May 17, 2024

Bhavana Tv

Its Your Channel

ಭಟ್ಕಳ ತಾಲೂಕಾಸ್ಪತ್ರೆಯಲ್ಲಿ 10 ಹಾಸಿಗೆಯುಳ್ಳ ಹೊಸ ತೀವ್ರ ನಿಗಾ ಘಟಕ ಶಾಸಕ ಸುನೀಲ ನಾಯ್ಕರಿಂದ ಉದ್ಘಾಟನೆ

ಭಟ್ಕಳ ತಾಲೂಕಾ ಆಸ್ಪತ್ರೆ ಭಟ್ಕಳದಲ್ಲಿ ಹೊಸದಾಗಿ ನಿರ್ಮಾಣವಾದ 10 ಹಾಸಿಗೆಯುಳ್ಳ ತೀವ್ರ ನಿಗಾ ಘಟಕವನ್ನು ಶುಕ್ರವಾರದಂದು ಶಾಸಕ ಸುನೀಲ ನಾಯ್ಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ‘ ಸದ್ಯ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಮೂರು ಬೆಡ್ ನ ತೀವ್ರ ನಿಗಾ ಘಟಕವನ್ನು ಸರ್ಕಾರದ ಅನುದಾನದಿಂದ 10 ಬೆಡ್ ಪರಿವರ್ತಿಸಲಾಗಿದೆ. ರಾಜ್ಯದ 10 ಸರ್ಕಾರಿ ಆಸ್ಪತ್ರೆಯಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಯು ಒಂದಾಗಿದೆ. ಈ ಹಿಂದೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರಲು ಹಿಂದೇಟು ಹಾಕುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಬದಲಾವಣೆಯಾಗಿ ಉತ್ತಮ ಚಿಕಿತ್ಸೆ ಸಿಗುವ ನಂಬಿಕೆ ಸಾರ್ವಜನಿಕ ಮೂಡಿದೆ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಾಗಿದ್ದರೆ. ಈ ಹಿಂದೆ ಆರೋಗ್ಯ ಸಚಿವರು ಕುಮಟಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲು ಒತ್ತಾಯಿಸಿದ ವೇಳೆ ಭಟ್ಕಳಕ್ಕೆ ಭೇಟಿ ನೀಡಿ ಸರ್ಕಾರಿ ಆಸ್ಪತ್ರೆಯನ್ನು ಈ ರೀತಿಯಲ್ಲಿಯು ಉತ್ತಮ ವ್ಯವಸ್ಥೆ ಕಲ್ಪಿಸಿರುದನ್ನು ನೋಡಿ ಪ್ರಶಂಸೆ ವ್ಯಕ್ತ ಪಡಿಸಿದ ಅವರು ಬೆಂಗಳೂರಿಗೆ ತೆರಳಿದ ವೇಳೆಯಲ್ಲಿ ಹತ್ತಾರು ಶಾಸಕರ ಮುಂದೆ ಭಟ್ಕಳ ಸರ್ಕಾರಿ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ನಮಗೆ ಹೆಮ್ಮೆ ತರುತ್ತದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರವಾಗಿರುವ ಮಂಕಿ ಆಸ್ಪತ್ರೆಯನ್ನು 10 ಕೋಟಿ ಅನುದಾನ ತಂದು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಿದಂತೆ ಶೀಘ್ರದಲ್ಲಿ ಸರ್ಕಾರ ಮಟ್ಟದಲ್ಲಿ ಮಾತು ಕಥೆ ನಡೆಸಿ ಭಟ್ಕಳ ಸರ್ಕಾರಿ ಆಸ್ಪತ್ರೆಯನ್ನು ಕೂಡ ಮೇಲ್ದರ್ಜೆಗೇರಿಸುತ್ತೇನೆ ಎಂದು ಭರವಸೆ ನೀಡಿದರು.

ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯ ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ‘ಈ ಹಿಂದೆ ಭಟ್ಕಳ ಸರ್ಕಾರಿ ಆಸ್ಪತ್ರೆಯೆ ಎಂದರೆ ಮೂಗು ಮುರಿಯುತ್ತಿದ್ದ ರೋಗಿಗಳು ತಮ್ಮ ಚಿಕಿತ್ಸೆ ಪಡೆಯಲು ನರಕ ಅನುಭವಿಸುತ್ತಿದರು. ಆದರೆ ಈಗ ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತ ವ್ಯವಸ್ಥೆ ಮತ್ತು ಕಟ್ಟಡ ಅಭಿವೃದ್ಧಿ ಪಡಿಸಿದ್ದಾರೆ. ಆದ್ರೆ ಕೆಲ ರೋಗಿಗಳು ವೈದ್ಯರನ್ನು ಕೆಟ್ಟ ಶಬ್ಧದಿಂದ ನಿಂದಿಸುತ್ತಿರುವ ವಿಷಯ ಕೇಳಿ ಬಂದಿದೆ. ಆದರೆ “ವೈದ್ಯೋ ನಾರಾಯಣ ಹರಿ” ಎನ್ನುವುದನ್ನು ಮರೆಯದೆ ಅವರ ಸೇವೆಯನ್ನು ಗೌರವಿಸ ಬೇಕು ಎಂದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸದ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಮಾತನಾಡಿ’ ಆಸ್ಪತ್ರೆಯು ದಿನದಿಂದ ದಿನಕ್ಕೆ ಹೆಸರುವಾಸಿಯಾಗುವುದರ ಜೊತೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ನೀಡುವ ವ್ಯವಸ್ಥೆ ಉತ್ತಮಗೊಳಿಸಿದ್ದಾರೆ. ತಾಲೂಕಾಸ್ಪೆತ್ರೇಯ ಬೆಳವಣಿಗೆ ತಾಲೂಕಾಡಳಿತ ಸಹಕಾರವಿದ್ದು. ಭಟ್ಕಳ ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಯಲ್ಲಿ ಇಂದು ಇನ್ನೊಂದು ಮೈಲಿಗಲ್ಲು ಸೇರ್ಪಡೆಯಾಗಿದ್ದು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಹೆಚ್ಚಿನ ಬೆಡ್ ಗಳ ಅವಶ್ಯಕತೆ ಹೆಚ್ಚಾಗಿತ್ತು. ಅದರಂತೆ ಮೂರು ಬೆಡ್ ಗಳಿಂದ ಸದ್ಯ ಹತ್ತು ಬೆಡ್ ಗಳಿಗೆ ಹೆಚ್ಚಳವಾಗಿದೆ ಎಂದರು

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರ ಹಾಗೂ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಭಟ್ಕಳ ಎಜುಕೇಷನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯ್ಕ, ಯಲ್ವಡಿಕವೂರ ಪಂಚಾಯತ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: