May 17, 2024

Bhavana Tv

Its Your Channel

ಶ್ರೀ ಜೈನನಾಗ ಮತ್ತು ನಾಗಯಕ್ಷಿ ದೇವರುಗಳ ಪುನರ್‌ಪ್ರತಿಷ್ಠಾ ಕಾರ್ಯಕ್ರಮವು ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಆರಂಭ

ಭಟ್ಕಳ: ರಾಜಾಂಗಣ ನಾಗಬನದಲ್ಲಿ ಶ್ರೀ ಜೈನನಾಗ ಮತ್ತು ನಾಗಯಕ್ಷಿ ದೇವರುಗಳ ಪುನರ್‌ಪ್ರತಿಷ್ಠಾ ಕಾರ್ಯಕ್ರಮವು ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಆರಂಭವಾಯಿತು.
ಪಟ್ಟಣದ ರಾಜಾಂಗಣ ನಾಗಬನದಲ್ಲಿ ಪ್ರಾರ್ಥನೆ, ಇಂದ್ರ ಪ್ರತಿಜ್ಞೆ, ನಾಂದಿ, ಕಂಕಣ ಬಂಧ, ಪುಣ್ಯಾವಾಚನ ಹವನ, ತೋರಣ ಮೂಹೂರ್ತ, ಧ್ವಜಾರೋಹಣ, ಅಖಂಡ ದೀಪ ಸ್ಥಾಪನೆ, ಅಂಕುರಾರ್ಪಣೆಯೊAದಿಗೆ ಆರಂಭಗೊAಡಿದ್ದು ಅರ್ಚಕರಾದ ಜ್ವಾಲಿನಿ ಕುಮಾರ್ (ಸತೀಶ) ಚಂದ್ರರಾಜ ಜೈನ್ ಅವರ ನೇತೃತ್ವದಲ್ಲಿ ಸಾಂಗವಾಗಿ ನೆರವೇರುತ್ತಿದೆ.
ಮೂಲತಃ ಇದು ಜೈನ ನಾಗ ಮತ್ತು ಜೈನ ಯಕ್ಷಿಯಾಗಿದ್ದರಿಂದ ಪ್ರತಿಷ್ಠಾಪನಾ ಕಾರ್ಯವನ್ನು ವಿಧ್ವಾಂಸರ ಅಭಿಪ್ರಾಯದಂತೆ ಜೈನ ಸಂಪ್ರದಾಯದAತೆಯೇ ನಡೆಸಲಾಗುತ್ತಿದ್ದು ನಾಗಬನ ಸಮಿತಿಯ ಅಧ್ಯಕ್ಷ ದಿಗಂಬರ ಶೇಟ್ ಹಾಗೂ ಪದಾಧಿಕಾರಿಗಳು ಸಕಲ ವ್ಯವಸ್ಥೆಯನ್ನು ನಡೆಸಿಕೊಟ್ಟರು.
ಪಟ್ಟಣದ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ನಾಗಬನ ಇರುವುದರಿಂದ ಮುಖ್ಯ ರಸ್ತೆಯಲ್ಲಿಯೇ ಶಾಮಿಯಾನವನ್ನು ಹಾಕಲಾಗಿದ್ದು ಭಟ್ಕಳದ ಇತಿಹಾಸದಲ್ಲಿಯೇ ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ರಾಜಾಂಗಣ ನಾಗಬನವನ್ನು ಕಳೆದ ಹಲವಾರು ಸಮಯದಿಂದ ಸುಂದರವಾಗಿ ನಿರ್ಮಾಣ ಮಾಡಲಾಗಿದ್ದು ಸಂಪೂರ್ಣ ಶಿಲೆಯಿಂದ ಮಾಡಿದ ಪೀಠ, ನಾಗಬನಕ್ಕೆ ಹಾಕಿದ ಕಬ್ಬಿಣದ ಸರಳಿನಿಂದ ಬಂದೋಬಸ್ತ ಮಾಡಲಾಗಿದೆ. ಸಂಪ್ರದಾಯದAತೆ ಈ ಹಿಂದೆ ಇದ್ದ ಮರವೊಂದನ್ನು ಹಾಗೆಯೇ ಉಳಿಸಿಕೊಂಡಿದ್ದು ಕೂಡಾ ನಾಗಬನಕ್ಕೆ ಶೋಭೆ ತಂದಿದೆ. ನಾಗಬನದ ಆಡಳಿತ ಸಮಿತಿ ಮತ್ತು ಭಕ್ತರು ಬೆಳಿಗ್ಗೆಯಿಂದಲೇ ಸ್ಥಳದಲ್ಲೇ ಇದ್ದು ಪುನರ್ ಪ್ರತಿಷ್ಠಾಪನಾ ಕೈಂಕರ್ಯಕ್ಕೆ ನೆರವಾಗುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಭಕ್ತರು ನಾಗದೇವರ ಮೂರ್ತಿಯನ್ನು ಬೃಹತ್ ಮೆರವಣಿಗೆ ಮೂಲಕ ನಾಗಬನಕ್ಕೆ ತಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದ್ದು ಫೆ. 10ರಂದು ನಿತ್ಯವಿಧಿ ಸಹಿತ ನಾಗದೇವರ ಪ್ರತಿಷ್ಠಾ ಹವನ, ಬೆಳಿಗ್ಗೆ 10.11ರ ಮೀನ ಲಗ್ನದಲ್ಲಿ ದೇವರ ಪುನರ್ ಪ್ರತಿಷ್ಟೆ ಹಾಗೂ ನಾಗದೇವರ ಆರಾಧನೆ ಜಪ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.

error: