May 12, 2024

Bhavana Tv

Its Your Channel

ಐವಾನ್ ಡಿಸೋಜ ಅವರು ನೀಡಿದ ಹೇಳಿಕೆ ಬಾಲಿಶವಾದ ಹೇಳಿಕೆಯಾಗಿದೆ – ಬಿ.ಜೆ.ಪಿ. ಮಂಡಳ ಅಧ್ಯಕ್ಷ ಸುಬ್ರಾಯ ದೇವಾಡಿಗ

ಭಟ್ಕಳ:- ಜಿಲ್ಲೆಯ ಶಾಸಕರು, ಸಂಸದರು ರಾಜೀನಾಮೆ ನೀಡಬೇಕು ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಅವರು ನೀಡಿದ ಹೇಳಿಕೆ ಬಾಲಿಶವಾದ ಹೇಳಿಕೆಯಾಗಿದೆ ಎಂದು ಬಿ.ಜೆ.ಪಿ. ಮಂಡಳ ಅಧ್ಯಕ್ಷ ಸುಬ್ರಾಯ ದೇವಡಿಗ ಖಾರವಾಗಿ ಪ್ರಶ್ನಿಸಿದ್ದಾರೆ.

ಪರೇಶ ಮೇಸ್ತ ಸಾವಿನ ಕುರಿತು ಸಿ.ಬಿ.ಐ. ತನಿಖೆಯನ್ನು ಮಾಡಿ ಬಿ ವರದಿ ನೀಡಿದ್ದಕ್ಕೆ ಜಿಲ್ಲೆಯ ಶಾಸಕರು, ಸಂಸದರು ರಾಜೀನಾಮೆ ನೀಡಬೇಕು ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಅವರು ನೀಡಿದ ಹೇಳಿಕೆ ಬಾಲಿಶವಾದ ಹೇಳಿಕೆಯಾಗಿದೆ. ಒಮ್ಮೆಯೂ ಗ್ರಾಮ ಪಂಚಾಯತಕ್ಕೆ ಕೂಡಾ ಆಯ್ಕೆಯಾಗದ ಡಿಸೋಜ ಹಿಂಬಾಗಿಲಿನಿದ ಅಧಿಕಾರ ಅನುಭವಿಸಿದವರಾಗಿದ್ದು ಅವರಿಗೆ ರಾಜೀನಾಮೆ ಕೇಳುವ ನೈತಿಕ ಹಕ್ಕಿದೆಯೇ ಎಂದು ಬಿ.ಜೆ.ಪಿ. ಮಂಡಳ ಅಧ್ಯಕ್ಷ ಸುಬ್ರಾಯ ದೇವಡಿಗ ಖಾರವಾಗಿ ಪ್ರಶ್ನಿಸಿದ್ದಾರೆ.
ಬಿ.ಜೆ.ಪಿ. ಕಾರ್ಯಾಲಯದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನಮ್ಮ ಶಾಸಕರು, ಸಂಸದರು ಜನರಿಂದ ಆಯ್ಕೆಯಾಗಿ ಆಯಾಯ ಹುದ್ದೆಗೇರಿದವರು ಇವರ ಹಾಗೆ ಹಿಂಬಾಗಿಲಿನಿದ ಪ್ರವೇಶ ಮಾಡಿದವರಲ್ಲ ಹಾಗಾಗಿ ಅವರು ರಾಜೀನಾಮೆ ಕೊಡುವಂತೆ ಕೇಳುವ ಹಕ್ಕು ಇವರಿಗೆ ಇಲ್ಲ ಎಂದರು.
ಕಾಂಗ್ರೆಸ್‌ಗೆ ಪರೇಶ ಮೇಸ್ತನ ಹೆಸರು ಹೇಳಲಿಕ್ಕೂ ಹಕ್ಕಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಆತನ ಬಗ್ಗೆ ಮಾತನಾಡದ ಇವರು ಈಗ ವರದಿ ಬಂದ ನಂತರ ಮುಸ್ಲೀಮರನ್ನು ಓಲೈಸಲು ಪರೇಶ ಮೇಸ್ತನ ಹೆಸರು ಹೇಳುತ್ತಿದ್ದಾರೆ. ಪರೇಶ ಮೇಸ್ತನ ಸಾವು ಸಂಭವಿಸಿದಾಗ ಸಿದ್ಧರಾಮಯ್ಯ ಮುಖ್ಯ ಮಂತ್ರಿಯಾಗಿದ್ದರು. ಅಂದೇ ಅವರು ದಾಖಲೆಗಳನ್ನು ನಾಶಪಡಿಸಿ ನಂತರ ಸಿ.ಬಿ.ಐ. ತನಿಖೆಗೆ ನೀಡಿದ್ದರು ಎಂದ ಸುಬ್ರಾಯ ದೇವಡಿಗ, ಸಿ.ಬಿ.ಐ. ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿಲ್ಲ. ಆದರೆ ಪರೇಶ ಮೇಸ್ತನ ಸಾವು ಒಂದು ಕೊಲೆಯಾಗಿದ್ದು ಸಿ.ಬಿ.ಐ. ವರದಿಯಿಂದ ಆತನ ತಂದೆಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಕೊಡಿಸಲು ನಮ್ಮ ಶಾಸಕರು ಮುಖ್ಯ ಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗಿದ್ದು ಪುನಃ ತನಿಖೆಗೆ ಒತ್ತಾಯಿಸಿದ್ದೇವೆ ಎಂದರು. ಐವಾನ್ ಡಿಸೋಜ ಅವರು 2000ಕ್ಕೂ ಹೆಚ್ಚು ಜನರ ಮೇಲೆ ಕೇಸು ದಾಖಲಿಸಲಾಗಿದೆ, 272 ಜನರ ಮೇಲೆ ರೌಡಿ ಶೀಟ್ ತೆಗೆದಿರುವುದು ಕಾಂಗ್ರೆಸ್ ಸರಕಾರವಿದ್ದಾಗಲೇ ಎನ್ನುವುದನ್ನು ಐವಾನ್ ಡಿಸೋಜ ಮರೆತಂತಿದೆ.
ಅನಾವಶ್ಯಕವಾಗಿ ಸಾವಿರಾರು ಜನರ ಮೇಲೆ ಪ್ರಕರಣ ದಾಖಲಿಸಿರುವುದಕ್ಕೆ ಕಾಂಗ್ರೆಸ್ ಸರಕಾರವೇ ಹೊಣೆ ಎಂದ ಅವರು ತಮ್ಮ ಸರಕಾರದ ಅವಧಿಯಲ್ಲಿಯೇ ನಡೆದಿರುವುದನ್ನು ಡಿಸೋಜ ಮರೆತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ್, ದಿನೇಶ ನಾಯ್ಕ, ಶ್ರೀಕಾಂತ ನಾಯ್ಕ, ಭಾಸ್ಕರ ದೈಮನೆ, ಮೋಹನ ನಾಯ್ಕ, ಪಾಂಡುರಗ ನಾಯ್ಕ ಮುಂತಾದವರಿದ್ದರು.

error: