May 14, 2024

Bhavana Tv

Its Your Channel

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾ ತರಬೇತಿ ಶಿಬಿರ ಯಶಸ್ವಿ ಮಕ್ತಾಯ

ಮುರುಡೇಶ್ವರ :- ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಮೂರು ದಿನಗಳ ವಿವಿಧ ಕ್ರೀಡೆಗಳ ತರಬೇತಿ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಈ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುರುಡೇಶ್ವರ ಪೋಲಿಸ್ ಠಾಣೆಯ ಪಿ.ಎಸ್ .ಐ ಆದ ಶ್ರೀ ದೇವರಾಜ ಬಿರದಾರ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಶಿಕ್ಷಣಕ್ಕೆ ಒತ್ತು ನೀಡದೆ ಕ್ರೀಡಾ ಜಗತ್ತಿನಲ್ಲಿ ಮಕ್ಕಳು ಗುರುತಿಸಲ್ಪಡಬೇಕು ಎನ್ನುವ ನಿಟ್ಟಿನಲ್ಲಿ ಬೀನಾ ವೈಧ್ಯ ಶಿಕ್ಷಣ ಸಂಸ್ಥೆಯ ಈ ಕೆಲಸ ಅತ್ಯಂತ ಶ್ಲಾಘನೀಯವಾದದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರತಕರ್ತ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ ರವರು ಮಾತನಾಡಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಕ್ರೀಡೆಗೆ ಯಾವಾಗಲು ಮಹತ್ವ ನೀಡುತ್ತಿದ್ದು. ಈ ತರಬೇತಿ ಶಿಬಿರದ ಮೂಲಕ ಜಿಲ್ಲೆಯ ಎಲ್ಲಾ ಮಕ್ಕಳು ಲಾಭ ಪಡೆಯಬೇಕು ಎನ್ನುವ ಆಲೋಚನೆ ಪ್ರಶಂಸನೀಯ. ಇಂತ ತರಬೇತಿಯ ಆಯೋಜನೆ ಜಿಲ್ಲೆಯಲ್ಲಿಯೇ ಮೊದಲು. ಸಂಸ್ಥೆ ಮುಂದೆ ಕೂಡ ಇಂತಹ ತರಬೇತಿ ಶಿಬಿರ ಹಮ್ಮಿಕೊಳ್ಳಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಡಾ ಪುಷ್ಪಲತಾ ವೈಧ್ಯ ನಮ್ಮ ಹಳ್ಳಿಯ ಮಕ್ಕಳು ಇಂತಹ ವಿಶೇಷವಾದ ಸಾಲಭ್ಯ ಮತ್ತು ಅವಕಾಶಗಳಿಂದ ವಂಚಿತರಾಗಬಾರದೆAದು ರಾಷ್ಟ್ರಮಟ್ಟದ ತರಬೇತಿಧಾರರಿಂದ ಮೂರು ದಿನಗಳ ಉಚಿತವಾಗಿ ಊಟ ಮತ್ತು ತರಬೇತಿ ನೀಡಿ ಅವರಲ್ಲಿರುವ ಸಾಮರ್ಥ್ಯ ಹೆಚ್ಚಿಸಿ ಪ್ರೋತ್ಸಾಹಿಸುವ ಪ್ರಯತ್ನ ಮಾಡಿದ್ದೇವೆ ಸುಮಾರು 800 ವಿದ್ಯಾರ್ಥಿಗಳು ತರಬೇತಿಯ ಲಾಭ ಪಡೆದ್ದಿದ್ದಾರೆ ಇಂತ ಕಾರ್ಯಕ್ರಮಗಳನ್ನು ಮುಂದೆಯೂ ನಡೆಸುತ್ತೇವೆ. ನಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ಹಾಗೂ ತರಬೇತುದಾರರಿಗು ಕೃತಜ್ಞತೆಯನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ದೂರದ ಊರಿನಿಂದ ತರಬೇತಿಯನ್ನು ನೀಡಲು ಬಂದಿದ್ದ ವಿವಿಧ ಕ್ರಿಡಾ ಕ್ಷೇತ್ರದಲ್ಲಿ ಹೆಸರನ್ನು ಗಳಿಸಿರುವ ಪ್ರಸಾದ್ ಜೆ, ಬಸವರಾಜು , ಎಮ್ ಶ್ರೀನಿವಾಸ , ಒದುಲಿಂಗೆ ಗೌಡ , ಜಿ.ಎಮ್ ಶಿವರಾಮೇ ಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೊನೆಯಲ್ಲಿ ಪಂದ್ಯಗಳನ್ನು ನೆಡೆಸಿ ವಿನ್ನರ್ ಮತ್ತು ರನ್ನರ್ ಅಪ್ಗೆ ಟ್ರೋಫಿ ಯನ್ನು ನೀಡಲಾಯಿತು.ಭಾಗವಹಿಸಿದ್ದ ಎಲ್ಲಾ ಕ್ರೀಡಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಯಿತು. ಮಮತಾ ರವರು ಎಲ್ಲರನ್ನೂ ಸ್ವಾಗತಿಸಿದರು. ಜಯಶ್ರೀ ಎಲ್ಲರನ್ನೂ ವಂದಿಸಿದರು. ಮಂಜುನಾಥ್ ಗೌಡ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

error: