀಡುವುದು ಭೂಷಣವಲ್ಲ ಎಂದಿರುವ ಅವರು ನಾವು ಕೂಡಾ ಈ ದೇಶದ ಪ್ರಜೆಗಳು ನಿಮಗೆಷ್ಟು ಹಕ್ಕು ಇಲ್ಲಿದೆಯೂ ಅಷ್ಟೇ ಹಕ್ಕೂ ನಮಗೂ ಇದೆ ಎನ್ನುವುದನ್ನು ಶಾಸಕರಾದ ನಿಮಗೆ ತಿಳಿಸಿ ಹೇಳಬೇಕಾಗಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನೂರು ವರ್ಷಗಳ ಇತಿಹಾಸವಿರುವ ತಂಝೀಮ್ ಸಂಸ್ಥೆ ಯಾವತ್ತೂ ಕೂಡ ಕ್ಷುಲ್ಲಕವಾಗಿ ಯೋಚಿಸಿಲ್ಲ. ಇಲ್ಲಿ ಯಾವಾಗಲೂ ಸೌಹಾರ್ದತೆ, ಶಾಂತಿಯಿAದ ಪರಸ್ಪರ ಕೂಡಿ ಬಾಳುವಂತೆ ಮಾಡಿದ ಇತಿಹಾಸ ಇದೆ. ವಿನಾಕಾರಣ ಇತರರ ಧಾರ್ಮಿಕ ನಂಬಿಕೆಯ ವಿಷಯದಲ್ಲಿ ಮೂಗು ತೂರಿಸುವುದು ತಂಝೀಮ್ ಮಾಡುವುದಿಲ್ಲ.
ಈಗ ಚುನಾವಣೆಗೆ ಕೇವಲ ಕೆಲವು ತಿಂಗಳು ಬಾಕಿ ಇರಬೇಕಾದರೆ ಮಹಾದ್ವಾರದ ನಿರ್ಮಾಣದ ನಾಟಕವಾಡುತ್ತಿರುವುದು ಜನತೆಗೆ ತಿಳಿದಿದ್ದು ಇದರಲ್ಲಿ ನಮ್ಮ ಸಂಸ್ಥೆಯನ್ನು ಎಳೆದು ತರಬೇಡಿ ಎಂದೂ ಸಲಹೆ ನೀಡಿದ್ದಾರೆ. ತಂಜೀಮ್ ವಿರುದ್ಧ ಹೇಳಿಕೆಯನ್ನು ನೀಡಿದರೆ ಹಿಂದೂಗಳ ಮತಪಡೆಯ ಬಹುದೆನ್ನುವ ನಿಮ್ಮ ಮಾಸ್ಟರ್ ಪ್ಲಾನ್ ಎಲ್ಲರಿಗೂ ತಿಳಿದಿದೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಂಜೀಮ್ ಹಾಗೂ ಮುಸ್ಲಿಮ್ ಸಮುದಾಯವನ್ನು ವಿವಾದಕ್ಕೆ ಎಳೆಯಬೇಡಿ ಎಂದೂ ಸಹಲೆ ನೀಡಿದ್ದಾರೆ.
ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ದೇವಸ್ಥಾನದ ಮುಂದಿನ ರಸ್ತೆಯ ತಿರುವು ನಿರ್ಮಾಣ ಮಾಡಿದಾಗಲೂ ನಾವು ಯಾವುದೇ ಆಕ್ಷೇಪಗಳನ್ನು ಎತ್ತಿಲ್ಲ. ಅಲ್ಲಿ ನಿಜಕ್ಕೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದರೂ ಕೂಡ ನಾವು ಪರಸ್ಪರ ಸೌಹಾರ್ಧತೆಗಾಗಿ ಎನ್ನುವ ಒಂದೇ ಕಾರಣದಿಂದ ಸಹಿಸಿಕೊಂಡು ಬಂದಿದ್ದೇವೆ. ಇದು ಇಲ್ಲಿನ ನಾಮಧಾರಿ ಸಮುದಾಯ ನಮ್ಮ ಮೇಲೆ ಹೊಂದಿರುವ ಪ್ರೀತಿ, ವಿಶ್ವಾಸದ ಫಲವಾಗಿದೆ ಎಂದು ಹೇಳಿದ್ದಾರೆ. ಶಾಸಕರಾದ ನಂತರ ಭಟ್ಕಳದ ಯಾವೊಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದ ನೀಡು ಪದೇ ಪದೇ ಅನಧೀಕೃತ ಕಟ್ಟಡ ಎನ್ನುವ ಮಾತನಾಡುತ್ತಿದ್ದು ಅದನ್ನ ಪರಿಹರಿಸುವ ಪ್ರಯತ್ನ ನಿಮ್ಮಿಂದ ಯಾಕಿಲ್ಲ ಎಂದು ಪ್ರಶ್ನಿಸಿದ ಅವರು ಇಂದು ಹಲವು ಸಮಸ್ಯೆಗಳು ಜನರನ್ನು ಕಾಡುತ್ತಿದ್ದು ಕಿಂಚಿತ್ತೂ ಯೋಚಿಸದ ನೀವು ಜನರಪವಾಗಿ ಎನನ್ನೂ ಮಾಡದೇ ಕೇವಲ ಹೇಳಿಕೆಯಲ್ಲಿ ಕಾಲ ಕಳೆದಿದ್ದೀರಿ ಎಂದೂ ಹೇಳಿದ್ದಾರೆ.

error: