May 14, 2024

Bhavana Tv

Its Your Channel

ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ, ಗಣಪತಿ ಮೊಗೇರ ಅವರಿಗೆ ಸ್ವಾಗತ

ಭಟ್ಕಳ: ಭಾರತೀಯ ಸೈನ್ಯದಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ ನಿವಾಸಿ ಗಣಪತಿ ಮಂಜುನಾಥ ಮೊಗೇರ ಅವರು ಭಟ್ಕಳಕ್ಕೆ ಆಗಮಿಸಿದ್ದು, ಸಾರ್ವಜನಿಕರು ಅವರಿಗೆ ಹೂಮಾಲೆ ಹಾಕಿ, ಜಯಘೋಷಗಳೊಂದಿಗೆ ಸ್ವಾಗತ ಕೋರಿದರು.

ಭಟ್ಕಳ ಸಂಶುದ್ದೀನ್ ಸರ್ಕಲ್ ನಲ್ಲಿ ಭಟ್ಕಳ ಮಾಜಿ ಸೈನಿಕರ ಸಂಘದವರು ಗಣಪತಿ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕ ಸಂಘದ ಶ್ರೀಕಾಂತ ನಾಯ್ಕ ಆಸರಕೇರಿ, ಸೇನೆಯಲ್ಲಿ ಸೈನಿಕರು ಪ್ರತಿ ದಿನ 24 ಗಂಟೆಯೂ ಕರ್ತವ್ಯ ನಿರತರಾಗಿರುತ್ತಾರೆ. ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿವಿಧ ಜನಾಂಗದ ಜನರೊಂದಿಗೆ ಕೆಲಸ ಮಾಡಿದ ಅನುಭವ ಸೈನಿಕರದ್ದಾಗಿರುತ್ತದೆ. ಸೈನಿಕರಿಗೆ ಉಳಿದವರಂತೆ ಹೆಚ್ಚಿನ ಸ್ವಾತಂತ್ರ ಇರುವುದಿಲ್ಲ. 21 ವರ್ಷಗಳ ಕಠಿಣ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ನಂತರ ಸಹಾಯಕ ಆಯುಕ್ತರ ಕಚೇರಿಯ ಮುಂದೆ ಮೊಗೇರ ಸಮುದಾಯದವರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ಮೊಗೇರ ಸಮಾಜದ ಮುಖಂಡರಿAದ ಸನ್ಮಾನವನ್ನು ಸ್ವೀಕರಿಸಿದರು. ನಂತರ ಅವರನ್ನು ಬೆಳಕೆಗೆ ಬೈಕ್ ಡ್ಯಾಲಿ, ನಂತರ ಅಲ್ಲಿಂದ ಚಂಡೆ ವಾದನ, ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ಸೋಡಿಗದ್ದೆ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ ನಾಯ್ಕ, ಭಾಸ್ಕರ ದೈಮನೆ, ಲಕ್ಷ್ಮೀನಾರಾಯಣ ನಾಯ್ಕ, ಪಾಂಡು ನಾಯ್ಕ ಆಸರಕೇರಿ, ಎಮ್.ಡಿ. ಫಕ್ಕಿ, ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಜಟಗಾ ಮೊಗೇರ, ನ್ಯಾಯವಾದಿ ನಾಗರಾಜ ಈ.ಎಚ್, ಮುಕುಂದ ಮೊಗೇರ, ಎಫ್. ಕೆ. ಮೊಗೇರ, ಯಾದವ ಮೊಗೇರ, ದಾಸಿ ಮೊಗೇರ, ಭಾಸ್ಕರ ಮೊಗೇರ, ಗಣೇಶ ಮೊಗೇರ, ಕೃಷ್ಣ ಮೊಗೇರ, ಮಹೇಶ ಮೊಗೇರ, ಗುರುದಾಸ ಮೊಗೇರ, ಪಾಂಡುರAಗ ನಾಯ್ಕ, ದೇವಾನಂದ ಮೊಗೇರ ಮತ್ತಿತರರು ಉಪಸ್ಥಿತರಿದ್ದರು.
2002ನೇ ಇಸವಿಯಲ್ಲಿ ಗಣಪತಿ ಮೊಗೇರ ಇಂಜಿನೀಯರ್ಸ್ ಗ್ರೂಪ್‌ನ ಬೆಂಗಳೂರು ಇಂಜಿನೀಯರ್ಸ್ ದಳಕ್ಕೆ ಸೇರ್ಪಡೆಗೊಂಡು, ಅಲ್ಲಿನ ತರಬೇತಿ ಕೇಂದ್ರದಲ್ಲಿ 2 ವರ್ಷ ಕಠಿಣ ತರಬೇತಿ ಪಡೆದ ನಂತರ 7 ಇಎನ್‌ಟಿಆರ್ ರೆಜಿಮೆಂಟ್‌ಗೆ ನೇಮಕಗೊಂಡರು. ಜಮ್ಮು ಕಾಶ್ಮೀರದ ಕುಪ್ಪಾರ, ರಾಜಸ್ಥಾನದ ನಸೀರಾಬಾದ್‌ನಲ್ಲಿ ಸೇವೆಯ ನಂತರ ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರದ ಶ್ರೀನಗರ, ಅರುಣಾಚಲ ಪ್ರದೇಶದ ತವಾಂಗ್, ರಾಜಸ್ಥಾನ ಜೋಧಪುರದಲ್ಲಿಯೂ ಕರ್ತವ್ಯ ನಿಭಾಯಿಸಿದ್ದಾರೆ. ಎನ್.ಎಸ್.ಜಿಯಲ್ಲಿಯೂ 3 ವರ್ಷ ಕಠಿಣ ತರಬೇತಿ ಪಡೆದಿರುವ ಗಣಪತಿ, ಮತ್ತೆ ಜಮ್ಮುಕಾಶ್ಮೀರ ಬಾರಾಮುಲ್ಲಾ, ರಾಜಸ್ಥಾನದ ಶ್ರೀಗಂಗಾನಗರ, ಆಸ್ಸಾಮ್ ಗೌಹಾಟಿಯಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನ ಎಮ್‌ಇಜಿ ಕಚೇರಿಯಲ್ಲಿ ನಿವೃತ್ತಿ ಪಡೆದು ಊರಿನತ್ತ ಮುಖ ಮಾಡಿದ್ದಾರೆ.

error: