May 15, 2024

Bhavana Tv

Its Your Channel

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನುರಿತ ತರಬೇತುದಾರರಿಂದ ಕಬಡ್ಡಿ, ಥ್ರೋ ಬಾಲ್ ಮತ್ತು ವಾಲಿಬಾಲ್ 3 ದಿನದ ಉಚಿತ ತರಬೇತಿ

ಭಟ್ಕಳ:- ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟಿçÃಯ ಮತ್ತು ರಾಜ್ಯಮಟ್ಟದ ನುರಿತ ತರಬೇತುದಾರರಿಂದ ಕಬಡ್ಡಿ, ಥ್ರೋ ಬಾಲ್ ಮತ್ತು ವಾಲಿಬಾಲ್ 3 ದಿನದತರಬೇತಿ ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮೊದಲನೇಯ ದಿನದ ಸಭಾಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪರಮಾನಂದ ಕಣ್ಣೂರು ಪಿ.ಎಸ್.ಐ ಮುರ್ಡೇಶ್ವರ ಇವರು ಹಾಜರಿದ್ದರು. ಗೌರವಾನ್ವಿತ ಅತಿಥಿಗಳಾಗಿ ನಿವೃತ್ತ ಬ್ಯಾಂಕ ಉದ್ಯೋಗಿ ಎಂ.ಆರ್ ನಾಯ್ಕ ಮತ್ತು ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅರ್ಬನ್ ಬ್ಯಾಂಕ್‌ಉದ್ಯೋಗಿ ಸುಭಾಷ್ ಎಂ ಶೆಟ್ಟಿ ಭಟ್ಕಳ ಇವರು ಹಾಜರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ಮತ್ತು ಹೊನ್ನಾವರ ವಿಧಾನಸಭಾಕ್ಷೇತ್ರದ ಮಾಜಿ ಶಾಸಕರು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸ್ಥಾಪಕರು ಹಾಗೂ ಈ ಸಂಸ್ಥೆಯ ಅÀಧ್ಯಕ್ಷರು ಆಗಿರುವ ಮಂಕಾಳ ಎಸ್ ವೈದ್ಯರು ವಹಿಸಿದರು. ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿಯಾಗಿರುವ ಡಾ. ಪುಷ್ಪಲತಾ ಎಂ ಎಸ್ ರವರು ಹಾಗೂ ಬೀನಾ ವೈದ್ಯ ಶಾಲೆಯ ಸ್ಟೇಟ್ ವಿಭಾಗದ ಮುಖ್ಯೋಪಾದ್ಯಾಯರಾದ ಪ್ರಹ್ಲಾದ್ ರಾಯಚೂರ್ ಮತ್ತು ರಾಷ್ಟೀಯ ಮಟ್ಟದ ಕಬಡ್ಡಿ ತೀರ್ಪುಗಾರ ಶ್ರೀಧರ ನಾಯ್ಕ ಉಪಸ್ಥಿತರಿದ್ದರು.
ರಾಷ್ಟç ಮತ್ತು ರಾಜ್ಯ ಮಟ್ಟದ ತರಬೇತುದಾರರಾದ ಶಿವರಾಮೇಗೌಡ, ಓದುಲಿಂಗೇಗೌಡ, ಎಂ. ಶ್ರೀನಿವಾಸ, ಪ್ರಸಾದಜೆ. ಹಾಗೂ ಬಸವರಾಜ್ ಹಾಜರಿದ್ದರು.
ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾದ ಪರಮಾನಂದಕಣ್ಣೂರು ಪಿ.ಎಸ್.ಐ ಮುರ್ಡೇಶ್ವರ ಇವರು ಕ್ರೀಡಾ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಶ್ರೀಧರ ನಾಯ್ಕ, ರಾಷ್ಟ್ರೀಯ ಕಬಡ್ಡಿ ಮಟ್ಟದ ತೀರ್ಪುಗಾರರು ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡುತ್ತ ಬೀನಾವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಂಕಾಳ ವೈದ್ಯರವರು “ತಾವು ಶಾಸಕರಾಗುವ ಪೂರ್ವದಲ್ಲಿಯೇ ಶಿಕ್ಷಣ ಪ್ರೇಮಿಗಳಾಗಿದ್ದರು ಹಾಗೂ ಕ್ರೀಡೆಗೂಕೂಡಾ ಅಷ್ಟೇ ಮಹತ್ವವನ್ನು ನೀಡುತ್ತಿದ್ದರು”. ಇಂತಹ ಸಂಸ್ಥೆಯ ವೇದಿಕೆಯಲ್ಲಿ ಸನ್ಮಾನಗೊಂಡಿದ್ದು ನನಗೆ ಸಂತಸತAದಿದೆಎAದು ಹರ್ಷ ವ್ಯಕ್ತಪಡಿಸಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಆಗಿರುವ ಮಂಕಾಳ ಎಸ್ ವೈದ್ಯರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಶಿಕ್ಷಣ ಎಷ್ಟು ಮಹತ್ವವೋ ಅಷ್ಟೇ ಜೀವನಕ್ಕೆ ಕ್ರೀಡೆಯು ಮುಖ್ಯ, ಶಿಕ್ಷಣದ ಜೊತೆಜೊತೆಯಲ್ಲಿ ಕ್ರೀಡಾಪಟುಗಳಿಗೆ ವಿನಯವು ಮುಖ್ಯ ಅದುವೇ ವಿದ್ಯೆಗೆ ಭೂಷಣ ನಮ್ಮ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿ ಈ ಶಿಕ್ಷಣ ಸಂಸ್ಥೆಯ ಕೀರ್ತಿ ಪತಾಕೆಯನ್ನು ಎಲ್ಲಡೆ ಬೆಳಗಲಿ ಅದಕ್ಕೆ ಬೇಕಾದ ಸಹಾಯ ಹಸ್ತವನ್ನು ನೀಡಲು ನಾನು ಸದಾ ಸಿದ್ದ ಎಂದರು.
ತದ ನಂತರದಲ್ಲಿ ಕಬಡ್ಡಿ ಕ್ರೀಡಾಂಗಣದ ತರಬೇತುದಾರರಾದ ಶಿÀವರಾಮೇಗೌಡ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಉಪನ್ಯಾಸಕಿಯಾದ ಹೇಮಾವತಿ ನಾಯ್ಕರವರು ನೆರೆವೇರಿಸಿದರು. ಸ್ವಾಗತವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಮಂಜುನಾಥಗೌಡ ನೆಡೆಸಿಕೊಟ್ಟರು. ವಂದನಾರ್ಪಣೆಯನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿಯಾದ ಧನಶ್ರೀ ಕಲಬಾಗ್ ಬಾಗ್ ನಡೆಸಿಕೊಟ್ಟರು.

error: