May 14, 2024

Bhavana Tv

Its Your Channel

ಭಟ್ಕಳಕ್ಕೆ ಅನಾಮಧೇಯ ಪತ್ರ, ಅಂಚೆ ಪತ್ರದಲ್ಲಿ ಅರ್ಧಚಂದ್ರ, ನಕ್ಷತ್ರ, 786 ಸಂಖ್ಯೆ: ಚೆನ್ನೈನಲ್ಲಿ ಓರ್ವ ಪೊಲೀಸ್ ವಶಕ್ಕೆ

ಭಟ್ಕಳ: ಚೆನ್ನೈ ಕಲೆದಾ- ನೆಕ್ಟ್ ಟಾರ್ಗೆಟ್ ಡಿಸೆಂಬರ್ 25 ಎಂಡ್ ಹ್ಯಾಪಿ ಜೆಸ್ ನ್ಯೂ ಇಯರ್ 2023′ ಎಂದು ಇಂಗ್ಲೀಷ್‌ನಲ್ಲಿ ಬರೆದ ಪೋಸ್ಟ್ ಕಾರ್ಡ್ ಡಿಸೆಂಬರ್‌ನಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ತಲುಪಿತ್ತು. ಸೂಕ್ಷ್ಮ ವಿಷಯವಾಗಿದ್ದರಿಂದ ವಿಚಾರವನ್ನ ಬಹಿರಂಗಪಡಿಸದೇ ಪೊಲೀಸರು ತನಿಖೆ ನಡೆಸಿದ್ದರು.

ಪೋಸ್ಟ್ ಕಾರ್ಡ್ ಮಂಗಳೂರಿನ ಸುಬ್ರಹ್ಮಣ್ಯದಿಂದ ಪೋಸ್ಟ್ ಆಗಿದೆ ಎನ್ನಲಾಗಿದ್ದು, ಭಯೋತ್ಪಾದಕ ಚಟುವಟಿಕೆಗೂ ಇದಕ್ಕೂ ಯಾವುದೇ ಲಿಂಕ್ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೇ ರೀತಿ ಪೋಸ್ಟ್ ಕಾರ್ಡ್ ಬೆದರಿಕೆಗೆ ಸಂಬAಧಿಸಿದAತೆ ಚೆನ್ನೈ ಪೊಲೀಸರು ಹೊಸಪೇಟೆ ಮೂಲದ ಹನುಮಂತಪ್ಪ ಎಂಬುವವನನ್ನು ಬಂಧಿಸಿದ್ದಾರೆ.

ಸದ್ಯ ಈತ ಭಟ್ಕಳ ಪೊಲೀಸರಿಗೆ ಬಾಂಬ್ ಬೆದರಿಕೆ ಪತ್ರ ಬರೆದ ಕುರಿತು ಭಟ್ಕಳ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈವರೆಗೂ ಭಟ್ಕಳಕ್ಕೆ ಬಾರದೇ ಇಲ್ಲಿಯ ಬಗ್ಗೆ ಮಾಹಿತಿ ಸಹ ಇರದ ಈತ ಪತ್ರ ಬರೆದಿದ್ದು ಯಾಕೆ? ಈತನಿಗೂ ಉಗ್ರವಾದಿಗಳಿಗೂ ಏನಾದ್ರು ಲಿಂಕ್ ಇದೆಯಾ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಹೆಚ್ಚಿನ ತನಿಖೆಗಾಗಿ ಭಟ್ಕಳ ಪೊಲೀಸರು ತಮಿಳುನಾಡಿಗೆ ತೆರಳಿದ್ದು ಈತನನ್ನು ತಮ್ಮ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗುವುದು ಎಂದು ಎಎಸ್‌ಪಿ ಸಿ.ಟಿ ಜಯಕುಮಾರ್ ತಿಳಿಸಿದ್ದಾರೆ.

error: