May 16, 2024

Bhavana Tv

Its Your Channel

ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನಿಯಮಿತ ವಾರ್ಷಿಕ ಮಹಾಸಭೆ

ಭಟ್ಕಳ ತಾಲೂಕಿನ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಸಭಾಭವನದಲ್ಲಿ ಅಧ್ಯಕ್ಷ ಸುನಿಲ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ವರದಿ ಮಂಡಿಸಿದ ಪ್ರಧಾನ ವ್ಯವಸ್ಥಾಪಕ ಸತೀಶ ನಾಯ್ಕ, ಈ ವರದಿ ಸಾಲಿನಲ್ಲಿ ಕರ್ನಾಟಕ ರಾಜ್ಯ ಕೃಷಿ ಮತ್ತು ಗಾಮೀಣ ಅಭಿವೃದ್ಧಿ ಬ್ಯಾಂಕಿನಿAದ ವಿವಿಧ ಕೃಷಿ ಸಾಲದ ಯೋಜನೆಯಡಿಯಲ್ಲಿ 208.66ಲಕ್ಷ ಸಾಲ ಪಡೆದು 259.73ಲಕ್ಷ ಮರುಪಾವತಿ ಮಾಡಲಾಗಿದೆ. ವರದಿ ವರ್ಷದ ಅಂತ್ಯಕ್ಕೆ ರು.890.63ಲಕ್ಷ ಹೊರ ಬಾಕಿ ಸಾಲವು ಕೇಂದ್ರ ಬ್ಯಾಂಕಿಗೆ ಕೊಡತಕ್ಕದ್ದು ಬಾಕಿಯಾಗಿರುತ್ತದೆ. ರು.1052,51ಲಕ್ಷ ಸದಸ್ಯರಿಂದ ಬರತಕ್ಕ ಸಾಲ ಬಾಕಿ ಇರುತ್ತದೆ. ಕಳೆದ 9 ವರ್ಷಗಳಿಂದ ಬ್ಯಾಂಕು ರಾಜ್ಯ ಬ್ಯಾಂಕಿನ ತಗಾದೆಯನ್ನು ಪೂರ್ಣವಾಗಿ ಮರುಪಾವತಿ ಮಾಡಿರುತ್ತದೆ. ಕಳೆದ 2022, ಮಾ.31ಕ್ಕೆ ಕೃಷಿ ತಗಾದೆ ರು.574.85ಲಕ್ಷ. ಇದ್ದು, ರು.427.47ಲಕ್ಷ. ವಸೂಲಾಗಿದ್ದು, ರು.147,38,ಲಕ್ಷ ಬಾಕಿ ಇದ್ದು, ಶೇ.ವಸೂಲಾತಿ 74.36% ಆಗಿರುತ್ತದೆ. ಕಳೆದ 2021 ಮಾ.31ರ ಅಂತ್ಯಕ್ಕೆ ರು.11412.16ಲಕ್ಷ, ಸಾಲ ಹೊರ ಬಾಕಿ ಇದ್ದು, ವರದಿ ವರ್ಷದಲ್ಲಿ 5838.94ಲಕ್ಷ. ಸಾಲ ನೀಡಿ 5268.82ಲಕ್ಷ. ವಸೂಲಿ ಮಾಡಿ ವರದಿ ವರ್ಷದ ಅಂತ್ಯಕ್ಕೆ ಬರತಕ್ಕೆ ಹೊರ ಬಾಕಿ, ಸಾಲ ರು.11982.28ಲಕ್ಷ ಆಗಿರುತ್ತದೆ, ಕೃಷಿಯೇತರ ಸಾಲದ ತಗಾದೆ ರು.12,731,70ಲಕ್ಷ. ಇದ್ದು, ರು.6868,66ಲಕ್ಷ, ವಸೂಲಾಗಿದ್ದು, ರು.5863,04 ಲಕ್ಷ ಬಾಕಿ ಇರುತ್ತದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮಾರ್ಗಸೂಚಿಯಂತೆ ಕಟಬಾಕಿ ಸಾಲಗಳನ್ನು ವರ್ಗೀಕರಿಸಿ ಅವುಗಳ ಮೇಲೆ ನಿಗದಿತ ರೂಪದಲ್ಲಿ ಅನುತ್ಪಾದಕ ಸಾಲದ ನಿಧಿಯನ್ನು ಕಾಯ್ದಿರಿಸಬೇಕಾಗಿರುತ್ತದೆ. ಅದರಂತೆ ಕಳೆದ ವರ್ಷ ರು.138.47 ಲಕ್ಷ. ಕಾಯ್ದಿರಿಸಬೇಕಾಗಿತ್ತು. ವರದಿ ವರ್ಷದಲ್ಲಿ 132.90.ಕಾಯ್ದಿರಿಸಿ ಅಂತೂ 1233.25ಲಕ್ಷ ಆಡಾವೆಯಲ್ಲಿ ಅನುವು ಮಾಡಲಾಗಿದೆ.
ಕಟ್ಟಡ ಮೇಲ್ಬಾವಣಿ ಗುತ್ತಿಗೆಯಲ್ಲಿ ಪಾರದರ್ಶಕತೆ ಇಲ್ಲ, ಅರ್ಜಿ ಸಲ್ಲಿಸಿದ್ದರೂ ಮಾಹಿತಿ ನೀಡುತ್ತಿಲ್ಲ ಎಂದು ಕೆಲ ಶೇರುದಾರರು ಆರೋಪಿಸಿದರು. ಇದಕ್ಕೆ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಸಮರ್ಥ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ನಿರ್ಣಯ ಕೈಗೊಂಡಿದೆ. ನಿಯಮದಡಿ ಶೇರುದಾರರು ಅರ್ಜಿ ರೂಪದಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಮಾಹಿತಿ ನೀಡಲು ಬ್ಯಾಂಕು ಬದ್ಧವಿದೆ ಎಂದು ಅಧ್ಯಕ್ಷ ಸುನಿಲ್ ನಾಯ್ಕ ಪ್ರತಿಕ್ರಿಯಿಸಿದರು.
ಬ್ಯಾಂಕಿನ ಉಪಾಧ್ಯಕ್ಷೆ ಗಾಯತ್ರಿ ನಾಯ್ಕ, ನಿರ್ದೇಶಕರಾದ ಈಶ್ವರ ನಾರಾಯಣ ನಾಯ್ಕ, ಸುರೇಶ ನಾಯ್ಕ, ನಾಗಯ್ಯ ಗೊಂಡ, ನವನೀತ ನಾಯ್ಕ, ಸಂತೋಷ, ನಾಯ್ಕ, ಮಂಜಪ್ಪ ನಾಯ್ಕ, ಹರೀಶ ನಾಯ್ಕ, ಮೋಹನ ನಾಯ್ಕ, ಕಮಲಾ ನಾಯ್ಕ, ಮಂಜು ಮೊಗೇರ, ಈಶ್ವರ ಎಮ್. ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ವ್ಯವಸ್ಥಾಪಕ ದಿನೇಶ ನಾಯ್ಕ ವಂದಿಸಿದರು.

error: