May 16, 2024

Bhavana Tv

Its Your Channel

ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ಯೋಗಸನ ಹಾಗೂ ಯೋಗ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ ಯೋಗಸನ ಹಾಗೂ ಯೋಗ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಭಟ್ಕಳ ತಾಲೂಕಿನ ಬಿಐ ಶಿಕ್ಷಣ ಸಂಸ್ಥೆಗಳು, ಸರಕಾರಿ ಇಲಾಖೆಗಳಿಂದ ಬಂದ 4500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಬೆಳಿಗ್ಗೆ 5 ಗಂಟೆಗೆ ಆರಂಭವಾದ ಗಿನ್ನೆಸ್ ದಾಖಲೆಯನ್ನು ಸೇರಲಿರುವ ಯೋಗಧಾನ್‌ನಲ್ಲಿ ಭಟ್ಕಳದ ವಿದ್ಯಾರ್ಥಿಗಳು, ನಾಗರಿಕರು ಉತ್ಸಾದಿಂದಲೇ ಭಾಗವಹಿಸಿ ಸಂಭ್ರಮಿಸಿದರು.
ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಯೋಗಧಾನ್‌ಗೆ ಚಾಲನೆ ನೀಡಿ, ಭಾರತ ವಿಶ್ವ ಗುರುವಾಗಲು ಯೋಗ ಬೇಕು, ಯೋಗದಿಂದ ಸ್ವಸ್ಥ ಭಾರತ ನಿರ್ಮಾಣ ಸಾಧ್ಯ. ಇದು ನಮ್ಮ ನಡುವೆ ಐಕ್ಯತೆ ಮೂಡಿಸುತ್ತದೆ ಮತ್ತು ಶಕ್ತಿಯನ್ನು ವೃದ್ಧಿಯಾಗುವಂತೆ ಮಾಡುತ್ತದೆ ಎಂದರು.
ಜಿಲ್ಲಾ ಯುವಜನ ಸಬಲೀಕರಣ, ಯುವಜನ ಸೇವಾ ಕ್ರೀಡಾಧಿಕಾರಿ ಪ್ರವೀಣ, ಡಿವಾಯ್ ಎಸ್ಪಿ ಶ್ರೀಕಾಂತ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಉಪಸ್ಥಿತರಿದ್ದರು. ಆಯುಷ್ಯ ಇಲಾಖೆಯ ಡಾ. ಲಲಿತಾ ಶೆಟ್ಟಿ, ಡಾ. ಮಲ್ಲಿಕಾರ್ಜುನ, ಪತಂಜಲಿ ಯೋಗ ಶಿಬಿರದ ಶ್ರೀನಾಥ, ಪತಂಜಲಿ ಯೋಗ ಶಿಬಿರದ ಯಮುನಾ ಶೇಟ್, ಯೋಗ ಗುರು ಗೋವಿಂದ ದೇವಡಿಗ, ಮನುಷ್ಯ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಚಂದ್ರಕಾAತ ಶಾಂಗ್ಲಿ ವಂದಿಸಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಭಟ್ಕಳ ದೈಹಿಕ ಶಿಕ್ಷಣ ಪರಿವೀಕ್ಷಕ ರವಿಂದ್ರ ಯೋಗ ಗೀತೆಯನ್ನು ಹಾಡಿದರು. ಯೋಗಾಭ್ಯಾಸದ ನಂತರ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳ ಪಾಲಕರು ಸಹ ಆಗಮಿಸಿ ಯೋಗಥಾನ್ ನೀಡಿದರು. ಯೋಗಥಾನ್ ಹಿನ್ನೆಲೆಯಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಬಿಗಿಯಾದ ಮೊಲಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು,

error: