May 17, 2024

Bhavana Tv

Its Your Channel

ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಮ್ಯಾರಥಾನ್ ಓಟ

ಭಟ್ಕಳ: ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಭಟ್ಕಳ ತಾಲೂಕಿನ ಆಸರಕೇರಿ ಕೀಯಾಶೀಲ ಗೆಳೆಯರ ಬಳಗದ ನೇತೃತ್ವದಲ್ಲಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ತಾಲೂಕು ಆಸ್ಪತ್ರೆ ಭಟ್ಕಳ ಇವರ ಸಹಯೋಗದೊಂದಿಗೆ 5 ಕಿ.ಮೀ. ಅಂತರದ ಮ್ಯಾರಥಾನ್ ಓಟ ನಡೆಯಿತು.

ತಾಲೂಕಿನ ಯಲ್ವಡಿಕವೂರು ಗ್ರಾ.ಪಂ, ಸರ್ಪನಕಟ್ಟೆ ಪಿಯುಸಿ ಕಾಲೇಜು ಆವರಣದಲ್ಲಿ ಭಟ್ಕಳ ಸಹಾಯಕ ಆಯುಕ್ತಿ ಮಮತಾದೇವಿ ಮ್ಯಾರಥಾನ್‌ಗೆ ಕ್ಯಾಪ್ಟರ್ ಜಾಗೃತಿ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು, ನಂತರ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಅಗತ್ಯವಾಗಿದ್ದು, ಕ್ರೀಯಾಶೀಲ ಗೆಳೆಯರ ಬಳಗದವರು ವ್ಯವಸ್ಥಿತವಾಗಿ ಮ್ಯಾರಥಾನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ವಿವರಿಸಿದರು.
5 ರಿಂದ 15, 16 ರಿಂದ 35, 36 ರಿಂದ 50, 50 ವರ್ಷಕ್ಕೂ ಮೇಲ್ಪಟ್ಟ ವಯೋಮಿತಿಯವರಿಗಾಗಿ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನಂತರ ಇಲ್ಲಿನ ಪೊಲೀಸ್ ಮೈದಾನದಲ್ಲಿ ಮ್ಯಾರಥಾನ್
ಅಂತ್ಯ ಕಂಡಿತು. ಮ್ಯಾರಥಾನ್ ಓಟ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಕ್ಯಾನ್ಸರ್ ತಜ್ಞ, ಡಾ. ರಾಮನಾಥ ಶೆಣೈ, ತಂಬಾಕು, ಮದ್ಯಪಾನದಂತಹ ದುಶ್ಚಟಗಳಿಂದ ದೂರ ಇರಬೇಕು, ಬೊಜ್ಜು ಕಡಿಮೆ ಮಾಡಿಕೊಳ್ಳುವುದು ಕ್ಯಾನ್ಸರ್ ತಡೆಗೆ
ಸಹಕಾರಿಯಾಗಿದೆ. ಪ್ರಸ್ತುತ ಕ್ಯಾನ್ನರ ಮಾರಣಾಂತಿಕ ಕಾಯಿಲೆಯಾಗಿ ಉಳಿದಿಲ್ಲ. ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಸರಕಾರ ಮಾತ್ರವಲ್ಲದೇ ವಿವಿಧ ಸಂಘ ಸಂಸ್ಥೆಗಳು ಮುಂದೆ ಬಂದಿವೆ. ಕ್ಯಾನ್ಸರ್ ಪೀಡಿತರು ಹಾಗೂ ಅವರ ಕುಟುಂಬ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಡಿವಾಯ್ ಎಸ್ಪಿ ಶ್ರೀಕಾಂತ ಮಾತನಾಡಿ, ಕ್ಯಾನ್ಸರ್ ಪೀಡಿತರಿಗೆ ಆತ್ಮಸ್ಥೆರ್ಯವನ್ನು ತುಂಬುವ ಕೆಲಸ ಆಗಬೇಕಾಗಿದೆ ಎಂದರು.
ವಿಜೇತರಿಗೆ ಟ್ರೋಫಿ: ವಿವಿಧ ವಿಭಾಗದ ಮ್ಯಾರಥಾನ್ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಶಶಾಂಕ ಮೊಗೇರ, ಶರದ್ ಗುನಗಿ, ಶಶಾಂಕ ನಾಯ್ಕ, ಗಣಪತಿ ಮೊಗೇರ ಹಾಗು ಎರಡನೇ, ಮೂರನೇ ಸ್ಥಾನ ಪಡೆದ ವರಿಗೆ ಇನ್ನಿತರರಿಗೆ ಟ್ರೋಫಿ ನೀಡಿ ಗೌರವಿಸ ಲಾಯಿತು.
ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿದರು. ಕ್ರೀಯಾಶೀಲ ಗೆಳೆಯರ ಬಳಗದ ಅಧ್ಯಕ್ಷ ದೀಪಕ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ಪ್ರದ್ಯುಮ್ನ, ಡಾ. ಗೌರವ, ಸಿಪಿಐ ದಿವಾಕರ, ಭಟ್ಕಳ ಗ್ರಾಮೀಣ ಠಾಣಾ ಸಿ.ಪಿ.ಐ ಚಂದನ ಗೋಪಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಂಡು ನಾಯ್ಕ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ನಾಯ್ಕ, ಕಾರ್ಯಕ್ರಮ ನಿರೂಪಿಸಿದರು, ಜಗದೀಶ ನಾಯ್ಕ ವಂದಿಸಿದರು.

error: