April 30, 2024

Bhavana Tv

Its Your Channel

ಡಿ.4ರಂದು ಮುರುಡೇಶ್ವರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ: ಶ್ರೀನಿವಾಸ ಆಸ್ಪತ್ರೆ ಮುಕ್ಕ ಸುರತ್ಕಲ್, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುರುಡೇಶ್ವರ ಇವರ ಆಶ್ರಯದಲ್ಲಿ ಕ್ರಿಯಾಶೀಲ ಗೆಳೆಯರ ಸಂಘ ಭಟ್ಕಳ ಹಾಗೂ ಲಯನ್ಸ್ ಕ್ಲಬ್ ಮುರುಡೇಶ್ವರ ಇವರ ಸಹಯೋಗದೊಂದಿಗೆ ಡಿ.4ರಂದು ಬೃಹತ್ ಉಚಿತ. ವೈದ್ಯಕೀಯ ಶಿಬಿರವು ಮುರುಡೇಶ್ವರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ ಎಂದು ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ ಹೇಳಿದರು.

ಅವರು ಈ ಕುರಿತು ಭಟ್ಕಳ ಆಸರಕೇರಿ ನಾಮಧಾರಿ ಸಭಾಭವನದಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದರು. ಮಂಗಳೂರಿನ ಹೆಸರಾಂತ ಶ್ರೀನಿವಾಸ ಆಸ್ಪತ್ರೆಯ ನುರಿತ ವೈದ್ಯರ ತಂಡ ಈ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ರವಿವಾರ ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 3ರ ತನಕ ಶಿಬಿರ ನಡೆಯಲಿದ್ದು, ಜನರಲ್ ಮೆಡಿಸಿನ್, ಶ್ವಾಸಕೋಶ ಸಂಬAಧಿ ಕಾಯಿಲೆ, ಚರ್ಮರೋಗ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ಕಿವಿ ಮೂಗು ಗಂಟಲು ಚಿಕಿತ್ಸೆ, ನೇತ್ರ ಚಿಕಿತ್ಸೆ, ಹೃದಯ ರೋಗ, ಶಸ್ತ್ರ ಚಿಕಿತ್ಸೆ ವಿಭಾಗ, ಎಲುಬು ಮತ್ತು ಕೀಲು ಚಿಕಿತ್ಸೆ, ಅಪೆಂಡಿಕ್ಸ್, ಅಲ್ಲಸರ್, ಥೈರಾಯಿಡ್, ಹರಣಿ,ಗರ್ಭಕೋಶದ ಗಡ್ಡೆ, ಮೂಲವ್ಯಾಧಿ ಮುಂತಾದವುಗಳಿಗೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುವುದು. ರೋಗಿಗಳಿಗೆ ಗಂಭೀರ ಕಾಯಿಲೆಗಳಿದ್ದರೆ ಆರೋಗ್ಯ ಕಾರ್ಡ ಮೂಲಕ ಶಸ್ತ್ರ ಚಿಕಿತ್ಸೆಗೆ ಏರ್ಪಾಟು ಮಾಡಲಾಗುವುದು ಎಂದರು.
ಮುರುಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎ. ಹೆಗಡೆ ಮಾತನಾಡಿ, ಲಯನ್ಸ್ ಕ್ಲಬ್ ಸೇವೆಗಾಗಿಯೇ ಇದ್ದು, ಎಲ್ಲಿ ಅಗತ್ಯತೆ ಇರುತ್ತದೆಯೋ ಅಲ್ಲಿ ಲಯನ್ನ ಕ್ಲಬ್ ಜನರಿಗೆ ಸೇವೆಯನ್ನು ನೀಡುತ್ತಾ ಬಂದಿದೆ. ರೋಗ ಬರುವುದಕ್ಕಿಂತ ಮೊದಲು ನಾವು ವೈದ್ಯರಲ್ಲಿ ತಪಾಸಣೆ ಮಾಡಿಕೊಂಡರೆ ರೋಗ ಉಲ್ಬಣವಾಗುವುದನ್ನು ತಡೆಯಬಹುದು. ಶಿಬಿರದಲ್ಲಿ ವಿಶೇಷವಾಗಿ ಸ್ತ್ರೀರೋಗ ತಜ್ಞರು, ಹೃದಯ ರೋಗ ತಜ್ಞರು ಪಾಲ್ಗೊಳ್ಳುತ್ತಿದ್ದು, ಮುರುಡೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು. ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು. ಲಯನ್ನ ಕ್ಲಬ್ ಸದಸ್ಯರಾದ ವಿಶ್ವನಾಥ ಕಾಮತ್,ಬಸ್ತ್ಸಂವ ಡಿಕೊಸ್ತ, ಕ್ರೀಯಾಶೀಲ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ನಾಯ್ಕ, ಕ್ರಿಯಾಶೀಲ ಸಂಘದ ಕಾರ್ಯದರ್ಶಿ ಪಾಂಡು ನಾಯ್ಕ ಉಪಸ್ಥಿತರಿದ್ದರು. ಪಾಂಡುರAಗ ನಾಯ್ಕ ವಂದನಾರ್ಪಣೆ ಮಾಡಿದರು.

error: