April 29, 2024

Bhavana Tv

Its Your Channel

ಕ್ಯಾನ್ಸರ್ ಬಗ್ಗೆ ಭಯಬೇಡ, ಮುಂಜಾಗೃತೆ ಅಗತ್ಯ – ಡಾ.ಅಜಯಕುಮಾರ

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ
ಜಿ.ಎಸ್.ಎಸ್, ಜಿ.ಎಸ್.ಬಿ ಮಹಿಳಾ ಸಮಿತಿ ಹಾಗೂ ಭಟ್ಕಳ ತಾಲೂಕಾ ಆಸ್ಪತ್ರೆಯ ಸಹಯೋಗದೊಂದಿಗೆ
ದಿ. ಕೆ.ಎಂ.ನಾಯಕ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಶಾಂತೇರಿ ಕಾಮಾಕ್ಷಿ ಸದನದಲ್ಲಿ ಆಯೋಜಿಸಲಾಯಿತು.

ದಿ. ಕೆ.ಎಂ.ನಾಯಕ ರವರ ಪುತ್ರಿ ಯೋಗ ಶಿಕ್ಷಕಿ ವಿಜಯಲಕ್ಷಿö್ಮÃ ವಿ ಶಾನಭಾಗ ಬಾಳೇರಿಯವರು ದೀಪಬೆಳಿಗಿಸಿ ಶಿಬಿರವನ್ನು ಉದ್ಘಾಟಿಸಿ ದಿ.ಕೆ.ಎಂ.ನಾಯಕ ರವರ ಸಮಾಜ ಸೇವೆಯನ್ನು ಸ್ಮರಿಸಿದರು.
ಮುಖ್ಯಅತಿಥಿಗಳಾದ ಡಾ.ಅಜಯ ಕುಮಾರ “ಕ್ಯಾನ್ಸರ್ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿ, ಕ್ಯಾನ್ಸರ್ ಬಗ್ಗೆ ಭಯಬೇಡ, ಮುಂಜಾಗೃತೆ ಅಗತ್ಯ” ಎಂದರು.
ಇನ್ನೋರ್ವ ಮುಖ್ಯಅತಿಥಿ ಡಾ.ಸವಿತಾ ಕಾಮತ ಮಾತನಾಡಿ “ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದು ಆರೋಗ್ಯ ಸೇವೆಯನ್ನು ಪಡೆಯಿರಿ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಮಹಿಳಾ ಸಮಿತಿಯ ಮುಖ್ಯಸ್ಥೆ ನೀತಾ ಕಾಮತ ರವರು “ವೈದ್ಯೋ ನಾರಾಯಣೋ ಹರಿ: – ಭಟ್ಕಳ ಹಾಗೂ ಗ್ರಾಮೀಣ ಭಾಗದ ವಿಶೇಷವಾಗಿ ಮಹಿಳೆಯರಿಗೆ ಉತ್ತಮ ವೈದ್ಯಕೀಯ ಸೇವೆಯನ್ನು ಭಟ್ಕಳ ತಾಲೂಕಾ ಆಸ್ಪತ್ರೆಯು ನೀಡುತ್ತಿದೆ ಎಂದು ತಿಳಿಸುತ್ತಾ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿ ತಂಡಕ್ಕೆ ಧನ್ಯವಾದ ಕೋರಿದರು.
ತಜ್ಞ ವೈದ್ಯರುಗಳಾದ ಡಾ. ಕ್ಷಿತೀಜ ಶೆಟ್ಟಿ, ಡಾ. ಲಕ್ಷಿö್ಮÃಶ ನಾಯ್ಕ, ಡಾ.ಸಹನ್ ಕುಮಾರ್, ಡಾ. ಸಂಗೀತಾ ಆರೋಗ್ಯ ತಪಾಸಣೆ ಮಾಡಿದರು. ತಾಲೂಕಾ ಆಸ್ಪತ್ರೆಯ ಸಿಬ್ಬಂದಿಗಳು, ಶುಶ್ರುಕೀಯರು, ಆಶಾ ಕಾರ್ಯಕರ್ತೆಯರು ಸಹಕರಿಸಿದರು. ವನಿತಾ ಮಹಿಳಾ ಸಮಿತಿಯ ಶ್ರೀಮತಿ ವೀಣಾ ಪೈ, ಜಿ.ಎಸ.ಎಸ ಅಧ್ಯಕ್ಷರಾದ ಕಲ್ಪೇಶ ಪೈ, ಗೌರವಾಧ್ಯಕ್ಷರಾದ ನರೇಂದ್ರ ನಾಯಕ, ಸಮಾಜ ಪ್ರಮುಖರಾದ ಅಚ್ಚುತ ಕಾಮತ, ರಾಮು ಕಾಮತ, ಶ್ರೀಧರ ನಾಯಕ, ಸಮಿತಿ ಸದಸ್ಯರಾದ ಗಿರಿಧರ ನಾಯಕ, ದೀಪಕ ನಾಯಕ, ಪ್ರವೀಣ ನಾಯಕ, ಕೃಷ್ಣಾನಂದ ಪ್ರಭು, ಉದಯ ಪೈ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ನೂರಾರು ಸಾರ್ವಜನಿಕರು ಶಿಬಿರದ ಉಪಯೋಗವನ್ನು ಪಡೆದರು. ಕಾರ್ಯದರ್ಶಿ ಶ್ರೀನಾಥ ಪೈ ಕಾರ್ಯಕ್ರಮ ನಿರೂಪಿಸಿದರು.

error: