April 29, 2024

Bhavana Tv

Its Your Channel

ಮನುವಾದಿಗಳ ಕೈಯಿಂದ ಸಂವಿಧಾನ ರಕ್ಷಣೆ ಅಸಾಧ್ಯ -ಸತೀಶ್‌ಕುಮಾರ್

ಭಟ್ಕಳ: ದೇಶದ ಅತ್ಯುನ್ನತ ಗ್ರಂಥವಾಗಿರುವ ಸಂವಿಧಾನವನ್ನು ಮನುವಾದಿಗಳಿಂದ ರಕ್ಷಿಸಬೇಕಾಗಿದೆ ಎಂದು ಸದ್ಭಾವನ ಮಂಚ್ ಅಧ್ಯಕ್ಷ ಸತೀಶ್ ಕುಮಾರ್ ಕರೆ ನೀಡಿದರು.
ಅವರು ಸಂವಿಧಾನ ದಿನದ ನ.26 ರಂದು ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ಸದ್ಭಾವನ ಮಂಚ್ ವತಿಯಿಂದ ‘ಸಾರ್ವಜನಿಕ ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದಾತ್ತ ಆಶಯಗಳನ್ನು ಹೊಂದಿರುವ, ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ನೀಡುತ್ತಿರುವ ನಮ್ಮದೇಶದ ಸಂವಿಧಾನವನ್ನು ಬದಲಾಯಿಸಬೇಕೆಂಬ ದುಷ್ಟಾಲೋಚನೆ ಹೊಂದಿರುವ ಮನುವಾದಿಗಳು ಸಂವಿಧಾನ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಅವರಿಂದಲೇ ನಮ್ಮ ದೇಶದ ಸಂವಿಧಾನ ಸಂಕಷ್ಟದಲ್ಲಿದೆ. ಆದ್ದರಿಂದ ಮನುವಾದಿಗಳ ಕೈಯಿಂದ ದೇಶ ಹಾಗೂ ದೇಶದ ಸಂವಿಧಾನವನ್ನುರಕ್ಷಣೆ ಮಾಡಬೇಕುಎಂದುಕರೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಅಂಜುಮನ್ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕ ಪ್ರೋ. ಆರ್.ಎಸ್.ನಾಯಕ ‘ಭಾರತ ಪ್ರಜಾಪ್ರಭುತ್ವದ ಜನನಿ’ ಎಂಬ ದ್ಯೇಯ ವಾಕ್ಯದೊಂದಿಗೆ ಈ ವರ್ಷ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಜಗತ್ತಿನಲ್ಲೇ ಅತಿಶ್ರೇಷ್ಟ ಸಂವಿಧಾನ ನಮ್ಮದು ಇದg Àಅಡಿಯಲ್ಲಿ ನಾವು ಬದಕುಬೇಕು. ಇಲ್ಲಿ ಯಾವುದೇ ಜಾತಿ, ಧರ್ಮ, ಭಾಷೆಗೆ ಮೇಲ್ಮೆ ಎಂಬುದಿಲ್ಲ. ಸಂವಿಧಾನದಡಿಯಲ್ಲಿ ಎಲ್ಲರೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಹೊಂದಿದ್ದಾರೆಎAದರು.
ನ್ಯಾಯಾವಾದಿ ಸಂತೋಷ್ ನಾಯ್ಕ ಸಂವಿಧಾನ ಪೀಠಿಕೆಯನ್ನುಕನ್ನಡದಲ್ಲಿ ಹಾಗೂ ಮೌಲಾನ ಸೈಯ್ಯದ್‌ಝುಬೇರ್‌ಉರ್ದು ಭಾಷೆಯಲ್ಲಿ ವಾಚಿಸಿದರು.
ಈ ಸಂದರ್ಭದಲ್ಲಿ ನಾಮಧಾರಿ ಸಮಾಜ ಹಿರಿಯ ಮುಖಂq Àಎಂ.ಆರ್.ನಾಯ್ಕ, ದಲಿತ ಮುಖಂಡರಾದ ಕೆ.ಮರಿಸ್ವಾಮಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ರಖೀಬ್‌ಎಂ.ಜೆ, ಜಮಾಅತೆಇಸ್ಲಾಮಿ ಹಿಂದ್ ಉ.ಕ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಮಾತನಾಡಿದರು.
ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

error: