May 17, 2024

Bhavana Tv

Its Your Channel

ರಾಜಾಂಗಣ ಶ್ರೀ ನಾಗಬನದ ಪುನರ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮಕ್ಕೆ ಚಾಲನೆ

ಎರಡನೇ ದಿನದ ಅಂಗವಾಗಿ ಜೈನ ನಾಗ ಹಾಗೂ ನಾಗಯಕ್ಷೆಯ ನೂತನ ಮೂರ್ತಿಗಳ ಅದ್ದೂರಿ ಮೆರವಣಿಗೆ ಸುಸಂಪನ್ನ

ಭಟ್ಕಳ: ರಾಜಾಂಗಣ ಶ್ರೀ ನಾಗಬನದ ಶ್ರೀ ಜೈನ್ ನಾಗ ಮತ್ತು ನಾಗಯಕ್ಷಿ ದೇವರುಗಳ ಪುನರ್ ಪ್ರತಿಷ್ಠಾ ಮಹೋತ್ಸವವೂ ಬುಧವಾರದಿಂದ ಆರಂಭಗೊAಡಿದ್ದು, ಎರಡನೇ ದಿನವಾದ ಗುರುವಾರದಂದು ಶ್ರೀ ಜೈನ ನಾಗ ಮತ್ತು ನಾಗಯಕ್ಷಿ ದೇವರಗಳ ನೂತನ ಮೂರ್ತಿಗಳ ಮೆರವಣಿಗೆಯು ಸಹಸ್ರಾರು ಭಕ್ತ ಸಮೂಹದಲ್ಲಿ ಸುಸಂಪನ್ನಗೊoಡಿತು.

ಬುಧವಾರದoದು ಮುಂಜಾನೆಯಿAದಲೇ ಆರಂಭಗೊAಡ ಪುನರ ಪ್ರತಿಷ್ಠಾ ಮಹೋತ್ಸವವು ಜೈನ ಸಮುದಾಯದ ಪದ್ದತಿಯಂತೆ ತಾಲೂಕಿನ ಬಸ್ತಿ ಕಾಯ್ಕಿಣಿಯ ಜೈನ ಸಮಾಜದ ಪ್ರಧಾನ ಪುರೋಹಿತರಾದ ಜ್ವಾಲಿನಿ ಕುಮಾರ ಚಂದ್ರರಾಜ ಜೈನ್ ಇಂದ್ರ ಇವರ ಪೌರೋಹಿತ್ಯದಲ್ಲಿ ಉದಯ ಜೈನ ದಂಪತಿಗಳ ನೇತ್ರತ್ವದಲ್ಲಿ ಪ್ರಾರ್ಥನೆ, ಇಂದ್ರ ಪ್ರತಿಜ್ಞೆ, ನಾಂದಿ, ಕಂಕಣ ಬಂಧ ಪುಣ್ಯಾವಾಚನ ಹವನ, ತೋರಣ ಮೂಹೂರ್ತ, ಧ್ವಜ ರೋಹಣ ಅಖಂಡವಾಗಿ ದೀಪ ಸ್ಥಾಪನೆ ಹಾಗೂ ಅಂಕುರಾರ್ಪಣೆಯ ಬಳಿಕ ಸಾಯಂಕಾಲ ವಾಸ್ತು ರಾಕ್ಷೋಘ್ನ ಹವನ, ವಿಮಾನ ಶುದ್ಧಿ, ದಿಗ್ಬಂದನ ಬಲಿ ಕಾರ್ಯಕ್ರವೂ ಸಕಲ ವಿಧಿ ವಿಧಾನದಂತೆ ಜರುಗಿದವು.

ಗುರುವಾರದಂದು ಬೆಳಿಗ್ಗೆ ೧೦.೩೦ಕ್ಕೆ ಜೈನ ನಾಗ ಹಾಗೂ ನಾಗಯಕ್ಷೆಯ ನೂತನ ಮೂರ್ತಿಗಳ ಅದ್ದೂರಿ ಮೆರವಣಿಗೆಯು ಇಲ್ಲಿನ ಕರಿಬಂಟ ದೇವಸ್ಥಾನದಿಂದ ನಾಗ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಕಳಿ ಹನುಮಂತ ದೇವಸ್ಥಾನ ರಸ್ತೆಯ ಮೂಲಕ ವಡೇರ ಮಠದ ಮೂಲಕ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಹೂವಿನ ಪೇಟೆ, ಶ್ರೀ ಜೈನ ಬಸದಿ, ಮಾರಿ ಕಟ್ಟೆ ಮಾರ್ಗವಾಗಿ ರಾಜಾಂಗಣ ಶ್ರೀ ನಾಗಬನಕ್ಕೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಚಂಡೆ ಹಾಗೂ ಪಂಚ ವಾದ್ಯ ವಿಶೇಷ ಮೆರಗು ತಂದಿತು. ಮತ್ತು ಸಹಸ್ರಾರು ಭಕ್ತರು ಧಾರ್ಮಿಕ ಉಡುಗೆಯೊಂದಿಗೆ ವಿಶೇಷವಾಗಿ ಪೇಟ ಧರಿಸಿ ಮೆರವಣಿಗೆಯಲ್ಲಿ ಸಾಗಿ ಬಂದರು.

ನAತರ ನಿತ್ಯ ವಿಧಿ ಸಹಿತ ಪೀಠಶುದ್ದ ಹವನ , ಕಲಿಕುಂಡ ಯಂತ್ರ ಆರಾಧನೆ ಜಪ ನೆರವೇರಿದ್ದು, ಸಾಯಂಕಾಲ ಬಿಂಬ ಶುದ್ದಿ ಹವನ, ಬಿಂಬ ವಿನ್ಯಾಸ ಧಾನ್ಯಾದಿವಾಸ, ಬಲಿ ಕಾರ್ಯಕ್ರಮಗಳು ನಡೆದವು.

ಮೆರವಣಿಗೆಯಲ್ಲಿ ಶಾಸಕ ಸುನೀಲ ನಾಯ್ಕ ಸೇರಿದಂತೆ ಕ್ರಷ್ಣ ನಾಯ್ಕ ಆಸರಕೇರಿ, ಕೇಶವ ನಾಯ್ಕ, ಶ್ರೀಕಾಂತ ನಾಯ್ಕ, ನಾಗ ಬನ ಸಮಿತಿ ಅಧ್ಯಕ್ಷ ದಿಗಂಬರ ಶೇಟ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯೂದಕ್ಕೂ ಪೋಲಿಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.

ಶುಕ್ರವಾರದಂದು ಮುಂಜಾನೆ ೧೦.೧೧ಕ್ಕೆ ಮೀನ ಲಗ್ನದಲ್ಲಿ ಜೈನ ನಾಗ ಹಾಗೂ ನಾಗಯಕ್ಷೆಯ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ನಾಗ ಬನ ಸಮಿತಿ ಕೋರಿದೆ.

error: