May 11, 2024

Bhavana Tv

Its Your Channel

ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದ ಡಾ. ಸವಿತಾ ಕಾಮತ್

ಭಟ್ಕಳ : ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ಡಯಾಲಿಸಿಸ್ ಕೇಂದ್ರವನ್ನು ಭಟ್ಕಳ ತಾಲೂಕಾ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಡಯಾಲಿಸಿಸ್ ಕೇಂದ್ರದ ಅಗತ್ಯತೆ ಇದ್ದು ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಿರುವುದು ಉತ್ತಮವಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಅನೇಕ ರೋಗಿಗಳು ನೋಂದಣಿ ಮಾಡಿಸಿಕೊಂಡು ಕಾಯುತ್ತಿದ್ದು ಅಗತ್ಯವಿದ್ದವರಿಗೆ ಇಲ್ಲಿಗೆ ಬಂದು ಡಯಾಲಿಸಿಸ್ ಮಾಡಿಸಿಕೊಳ್ಳಲು ಅನುಕೂಲವಾಗುವುದು ಎಂದ ಅವರು ತಮ್ಮ ಸಹಕಾರ ಸದ ಇದೆ ಎಂದರು.

ಆರ್.ಎನ್.ಎಸ್.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚೇತನ್ ಕಲ್ಕೂರ್ ಮಾತನಾಡಿ ಈ ಹಿಂದೆಯೇ ಡಯಾಲಿಸಿಸ್ ಕೇಂದ್ರವನ್ನು ತೆರೆಯುವ ಯೋಚನೆ ಇದ್ದರೂ ಸಹ ಅದು ಈಗ ಕೈಗೂಡಿದೆ. ಈಗಾಗಲೇ ಎರಡು ಯಂತ್ರಗಳನ್ನು ಅಳವಡಿಸಿದ್ದು ಬೇಡಿಕೆ ಇದ್ದಲ್ಲಿ ಹೆಚ್ಚು ಯಂತ್ರಗಳನ್ನು ಅಳವಡಿಸುವ ಕುರಿತು ಚಿಂತಿಸಲಾಗಿದೆ. ಜನತೆಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಡಾ. ಆರ್. ಎನ್. ಶೆಟ್ಟಿಯವರು ಆರಂಭಿಸಿದ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡುವುದು ನಮ್ಮ ಉದ್ದೇಶ ಎಂದ ಅವರು ಬಂದAತ ಅಥಿತಿಗಳನ್ನು ಸ್ವಾಗತಿಸಿ ವಂದಿಸಿದರು..
ಡಯಾಲಿಸಿಸ್ ಯಂತ್ರಗಳನ್ನು ಚಾಲನೆ ಮಾಡಿದ ಮಂಗಳೂರು ಎ.ಜೆ. ಆಸ್ಪತ್ರೆಯ ನೆಪ್ರೋಲೋಜಿಸ್ಟ್ ಡಾ. ರಾಘವೇಂದ್ರ ನಾಯಕ ಮಾತನಾಡಿ ಭಾರತದಲ್ಲಿ ಕಿಡ್ನಿ ಕಸಿಯ ಕುರಿತು ಜನರಲ್ಲಿ ಹೆಚ್ಚು ಮಾಹಿತಿ ಇಲ್ಲ. ಜನತೆ ಇಂದು ಅಂಗಾAಗ ದಾನದ ಕುರಿತು ಜಾಗೃತಿ ಹೊಂದುತ್ತಿದ್ದು ಒಂದು ಉತ್ತಮ ಬೆಳವಣಿಗೆ ಎಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಕಿಡ್ನಿ ಕಸಿ ಮಾಡಿಸಿಕೊಳ್ಳವಲ್ಲಿ ಯಾವ ರೀತಿಯ ಮಾರ್ಗಗಳು ಇವೆ ಎನ್ನುವ ಬಗ್ಗೆ ಮಾಹಿತಿಗಳನ್ನು ನೀಡಿದರು.

ಡಯಾಸಿಲಿಸ್ ಸೆಂಟರಿಗೆ ಅಗತ್ಯವಿರುವ ಆರ್.ಓ. ಯುನಿಟ್‌ನ್ನು ಸಮಾಜ ಸೇವಕ ಡಾ. ಅಮೀನುದ್ದೀನ್ ಗೌಡಾ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆರ್.ಎನ್.ಎಸ್. ಟ್ರಸ್ಟ್ನ ನಾಗರಾಜ ಶೆಟ್ಟಿ, ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ, ಆರ್.ಎನ್.ಎಸ್. ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ದಿನೇಶ ಗಾಂವಕರ್, ಪದವಿ ಕಾಲೇಜಿ ಪ್ರಾಂಶುಪಾಲ ಡಾ. ಸಂಜಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಧವ ಪಿ., ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸೇರಿದಂತೆ ಆಸ್ಪತ್ರೆಯ ವೈದ್ಯರು, ಭಟ್ಕಳ ರೊಟರಿ ಕ್ಲಬ್‌ನ ಶಾಕೀರ್ ಹುಸೇನ್, ಪ್ರಶಾಂತ್ ಕಾಮತ್, ಸಿಟಿ ಮೆಡಿಕಲ್ಸ್ನ ಮಾಲಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: