May 17, 2024

Bhavana Tv

Its Your Channel

ಸಾಮಾಜಿಕ ಪರಿಶೋಧನೆಯಿಂದ ಸರಕಾರಿ ಯೋಜನೆಯಲ್ಲಿನ ಅನೇಕ ಲೋಪಗಳಿಗೆ ಕಡಿವಾಣ ಸಾಧ್ಯ -ಗಣಪತಿ ಹೆಗಡೆ

ಭಟ್ಕಳ- ಸರಕಾರದ ಹಲವು ಯೋಜನೆಗಳಲ್ಲಿ ಅನುಷ್ಟಾನ ಹಂತದಲ್ಲಿ ಲೋಪಗಳು ಕಂಡು ಬರುತ್ತಿದ್ದು,ಈ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಮುದಾಯಕ್ಕೆ ಸಾಮಾಜಿಕ ಪರಿಶೋಧನೆ ಒಂದು ಮುಕ್ತ ಅವಕಾಶ ನೀಡುತ್ತಿದೆ ಎಂದು ಸಾಮಾಜಿಕ ಪರಿಶೋದನಾ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಗಣಪತಿ ಹೆಗಡೆ ಅಭಿಪ್ರಾಯಪಟ್ಟರು.

ಅವರು ತೆರ್ನಮಕ್ಕಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ನಡೆದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಲ್ಲಿನ ಸಾಮಾಜಿಕ ಪರಿಶೋಧನೆ ಶಾಲಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅವರು ಬಿಸಿಊಟದಲ್ಲಿ ಗಂಭೀರ ಪ್ರಕರಣಗಳು ಕಂಡುಬAದಲ್ಲಿ ಸರಕಾರದ ಗಮನಕ್ಕೆ ವರದಿ ಸಲ್ಲಿಕೆಯಾಗಿ ಬದಲಾವಣೆಯಾಗುವ ಸಾಧ್ಯತೆಗಳನ್ನು ಉದಾಹರಿಸಿದರು.

ಸಾಮಾಜಿಕ ಪರಿಶೋಧನೆ ಕೇಂದ್ರ ಸರಕಾರದ ಒಂದು ವಿಭಿನ್ನ ಕಲ್ಪನೆಯಾಗಿದ್ದು ಉಳಿದೆಲ್ಲ ಪರಿಶೋಧನೆಗಿಂತ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಸಾಮಾಜಿಕ ಪರಿಶೋಧನೆಯಿಂದ ಸಾಧ್ಯ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಸಾಧಿಸುವಲ್ಲಿ ಇದು ಅತ್ಯಂತ ಸಹಕಾರಿ ಎಂದು ತಾಲೂಕು ಪಂಚಾಯನ ಸಾಮಾಜಿಕ ಪರಿಶೋಧನೆಯ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ನುಡಿದರು.

ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯದ ಆದೇಶದಂತೆ ಫೆಬ್ರವರಿ ಆರರಿಂದ ತೆರ್ನಮಕ್ಕಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಊಟದ ಸಾಮಾಜಿಕ ಪರಿಶೋಧನೆ ನಡೆಸುತ್ತಿದ್ದು ಅದರಲ್ಲಿ ತಮ್ಮ ತಂಡವು ಕೈಗೊಂಡ ಪ್ರತಿ ಹಂತಗಳ ವಿವರಗಳನ್ನು ಸಭೆಯಲ್ಲಿ ಎಳೆಎಳೆಯಾಗಿ ಬಿಡಿಸಿ ಹೇಳಿದರು. ಬಿಸಿಊಟದ ಅಡುಗೆ ಕೋಣೆಯ ಪರಿಶೀಲನೆ, ಊಟ ತಯಾರಿಕಾ ಹಂತ, ಬಡಿಸುವಲ್ಲಿನ ಸ್ವಚ್ಚತೆ ಊಟದ ರುಚಿ, ಮಕ್ಕಳ ಹಾಗೂ ಪಾಲಕರ ಅಭಿಪ್ರಾಯ ಸಂಗ್ರಹಣೆ ಪುರ್ವಬಾವಿ ಸಭೆ ಈ ಎಲ್ಲ ವಿಷಯಗಳ ಕುರಿತು ತಾವು ಕಂಡುಕೊAಡ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು. ಎಲ್ಲಿ ಶಿಕ್ಷಕರು ಪಾಲಕರು ಮಕ್ಕಳು ಮತ್ತು ಅಡುಗೆಯವರ ಪರಸ್ಪರ ಹೊಂದಾಣಿಕೆ ವಿಶ್ವಾಸ ಇರುತ್ತದೆಯೋ ಅಲ್ಲಿ ಯಾವುದೇ ಲೋಪಗಳು ಕಂಡುಬರುವುದಿಲ್ಲ. ಈ ಸಕಾರಾತ್ಮಕ ಬದಲಾವಣೆ ಎಲ್ಲ ಶಾಲೆಗಳಲ್ಲೂ ಮುಂದಿನ ದಿನಗಳಲ್ಲಿ ಕಾಣುವಂತಾಗಬೇಕು ಎಂದರು. ಹಾಗೂ ಪಾಲಕರಿಗೆ ಅವರ ಅಭಿಪ್ರಾಯಗಳಿಗೆ ಸಲಹೆ ಸೂಚನೆಗಳಿಗೆ ಮುಕ್ತ ಅವಕಾಶ ನೀಡಲಾಯಿತು.
ಅತಿಥಿಗಳನ್ನು ಪರಿಚಯಿಸಿದ ಶಾಲಾ ಮುಖ್ಯಶಿಕ್ಷಕ ಶಂಕರ ಉಪ್ಪರಗಿಮನೆಯವರು ಮಾತನಾಡಿ ನಮ್ಮ ಶಾಲೆಯಲ್ಲಿ ಕೆಲವು ಕೊರತೆಗಳನ್ನು ಪರಿಹರಿಸುವಲ್ಲಿ ಮುಂದಿನ ದಿನದಲ್ಲಿ ಸರಕಾರ ಸಹಾಯ ದೊರಕಬೇಕು ಆ ಕೊರತೆಗಳನ್ನು ಬೇಡಿಕೆಯಾಗಿ ಸಭೆಯ ಗಮನಕ್ಕೆ ತಂದರು.
ನೊಡೆಲ್ ಅಧಿಕಾರಿಯಾಗಿ ಆಗಮಿಸಿದ ತೋಟಗಾರಿಕೆ ಇಲಾಖಾ ಸಹಾಯಕ ಅಧಿಕಾರಿ ಮನೋಹರ ಈ ಶಾಲೆಯ ಕೈತೋಟ ನಿರ್ಮಾಣಕ್ಕೆ ತಮ್ಮ ಇಲಾಖೆಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.ಶಾಲಾಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ರಾಜು ನಾಯ್ಕ ಪರಿಶೋಧನೆಯ ಬಗ್ಗೆ ಮೆಚ್ಚುಗೆ ಮಾತನಾಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲ ಪ್ರಶಾಂತ ಪಟಗಾರ ಪ್ರತಿ ಪಾಲಕರು ವಾರದಲ್ಲಿ ಒಬ್ಬರಾದರೂ ಊಟದ ಸಮಯಕ್ಕೆ ಬಂದು ಊಟದ ರುಚಿ ನೋಡಿದಕ್ಕೆ ಎಲ್ಲವೂ ನಿರಾಳವಾಗಿ ಸಾಗಲು ಸಾಧ್ಯತೆ ಇದೆ ಎಂದರು. ಸಹಶಿಕ್ಷಕ ರಘುನಾಥ್ ಶೇರುಗಾರರವರು ಕಾರ್ಯಕ್ರಮ ನಿರ್ವಹಿಸಿದರು.
ಸಹಶಿಕ್ಷಕಿ ವಂದಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಸಭೆಯಲ್ಲಿ ಸಮಿತಿ ಸದಸ್ಯರು ಹಾಗೂ 200 ಕ್ಕೂ ಹೆಚ್ಚಿನ ಪಾಲಕರು ಅಡುಗೆ ತಯಾರಿಕಾ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.

error: