May 15, 2024

Bhavana Tv

Its Your Channel

ಅಬ್ದುಲ್ ರುಕ್ನುದ್ದೀನ್ ಗೆ ನ್ಯೂ ಶಮ್ಸ್ ಶಾಲೆಯ ಪ್ರತಿಷ್ಠಿತ “ನಜ್ಮೆಇಖ್ವಾನ್” ಚಿನ್ನದ ಪದಕ

ಭಟ್ಕಳ: ನ್ಯೂ ಶಮ್ಸ್ ಶಾಲೆಯ ಹತ್ತನೆ ತರಗತಿಯಲ್ಲಿ ಓದುತ್ತಿರುವ ಉತ್ತಮ ವಿದ್ಯಾರ್ಥಿಗೆ ನೀಡಲ್ಪಡುವ ಪ್ರತಿಷ್ಠಿತ “ನಜ್ಮೆಇಖ್ವಾನ್À” ಚಿನ್ನದ ಪದಕವನ್ನು ಈ ಬಾರಿ ಅಬ್ದುಲ್ ರುಕ್ನುದ್ದೀನ್ ಮುಡಿಗೇರಿದೆ.
ಭಾನುವಾರ ನಡೆದ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ನ್ಯೂಶಮ್ಸ್ ಸ್ಕೂಲ್ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅನಿವಾಸಿ ಉದ್ಯಮಿರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅತಿಕರ‍್ರಹ್ಮಾನ್ ಮುರೀರಿ ಪ್ರದಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುನೀರಿ, ಮುಸ್ಲಿಮರು ಜಗತ್ತಿಗೆ ಮಾದರಿಯಾಗಬೇಕಾದವರು. ನಿಮ್ಮ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದಾಗಿ ಜೀವನದಲಿ ್ಲಉತ್ತಮ ಯಶಸ್ಸುಗಳಿಸಬೇಕು. ಪ್ರವಾದಿ ಮುಹಮ್ಮದ್(ಸ)ರ ಅನುಯಾಯಿಗಳಾಗಿರುವ ನಾವು ಪ್ರವಾದಿಯ ಹಾದಿಯಲ್ಲಿ ಮುನ್ನೆಡೆಯುವಂತಾದಾಗ ಮಾತ್ರ ಬದುಕಿನಲ್ಲಿ ಖಂಡಿತ ಯಶಸ್ಸು ಲಭಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶಾಲಾಡಳಿತ ಸಮಿತಿಯ ಅಧ್ಯಕ್ಷ ಇಂಜಿನೀಯರ್ ನಝೀರ್‌ಆಹ್ಮದ್ ಮಾತನಾಡಿದರು. ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲ ಲಿಯಾಕತ್ ಅಲಿ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕ ಮಂಜುನಾತ್ ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ಅನಂ ಆಲಾ ಎಂ.ಟಿ. ಧನ್ಯವಾದ ಅರ್ಪಿಸಿದರು.
ಅಲ್‌ಕೌಸರ್ ಗರ್ಲ್ಸ್ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಶಕೀಲ್, ಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಶಾಖೆಯಅಧ್ಯಕ್ಷ ಮೌಲಾನಎಸ್.ಎಂ ಸೈಯ್ಯದ್‌ಝುಬೇರ್, ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಛರ‍್ಮನ್‌ಕಾದಿರ್ ಮೀರಾ ಪಟೇಲ್, ತರಬಿಯತ್‌ಎಜ್ಯುಕೇಶನ್ ಸೂಸೈಟಿ ಮಾಜಿಅಧ್ಯಕ್ಷಇಕ್ಬಾಲ್‌ಇಕ್ಕೇರಿ, ಆಡಳಿತ ಮಂಡಳಿಯ ಸಲಾಹುದ್ದೀನ್‌ಎಸ್.ಕೆ, ಮೌಲಾನ ಅಝೀಝರ‍್ರಹ್ಮಾನ್‌ರುಕ್ನುದ್ದೀನ್, ಡಾ. ಒವೇಸ್ ಕ್ವಾಜಾರುಕ್ನುದ್ದೀನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಾರ್ಷಿಕ ಸ್ಮರಣ ಸಂಚಿಕೆ ‘ಸ್ಪೆಕ್ಟರ್ಮ್'(spectrum)ಅನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

error: