April 27, 2024

Bhavana Tv

Its Your Channel

ಸೂಕ್ಷ್ಮ ಪ್ರದೇಶ ಹಣೆಪಟ್ಟಿಯ ಭಟ್ಕಳದಲ್ಲಿ ಅನಾಥವಾಗಿ ನಿಂತ ವಾಹನ. ಕ್ರಮ ಕೈಗೊಳ್ಳದೇ ಜಾಣ ಕುರುಡು ಪ್ರದರ್ಶಿಸುತ್ತಿರುವ ಅಧಿಕಾರಿಗಳು

ಭಟ್ಕಳ: ವರ್ಷಗಳಿಂದ ಕಳೆದ ಹಲವಾರು ಒಂದಿಲ್ಲೊoದು ಘಟನೆಗಳಿಗೆ ಸಾಕ್ಷಿಯಾಗುವ ಭಟ್ಕಳ ನಗರ ಇಂದಿಗೂ ಸೂಕ್ಷ್ಮ ಪ್ರದೇಶ ಎನ್ನುವುದರಿಂದ ಹೊರ ಬರಲು ಸಾಧ್ಯವಾಗಲೇ ಇಲ್ಲ.
ಪೊಲೀಸ್ ಇಲಾಖೆಯಿಂದ ಹಿಡಿದು ಕಂದಾಯ ಇಲಾಖೆ ಇತರೇ ಎಲ್ಲ ಇಲಾಖೆಗಳಲ್ಲಿಯೂ ಕೂಡಾ ಭಟ್ಕಳದ ಕುರಿತು ವಿಶೇಷವಾದ ನಿಗಾ ಇದ್ದೇ ಇದೆ ಎನ್ನುವುದನ್ನು ಇಲಾಖೆಗಳ ಕಾರ್ಯ ವೈಖರಿಯೇ ಹೇಳುತ್ತವೆ.

ಸೂಕ್ಷ್ಮ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಭಟ್ಕಳದಲ್ಲಿ ಅನೇಕ ಕಡೆಗಳಲ್ಲಿ ಅನಾಥವಾಗಿ ನಿಂತಿರುವ ಕಾರುಗಳು, ಬೈಕುಗಳು ಹಲವಾರು ಸಂಶಯಕ್ಕೆ ಎಡೆಮಾಡಿಕೊಡುತ್ತವೆ.
ಕಳೆದ ಹಲವಾರು ತಿಂಗಳುಗಳಿoದ ಇಲ್ಲಿನ ಅಂಚೆ ಕಚೇರಿ ರಸ್ತೆಯಲ್ಲಿ ಅನಾಥವಾಗಿ ನಿಂತುಕೊAಡಿದ್ದ ಕಾರೊಂದು ಮುಖ್ಯ ರಸ್ತೆಗೆ ಬಂದು ನಿಂತಿದೆ, ಮುಖ್ಯ ರಸ್ತೆ ಆಗಲೇ ಕಿರಿದಾಗಿದ್ದು ವಾಹನಗಳ ಭರಾಟೆಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.
ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲಿರುವ ಈ ಕಾರನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡು ಭಟ್ಕಳಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದರೂ ಆಶ್ಚರ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ.
ಕಳೆದ ಕೆಲವು ಸಮಯದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಭಟ್ಕಳ ಅರ್ಬನ್ ಬ್ಯಾಂಕ್ ಕಟ್ಟಡದ ಅಪಾಯಕಾರಿ ತಿರುವಿನಲ್ಲಿ ಒಂದು ಕಾರನ್ನು ನಿಲ್ಲಿಸಲಾಗಿದ್ದು ಸಂಪೂರ್ಣ ನುಜ್ಜುಗುಜ್ಜಾದ ಸ್ಥಿತಿಯಲ್ಲಿದೆ.
ವಾಹನಗಳ ಓವರ್ ಟೇಕ್ ಮಾಡುವ ಭರಾಟೆಯಲ್ಲಿ ತಿರುವಿನಲ್ಲಿ ಸ್ವಲ್ಪ ಯಾಮಾರಿದರೂ ಕೂಡಾ ಕಾರಿಗೆ ಬಂದು ಡಿಕ್ಕಿಯಾಗುವ ಸಂಭವವೇ ಹೆಚ್ಚು.
ರಾತ್ರಿ ಹೊತ್ತಿನಲ್ಲಿ ದ್ವಿಚಕ್ರ ವಾಹನ ಸವಾರರಿಗೂ ಇದು ಕಂಟಕ ಪ್ರಾಯವಾಗಿದ್ದು ಯಾರೂ ಕೂಡಾ ಈ ಬಗ್ಗೆ ಗಮನ ಹರಿಸಿದಂತೆಯೇ ಕಾಣುತ್ತಿಲ್ಲ.
ಮುಖ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳೆಲ್ಲವೂ ಡಂಪಿoಗ್ ಯಾರ್ಡ್ ಆದರೂ ಸಹ ಗಮನ ಹರಿಸದ ಸಂಬAಧ ಪಟ್ಟ ಅಧಿಕಾರಿಗಳ ನಡೆ ಮಾತ್ರ ನಿಗೂಢವಾಗಿದೆ.
ಅಧಿಕಾರಿಗಳು, ಪುರಪಿತೃಗಳು ಜಾಣಕುರುಡು ಪ್ರದರ್ಶಿಸಲುಏನಾದರೂ ಕಾರಣ ಇರಬಹುದೇ ಎಂದು ನಾಗರೀಕರು ಯೋಚಿಸುವಂತಾಗಿದೆ.

error: