May 17, 2024

Bhavana Tv

Its Your Channel

ಫೆ.8ರಿಂದ ಫೆ.11ರ ತನಕ ನಡೆಯಲಿದೆ ಶ್ರೀ ನಾಗಬನದ ಪುನರ್ ಪ್ರತಿಷ್ಟೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ

ಭಟ್ಕಳ ನಗರ ಮಧ್ಯದಲ್ಲಿರುವ ರಾಜಾಂಗಣ ಶ್ರೀ ನಾಗಬನದ ಪುನರ್ ಪ್ರತಿಷ್ಟೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಫೆ.8ರಿಂದ ಫೆ.11ರ ತನಕ ನಡೆಯಲಿದೆ ಎಂದು ರಾಜಾಂಗಣ ಶ್ರೀ ನಾಗಬನದ ಅಧ್ಯಕ್ಷ ದಿಗಂಬರ ಶೇಟ್ ಹೇಳಿದರು.

ಅವರು ರಾಜಾಂಗನ ನಾಗಬನ ಪಕ್ಕದಲ್ಲಿರುವ ಕರಿಬಂಟ ದೇವಸ್ಥಾನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪ್ರತಿಷ್ಟಾಂಗ ಕಾರ್ಯಕ್ರಮವು ಜೈನ ಸಂಪ್ರದಾಯದAತೆ ಪ್ರಧಾನ ಅರ್ಚಕ ಜ್ವಾಲಿನಿ ಕುಮಾರ್ (ಸತೀಶ) ಚಂದ್ರರಾಜ ಜೈನ್ ಅವರ ನೇತೃತ್ವದಲ್ಲಿ ಸಂಪೂರ್ಣ ಪುನರ್ ಪ್ರತಿಷ್ಟಾ ಕಾರ್ಯಕ್ರಮ ನಡೆಯಲಿದ್ದು ಫೆ.8ರಂದು ಬೆಳಿಗ್ಗೆ ಪ್ರಾರ್ಥನೆ, ಇಂದ್ರ ಪ್ರತಿಜ್ಞೆ, ನಾಂದಿ, ಕಂಕಣ ಬಂಧ, ಪುಣ್ಯಾವಾಚನ, ಹವನ, ತೋರಣ ಮುಹೂರ್ತ, ಧ್ವಜಾರೋಹಣ, ಅಖಂಡ ದೀಪ ಸ್ಥಾಪನೆ, ಅಂಕುರಾರ್ಪಣೆ, ರಾತ್ರಿ ರಾಸ್ತು ರಾಕ್ಷೆÆÃಘ್ನ ಹವನ, ವಿಮಾನ ಶುದ್ಧಿ, ದಿಗ್ಬಂಧನ ಬಲಿ ನಡೆಯಲಿದೆ. ಫೆ.9ರಂದು ಬೆಳಿಗ್ಗೆ ನೂತನ ಪ್ರತಿಷ್ಟೆಗೊಳ್ಳಲಿರುವ ಮೂರ್ತಿಗಳ ಮೆರವಣಿಗೆ, ನಿತ್ಯವಿಧಿ ಸಹಿತ ಪೀಠಶುದ್ಧಿ ಹವನ, ಕಲಿಕುಂಡ ಯಂತ್ರ ಆರಾಧನೆ ಜಪ. ಸಾಯಂಕಾಲ ಬಿಂಬ ಶುದ್ಧಿ ಹವನ, ಬಿಂಬ ವಿನ್ಯಾಸ, ಧಾನ್ಯಾದಿವಾಸ, ಬಲಿ.
ಫೆ.10ರಂದು ನಿತ್ಯವಿಧಿ ಸಹಿತ ಪ್ರತಿಷ್ಟಾ ಹವನ, ಬೆಳಿಗ್ಗೆ 10.11ರ ಮೀನ ಲಗ್ನದಲ್ಲಿ ದೇವರ ಪುನರ್ ಪ್ರತಿಷ್ಟೆ ಹಾಗೂ ನಾಗದೇವರ ಆರಾಧನೆ ಜಪ ನಡೆಯಲಿದೆ. ಸಂಜೆ ಕಲಾವೃದ್ಧಿ, ಚಂಡಿಕಾಹವನ, ಬಲಿ, ಮಹಾಬಲಿ ನಡೆಯಲಿದೆ.
ಫೆ.11ರಂದು ಶನಿವಾರ ನಿತ್ಯವಿಧಿ ಸಹಿತ ಆಶ್ಲೇಷ ಬಲಿ, ದೇವರಿಗೆ ಕುಂಬಾಭಿಷೇಕ, ಅಲಂಕಾರ ಪೂಜೆ, ಹಣ್ಣುಕಾಯಿ ನೈವೇದ್ಯ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ, ಪುರೋಹಿತರಿಂದ ಆಶೀರ್ವಾದ ಗ್ರಹಣ ಹಾಗೂ ಮಹಾ ಅನ್ನ ಸಂತರ್ಪಣೆ ನಡೆಯಲಿದೆ ಎಂದೂ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಶಾಸಕ ಸುನಿಲ್ ನಾಯ್ಕ ಅವರು ಮಾತನಾಡಿ ರಾಜಾಂಗಣ ನಾಗಬನವು ಒಂದು ಐತಿಹಾಸಿಕ ಕ್ಷೇತ್ರವಾಗಿದ್ದು ಹೆಸರೇ ಸೂಚಿಸುವಂತೆ ರಾಜಧರ್ಮಕ್ಕೆ ಸಂಬAಧ ಪಟ್ಟ ಸ್ಥಳವಾಗಿದೆ. ಅನೇಕ ವರ್ಷಗಳಿಂದ ಇದು ಅಜೀರ್ಣ ಸ್ಥಿತಿಯಲ್ಲಿದೆಯಲ್ಲದೇ ಹಲವಾರು ಬಾರಿ ಇದು ಪ್ರಕ್ಷÄಬ್ದ ವಾತಾವರಣಕ್ಕೂ ಕಾರಣವಾಗಿದೆ. ಇದಕ್ಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹಲವಾರು ಪ್ರಯತ್ನಗಳನ್ನು ಮಾಡಿದ್ದು ಪ್ರಯತ್ನ ನನ್ನ ಶಾಸಕತ್ವದ ಅವಧಿಯಲ್ಲಿ ಫಲ ನೀಡಿದೆಯಲ್ಲದೇ ದೇವರ ಪುನರ್ ಪ್ರತಿಷ್ಟಾಂಗ ಕಾರ್ಯಕ್ರಮದ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸಲು ಅವಕಾಶ ದೊರಕಿ ಪುಣ್ಯದ ಕಾರ್ಯದಲ್ಲಿ ಭಾಗಿಯಾಗುವ ಯೋಗ ದೊರಕಿದೆ. ಹಲವಾರು ಬಾರಿ ಕಾಣದ ಕೈ ಗಳು ಕೆಲಸ ನಿಲ್ಲಿಸಲು ಪ್ರಯತ್ನಪಟ್ಟರೂ ಅದು ಫಲ ಕೊಡಲಿಲ್ಲ. ಇಂದು ಪುನರ್ ಪ್ರತಿಷ್ಟಾಂಗ ಕಾರ್ಯಕ್ರಮಗಳು ಭರದಿಂದ ಸಾಗಿದ್ದು ಫೆ.8ರಿಂದ ಫೆ.11ರ ತನಕ ನಡೆಯುವ ದೇವತಾ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಕೋರಿದರು.
ಪುನರ್ ಪ್ರತಿಷ್ಟಾ ಕಾರ್ಯಕ್ರಮದಲ್ಲಿ ಕನಿಷ್ಟ ಮನೆಗೊಬ್ಬರಂತೆ ಬಂದು ಪ್ರಸಾದ ಸ್ವೀಕರಿಸಬೇಕು ಎಂದೂ ಕೋರಿದ ಅವರು ನಾಲ್ಕೂ ದಿನಗಳು ನಾನೇ ಸ್ವತಃ ಉಪಸ್ಥಿತರಿದ್ದು ದೇವತಾ ಕಾರ್ಯಗಳು ಸಾಂಗವಾಗಿ ನಡೆಯಲು ಸಹಕರಿಸುವ ಭರವಸೆಯನ್ನೂ ಸಹ ನೀಡಿದರು.
ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿ ರಾಜಾಂಗಣ ನಾಗಬನದ ಇತಿಹಾಸ ಜೈನರ ಆಳ್ವಿಕೆಯ ಕಾಲದ್ದು, ಭಟ್ಕಳದಲ್ಲಿ 1000ಕ್ಕೂ ಹೆಚ್ಚು ನಾಗ, ಜಟಕಾ, ಮಾಸ್ತಿ ಮನೆಗಳಿವೆ. ಅವುಗಳಲ್ಲಿ ರಾಜಾಂಗಣ ನಾಗಬನ ಜೀರ್ಣೋದ್ಧಾರವಾಗಬೇಕು ಎಂದು ಪಣ ತೊಟ್ಟ ಶಾಸಕರು ತಮ್ಮ ಸ್ವಂತ ಹಣದಿಂದ ಎಲ್ಲಾ ಕಾರ್ಯವನ್ನು ಮಾಡಿದ್ದಾರೆ. ಇದು ಎಲ್ಲಾ ಜಾತಿ ಜನಾಂಗದವರು ಪೂಜಿಸಿಕೊಂಡು ಬಂದ ನಾಗಬನವಾಗಿದ್ದು ಮುಂದಿನ ದಿನಗಳಲ್ಲಿ ಜನರಿಗೆ ರಕ್ಷಣೆ ದೊರೆಯುವಂತಾಗಲಿ ಎಂದೂ ಅವರು ಹೇಳಿದರು. ಸಾರ್ವಜನಿಕರ ಸಂಪೂರ್ಣ ಸಹಕಾರ ಕೋರಿದ ಅವರು ಶಾಸಕ ಸುನಿಲ್ ನಾಯ್ಕ ಅವರ ಪರಿಶ್ರಮಕ್ಕೆ ದೇವಸ್ಥಾನದ ಕಮಿಟಿ ವತಿಯಿಂದ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉದಯ ಜೈನ್, ಸಚಿನ್ ಮಹಾಲೆ, ರಾಜೇಶ ಮಹಾಲೆ, ವಿನೋದ ಶೆಟ್ಟಿ, ಕೇಶವ ನಾಯ್ಕ, ಶಂಕರ ಅನಂತ ಪೈ ಮುಂತಾದವರು ಉಪಸ್ಥಿತರಿದ್ದರು.

error: