May 17, 2024

Bhavana Tv

Its Your Channel

ಭಟ್ಕಳದಲ್ಲಿ ಸಹಾಯಕ ಆಯುಕ್ತ ಮಮತಾದೇವಿ ಯವರಿಂದ ಸುದ್ದಿಗೋಷ್ಠಿ

ಭಟ್ಕಳ: 2023ರ ಸಾರ್ವತ್ರಿಕ ಚುನಾವಣೆಗೆ ಭರದ ಸಿದ್ಧತೆ ನಡೆದಿದ್ದು, ಚುನಾವಣೆಯಲ್ಲಿ ಬಳಸಲಾಗುವ ಮತಯಂತ್ರಗಳ ಪರೀಕ್ಷಾರ್ಥ ಪ್ರಯೋಗ ಹಾಗೂ ಮತಯಂತ್ರ ಕಾರ್ಯ ಪ್ರದರ್ಶನವನ್ನು ಆರಂಭಿಸಲಾಗುದು ಎಂದು ಸಹಾಯಕ ಆಯುಕ್ತ ಮಮತಾದೇವಿ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನೂತನ ಮಾದರಿಯ 24 ಯೂನಿಟ್ ಯಂತ್ರಗಳು ಭಟ್ಕಳಕ್ಕೆ ಬಂದಿದ್ದು, ಶಸ್ತ್ರ ಸಜ್ಜಿತ ಪೊಲೀಸ್ ರಕ್ಷಣೆಯೊಂದಿಗೆ ಪ್ರತ್ಯೇಕ ಕಚೇರಿಯಲ್ಲಿ ಇರಿಸಲಾಗಿದೆ. ಮತದಾನದ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವ ಹಾಗೂ ಮತದಾನದ ಬಗ್ಗೆ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ಮತದಾನ ಪರೀಕ್ಷಾರ್ಥ ಪ್ರಯೋಗ ಹಾಗೂ ಮತದಾನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಬಳಸಲಾಗುತ್ತಿದ್ದ ಮತಯಂತ್ರಗಳಿಗೆ ಹೋಲಿಸಿದರೆ ನೂತನ ಮಾದರಿಯ ಮತಯಂತ್ರಗಳು ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದ್ದು, ಮತದಾರರರು ನೂತನ ಮತಯಂತ್ರ ಕಾರ್ಯಕ್ಷಮತೆಯ ಬಗ್ಗೆ ಸ್ಥಳದಲ್ಲಿಯೇ ದೃಢೀಕರಿಸಿ ಕೊಳ್ಳಬಹುದಾಗಿದೆ.
ಇದಕ್ಕಾಗಿ ಭಟ್ಕಳ ತಾಲೂಕಿನಲ್ಲಿ 13 ಹಾಗೂ ಹೊನ್ನಾವರ ತಾಲೂಕಿನಲ್ಲಿ 12 ವಲಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ಮಾದರಿ ಮತದಾನ ಪ್ರದರ್ಶನಕ್ಕಾಗಿ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಮತದಾರರು ಮತದಾನ ಮಾಡುವ ಮೂಲಕ ಪರೀಕ್ಷಿಸಿ ಕೊಳ್ಳಬಹದು ಎಂದು ತಿಳಿಸಿದರು.
ಭಟ್ಕಳ ತಹಶೀಲ್ದಾರ್ ಅಶೋಕ ಭಟ್, ಹೊನ್ನಾವರ ತಹಶೀಲ್ದಾರ್ ಉಷಾ ಪಾವಸ್ಕರ್, ವಿವಿಧ ವಲಯ ಅಧಿಕಾರಿಗಳು ಉಪಸ್ಥಿತಿ ಇದ್ದರು.

error: