April 28, 2024

Bhavana Tv

Its Your Channel

ಭಟ್ಕಳ ಹೆಬಳೆಗೆ ಬಂದಿಳಿದ 5ಎಮ್ ವಿಎ ಸಾಮರ್ಥ್ಯದ ಹೊಸ ವಿದ್ಯುತ್ ಪರಿವರ್ತಕ

ಭಟ್ಕಳ ತಾಲೂಕಿನ ಹೆಬಳೆಯಲ್ಲಿ ಇರುವ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಇರುವ 3 ವಿದ್ಯುತ್ ಪರಿವರ್ತಕಗಳ ಪೈಕಿ 1 ಪರಿವರ್ತಕ ಕೆಟ್ಟುಹೋಗಿ ವಿದ್ಯುತ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವನ್ನು ಸರಿಪಡಿಸಲು ಹೆಸ್ಕಾಂ ಅಧಿಕಾರಿಗಳು ಪ್ರಯತ್ನ ಮುಂದುವರೆಸಿದ್ದು, 5ಎಮ್ ವಿಎ ಸಾಮರ್ಥ್ಯದ ಹೊಸ ವಿದ್ಯುತ್ ಪರಿವರ್ತಕ ಭಟ್ಕಳ ಹೆಬಳೆಗೆ ಬಂದಿಳಿದಿದೆ.

ಸರಿಸುಮಾರು 62 ಲಕ್ಷ ರೂಪಾಯಿ ವೆಚ್ಚದ ಈ ವಿದ್ಯುತ್ ಪರಿವರ್ತಕವನ್ನು ಆಳವಡಿಸುವ ಕಾರ್ಯಕ್ಕೆ ಬುಧವಾರ ಸಂಜೆಯೇ ಚಾಲನೆ ನೀಡಲಾಗಿದ್ದು, 30 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಭಟ್ಕಳ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಮಂಜುನಾಥ, ಅಭಿಯಂತರ ಶಿವಾನಂದ ಸ್ಥಳದಲ್ಲಿ ಹಾಜರಿದ್ದು, ತಡ ರಾತ್ರಿಯವರೆಗೂ ಕೆಲಸ ಮುಂದುವರೆಯುವ ನಿರೀಕ್ಷೆ ಇದೆ. ಕಳೆದ 20 ವರ್ಷಗಳಿಂದ ಚಾಲನೆಯಲ್ಲಿದ್ದ ಪರಿವರ್ತಕ ‘ಕಳೆದ ಮಾ.12ರ ರಾತ್ರಿ ವಿದ್ಯುತ್ ಪರಿವರ್ತಕ ಕೆಟ್ಟು ಹೋದ ಪರಿಣಾಮವಾಗಿ ಅರ್ಧ ಭಟ್ಕಳಕ್ಕೆ ಕತ್ತಲು ಆವರಿಸಿತ್ತು, ವಿದ್ಯುತ್ ಒತ್ತಡವನ್ನು ನಿಭಾಯಿಸಿ ವಿದ್ಯುತ್ ಪೂರೈಕೆಯನ್ನು ಸರಿದೂಗಿಸಲು ಹೆಸ್ಕಾಂ ಅಧಿಕಾರಿಗಳು ಇಲ್ಲಿನ ವೆಂಕಟಾಪುರ ಮುಖ್ಯ ತಂತಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿ ಪ್ರಯತ್ನ ನಡೆಸಿದರಾದರೂ ಯಶಸ್ಸು ಸಿಗಲಿಲ್ಲ. ಪರಿಣಾಮವಾಗಿ ಪ್ರತಿ ಊರಿಗೂ ಕೆಲ ಕಾಲ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿ ಒತ್ತಡ ನಿಭಾಯಿಸುವುದು ಹೆಸ್ಕಾಂಗೆ ಅನಿವಾರ್ಯವಾಗಿ ಬಿಟ್ಟಿತು. ಇದರಿಂದ ಆಕ್ರೋಶಗೊಂಡ ಜನರ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಹೆಸ್ಕಾಂ ಅಧಿಕಾರಿಗಳು ಹೈರಾಣಾಗಿ ಹೋದರು. ಸಮಸ್ಯೆಯನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುತ್ತ
ಜನರ ಆಕ್ರೋಶವನ್ನು ತಣಿಸುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾಗಿದ್ದ ಆಯಿತು. ಇದೀಗ ಹೊಸ ಪರಿವರ್ತಕವನ್ನೇ ತರಿಸಿಲಾಗಿ ಗುರುವಾರದಿಂದಲೇ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
110 ಕೆವಿ ಟೆಂಡರ್ ಮುಗಿದರೂ ಕಾಮಗಾರಿ ಇಲ್ಲ!!
ಭಟ್ಕಳದಲ್ಲಿ ವಿದ್ಯುತ್ ಅಸಮರ್ಪಕ ಪೂರೈಕೆ ಸಮಸ್ಯೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಪೆಡಂಭೂತವಾಗಿ ಬೆಳೆದಿದ್ದು, ಕಳೆದ 1 ದಶಕದಿಂದ ಭಟ್ಕಳದಲ್ಲಿ 110ಕೆವಿ ವಿದ್ಯುತ್ ವಿತರಣಾ ಕೇಂದಕ್ಕೆ ಇಲ್ಲಿನ ಜನರು ಬೇಡಿಕೆ ಇಡುತ್ತ ಬಂದಿದ್ದಾರೆ. ಈಗಾಗಲೇ 20 ಕೋಟಿ ರುಪಾಯಿ ವೆಚ್ಚದ ಈ ಕಾಮಗಾರಿಗೆ (2021, ನ.26) ಟೆಂಡರ್ ಕರೆಯಲಾಗಿದೆಯಾದರೂ ಬಿಡ್ಡ ಸಲ್ಲಿಸಿದ ಕಂಪನಿಯ ಕಾಮಗಾರಿ ಆರಂಭಿಸಲು ಆಸಕ್ತಿ ತೋರುತ್ತಿಲ್ಲ. ಬಿಡ್ ಸಲ್ಲಿಸಿದ ನಂತರವೂ ಗುತ್ತಿಗೆದಾರರು ದರ ಏರಿಕೆಗೆ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಭಟ್ಕಳದ 110ಕಿಏ ವಿದ್ಯುತ್ ವಿತರಣಾ ಘಟಕ ನಿರ್ಮಾಣ ಕಾಮಗಾರಿಗ ಒಬ್ಬರೇ ಬಿಡ್ ಸಲ್ಲಿಸಿರುವುದರಿಂದ ಗುತ್ತಿಗೆದಾರರನ್ನು ಬದಲಾಯಿಸಲು ಇಂಧನ ಇಲಾಖೆ ಮೀನ ಮೇಷ ಎಣಿಸುತ್ತಿದೆ.
ನಾವುಂದ ಸಂಪರ್ಕವೂ ವಿಳಂಬ:
ಇತ್ತ ಭಟ್ಕಳದಲ್ಲಿ ವಿದ್ಯುತ್ ವ್ಯತ್ಯಯವನ್ನು ನೀಗಿಸುವ ನಿಟ್ಟಿನಲ್ಲಿ ಭಟ್ಕಳಕ್ಕೆ ಪಕ್ಕದ ಉಡುಪಿ ಜಿಲ್ಲೆಯ ನಾವುಂದ ಮಾರ್ಗದೊಂದಿಗೆ ಸಂಪರ್ಕ ಜೋಡಿಸುವ ಕಾಮಗಾರಿಗೆ ಕಳೆದ 2022ರ ಜೂನ್ ತಿಂಗಳಿನಲ್ಲಿ ಅನುಮೋದನೆ ನೀಡಲಾಗಿದ್ದು, ಆ ಕಾಮಗಾರಿಯೂ ಆರಂಭವಾಗಿಲ್ಲ. ನಾವುಂದ ಸಂಪರ್ಕ ಎನ್ನುವುದು ಭೂಸ್ವಾಧೀನಕ್ಕೆ ಸೀಮಿತವಾಗಿ ಉಳಿದುಕೊಂಡಿದೆ.
ಭಟ್ಕಳ ಹೆಬಳೆ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟು ಹೋದ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದೀಗ ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಹೆಬಳೆ ಉಪಕೇಂದ್ರದಿAದ ಮತ್ತೊಂದು ವಿದ್ಯುತ್ ಪರಿವರ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಂಜುನಾಥ ತಿಳಿಸಿದ್ದಾರೆ.

error: