April 28, 2024

Bhavana Tv

Its Your Channel

ಭಟ್ಕಳ ತಾಲೂಕು ಕಸಾಪದಿಂದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ.

ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾ ಕಸಾಪದ ಕಾರ್ತಿಕ ಅನುದಿನ ಅನುಸ್ಪಂದನ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಭಟ್ಕಳ ಬೆಳಕೆಯ ಸರ್ಕಾರಿ ನಾಡು ನುಡಿ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ ಶಾಲಿನಿ ನಾಯಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು ನುಡಿಯ ಬಗೆಗೆ ಅಭಿಮಾನ ಹಾಗೂ ಸಾಹಿತ್ಯಾಸಕ್ತಿಯನ್ನು ಮೂಡಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಕಾರ್ಯಕ್ಕೆ ನಾವಲ್ಲರೂ ಕೈಜೋಡಿಸಬೇಕಿದೆ ಮಾತ್ರವಲ್ಲ ವಿದ್ಯಾರ್ಥಿಗಳೂ ಕೂಡ ನಮ್ಮ ಭಾಷೆಯ ಕುರಿತು ಸದಾ ಅಭಿಮನವನ್ನು ಹೊಂದಿರಬೇಕೆAದು ನುಡಿದರು. ಬಹುಮಾನ ವಿತರಕರಾಗಿ ಉಪಸ್ಥಿತರಿದ್ದ ಶಿಕ್ಷಕಿ, ಕಸಾಪಆಜೀವ ಸದಸ್ಯರೂ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಜಯಶ್ರೀ ಆಚಾರಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತ ವಿದ್ಯಾರ್ಥಿ ದೆಸೆಯಲ್ಲಿ ಸಾಹಿತ್ತಯಾಸಕ್ತಿ ಬೆಳೆಸಿಕೊಂಡಲ್ಲಿ ಬರೆವಣಿಗೆಯ ಕೌಶಲವನ್ನು ಬೆಳೆಸಿಕೊಳ್ಳಲು ಸಹಕಾರಿ ಎಂದು ನುಡಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಬAಢಾರಿ ಮಾತನಾಡಿ ಶುದ್ಧ ಕನ್ನಡ ಭಾಷೆ ಇಂದು ಯಕ್ಷಗಾನದಂತಹ ಕಲೆಯಲ್ಲಿ ಕಾಣಲು ಸಾಧ್ಯ. ವಿದ್ಯಾರ್ಥಿಗಳು ಸುಂದರವಾಗಿ ಬರೆಯುವ, ಮಾತನಾಡುವ ಕೌಶಲ ಗಳಿಸಿಕೊಳ್ಳಬೇಕೆಂದು ನುಡಿದರು. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಮಧುರಾ ವಿ.ನಾಯ್ಕ ಪ್ರಥಮ, ತೇಜಸ್ವಿನಿ ಹೆರಿಯಾ ನಾಯ್ಕ ದ್ವಿತೀಯ ಹಾಗೂ ಪ್ರಿಯಾ ಲೋಕೇಶ ನಾಯ್ಕ ತೃತೀಯ ಬಹುಮಾನ ಪಡೆದರು. . ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿನಿ ಮಧುರಾ ನಾಯ್ಕ ಕನ್ನಡ ನಾಡು ನುಡಿಯ ಕುರಿತು ಮಾತನಾಡಿದಳು.ಕಾರ್ಯಕ್ರಮದಲ್ಲಿ ಶಿಕ್ಷಕ ಪ್ರಕಾಶ ಶಿರಾಲಿ ಸ್ವಾಗತಿಸಿದರು. ಶಿಕ್ಷಕಿ ಭಾರತಿ ಶಾನಭಾಗ ನಿರ್ವಹಿಸಿದರು.ಬಾರಿಸು ಕನ್ನಡ ಡಿಂಡಿಮ ಗೀತೆಯ ಸಾಮೂಹಿಕ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರೇಶ್ಮಾ ನಾಯಕ, ರಾಜೀವ ಬಾಂದೇಕರ, ಸವಿತಾ ನಾಯ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: