May 15, 2024

Bhavana Tv

Its Your Channel

ನಾಗಯಕ್ಷೆ ಸಭಾಭವನದಲ್ಲಿ ನಡೆದ ಭರತನಾಟ್ಯ ಕಲಾವಿದ ಸಹೋದರಿಯರಾದ ಶಿಲ್ಪ ನಾಯ್ಕ ಹಾಗೂ ಶೃತಿ ನಾಯ್ಕ ಇವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ

ಭಟ್ಕಳ: ಭರತನಾಟ್ಯ ಕಲೆ ಭಾರತೀಯ ಸಂಸ್ಕçತಿಯ ಪುರಾತನ ಕಲೆಯಾಗಿದ್ದು ಇದನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.

ಅವರು ನಗರದ ನಾಗಯಕ್ಷೆ ಸಭಾಭವನದಲ್ಲಿ ಭರತನಾಟ್ಯ ಕಲಾವಿದ ಸಹೋದರಿಯರಾದ ಶ್ರೀಮತಿ ಶಿಲ್ಪ ನಾಯ್ಕ ಹಾಗೂ ಶ್ರೀಮತಿ ಶೃತಿ ನಾಯ್ಕ ಇವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಕಲೆ ಯಾರದೇ ಸೊತ್ತಲ್ಲ. ಕಲೆ ಬಡವರು, ಶ್ರೀಮಂತರೆನ್ನದೇ ಯಾರು ಕಷ್ಟಪಟ್ಟು ಸಾಧನೆ ಮಾಡುತ್ತಾರೆ ಅವರಲ್ಲಿ ಕಲೆ ನೆಲೆಗೊಳ್ಳೂತ್ತದೆ ಎಂದ ಅವರು ಭಟ್ಕಳದಲ್ಲಿ ಇದೊಂದು ಅಭೂತಪೂರ್ವವಾದ ವಿಶೇಷ ಕಾರ್ಯಕ್ರಮವಾಗಿದೆ. ಭಟ್ಕಳದಲ್ಲಿ ಪ್ರಥಮ ಭಾರಿ ಭರತನಾಟ್ಯ ರಂಗ ಪ್ರವೇಶದ ಕಾರ್ಯಕ್ರಮವಾಗಿದೆ. ಭರತನಾಟ್ಯದಲ್ಲಿ ಈ ಸಹೋದರಿಯರು ಆಭೂತಪೂರ್ವ ಸಾಧನೆ ಮಾಡಿದ್ದಾರೆ. ಮದುವೆ ಆದ ನಂತರವೂ ಈ ಸಹೋದರಿಯರು ಕಲೆಯನ್ನು ಬಿಡದೇ ಸಾಧನೆ ಮಾಡಿ ಇಂದು ರಂಗಭೂಮಿ ಪ್ರವೇಶಿಸಿದ್ದಾರೆ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖ್ಯಾತ ಭರತನಾಟ್ಯ ತರಬೇತುದಾರರಾದ ಬೆಂಗಳೂರಿನ ಸ್ವಾತಿ ಭರದ್ವಾಜ ಮಾತನಾಡಿ ಸಹೋಧರಿಯರಾದ ಶ್ರೀಮತಿ ಶಿಲ್ಪ ಮತ್ತು ಶ್ರೀಮತಿ ಶೃತಿಯವರ ಸಾಧನೆಯ ಹಿಂದೆ ಅಪಾರವಾದ ಶ್ರಮವಿದೆ. ಇವರ ಸಾಧನೆಗೆ ಇವರ ಕುಟುಂಬದವರು ಬಹಳಷ್ಟು ಬೆಂಬಲ ನೀಡಿದ್ದರಿಂದ ಈ ಸಾಧನೆ ಮಾಡಲು ಅನುಕೂಲವಾಯಿತು ಎಂದರು.

ವೇದಿಕೆಯಲ್ಲಿದ್ದ ರಾಜ್ಯಮಟ್ಟದ ನೃತ್ಯ ಕಲಾವಿದೆ ಪಲ್ಲವಿ ರಾಘವೇಂದ್ರ, ನಾಮಧಾರಿ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ, ಡಾ. ನಮೃತಾ ನಾಯ್ಕ, ಡಾ. ರವಿ.ನಾಯ್ಕ, ಮಹೇಶ ಭಟ್, ಕಷ್ಣಾನಂದ ವಾಂಡೇಕರ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಖ್ಯಾತ ಭರತನಾಟ್ಯ ತರಬೇತುದಾರರಾದ ಶ್ರೀಮತಿ ಸ್ವಾತಿ ಭಾರದ್ವಾಜ ನಟರಾಜ ದೇವರಿಗೆ ಪೂಜೆ ಸಲ್ಲಿಸಿ ಸಹೋಧರಿಯರಾದ ಶ್ರೀಮತಿ ಶಿಲ್ಪ ನಾಯ್ಕ ಹಾಗೂ ಶೃತಿ ನಾಯ್ಕ ರವರಿಗೆ ಗೆಜ್ಜೆಯನ್ನು ಪ್ರಧಾನ ಮಾಡಿದರು. ಕಾಯಕ್ರಮದಲ್ಲಿ ಸಹೋದರಿಯರಿಂದ ವಿವಿಧ ರೂಪಕಗಳ ಭರತನಾಟ್ಯ ನೃತ್ಯ ನಡೆಯಿತು. ಕಾರ್ಯಕ್ರಮದಲ್ಲಿ ಭರತನಾಟ್ಯ ನೃತ್ಯ ಕಾರ್ಯಕ್ರಮಕ್ಕೆ ಅಕ್ಷತಾ ಉಪಾಧ್ಯಾಯ , ಶಶಿಕಲಾ, ರಮ್ಯಾ ಚೇತನ ಮತ್ತು ಭಾಗ್ಯಲಕ್ಷಿö್ಮÃ ತಂಡದವರು ಮೃದಂತ, ವಾಯೋಲಿನ್ ನುಡಿಸುವುದರ ಮೂಲಕ ಸಾಥ್ ನೀಡಿದರು.

error: