ದುಷ್ಕರ್ಮಿಗಳ ಮೇಲೆ ಶೀಘ್ರವಾಗಿ ತನಿಖೆ ನಡೆಸಿ ಬಂಧಿಸುವAತೆ ನಾಮಧಾರಿ ಸಮಾಜದಿಂದ ಆಗ್ರಹ
ಭಟ್ಕಳ: ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷರು ಮತ್ತು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುನಿಲನ ನೋಟು ಮಂಕಾಳಣ್ಣಗೆ ವೋಟು ಎಂಬ ನಕಲಿ ಫೇಸಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಬರೆದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಕೆಂದು ಭಟ್ಕಳ ನಾಮಧಾರಿ ಸಮಾಜದ ಉಪಾಧ್ಯಕ್ಷ ಭವಾನಿಶಂಕರ ಹೇಳಿದರು.
ಅವರು ಭಟ್ಕಳ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
‘ನಾಮಧಾರಿ ಸಮಾಜದ ಅಧ್ಯಕ್ಷರು ಮತ್ತು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆಯಲಾಗಿದ್ದು ಹಿಂದಿನ ಚುನಾವಣೆಯಲ್ಲಿ ಸುನಿಲ ನಾಯ್ಕರ ಪರವಾಗಿ ಅವರ ತಂದೆ ಅವರು ಅನೇಕ ಬಾರಿ ಕೇರಳ ಮಾಂತ್ರಿಕರನ್ನು ಸಂಪರ್ಕಿಸಿದರು ಆದರೆ ಇಂದು ಆ ಹೊಣೆಯನ್ನು ಸುನೀಲ ನಾಯ್ಕ ಅವರು ಸಹೋದರ ಸಿದ್ದಾರ್ಥ ಅವರು ಕೇರಳ ಹೋಗಲು ಹಿಂದೇಟು ಹಾಕುವ ಕಾರಣ ಈ ಜವಾಬ್ದಾರಿಯನ್ನು ಆಸರಕೇರಿ ಕೃಷ್ಣ ನಾಯ್ಕ ಅವರು ತೆಗೆದುಕೊಳ್ಳಬೇಕು ಅನ್ನುವುದು ಸುನೀಲ ನಾಯ್ಕ ಅವರ ಆದೇಶವಾಗಿದೆ ಒಂದು ವೇಳೆ ಈ ಆಜ್ಞೆಯನ್ನು ಮೀರಿದರೆ ಕೃಷ್ಣ ನಾಯ್ಕ ಅವರು ಕಳೆದ ಚುನಾವಣೆಯಲ್ಲಿ ಆಟೋ ಚಾಲಕರ ಹೆಸರಲ್ಲಿ ನುಂಗಿದ 9 ಲಕ್ಷಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿದುಬಡಲಾಗಿದೆ.
ಈ ರೀತಿಯ ಅವಹೇಳನಕಾರಿ ಬರವಣಿಗೆಯಿಂದ ಸಮುದಾಯಗಳ ಮಧ್ಯೆ ದ್ವೇಷ ಹರಡಿಸುವ ಮತ್ತು ಸಮಾಜದಲ್ಲಿ ಗೊಂದಲ ಅಶಾಂತಿ ಉಂಟುಮಾಡುವ ಕೆಲಸವಾಗಿದೆ. ಅಲ್ಲದೇ ನಾಮಧಾರಿ ಸಮಾಜದ ಅಧ್ಯಕ್ಷ ಮತ್ತು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಇವರ ಮೇಲೆ ನಾಮಧಾರಿ ಸಮಾಜ ಬಾಂದವರಲ್ಲಿ ಕೆಟ್ಟ ಅಭಿಪ್ರಾಯ ಉಂಟಾಗಿರುತ್ತದೆ. ಈ ರೀತಿಯ ಅವಹೇಳನಕಾರಿ ಬರವಣಿಗೆಯಿಂದ ಇತರ ಸಮಾಜದವರು ನಾಮಧಾರಿ ಸಮಾಜದ ಅಧ್ಯಕ್ಷರನ್ನು ಕೆಟ್ಟ ರೀತಿಯಲ್ಲಿ ನೋಡುವಂತಾಗಿದೆ ಇದರಿಂದ ನಾಮಧಾರಿ ಸಮಾಜದ ಅಧ್ಯಕ್ಷರು ಮತ್ತು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಇವರ ಹೆಸರಿಗೆ ಕಪ್ಪು ಚುಕ್ಕೆಯಾಗಿದೆ.
ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷರು ಮತ್ತು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಇವರ ವಿರುದ್ಧ ಸುನಿಲನ ನೋಟು ಮಂಕಾಳಣ್ಣಗೆ ವೋಟು ಎಂಬ ನಕಲಿ ಫೇಸಬುಕ್ ಖಾತೆಯಲ್ಲಿ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂಧರ್ಬದಲ್ಲಿ ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಎಮ್.ಆರ್.ನಾಯ್ಕ ‘ ಸಮಾಜದ ಅಧ್ಯಕ್ಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರು ದುಷ್ಕರ್ಮಿಗಳಾಗಿದ್ದಾರೆ. ಸಮಾಜದಲ್ಲಿನ ಒಗ್ಗಟ್ಟು ಹಾಳು ಮಾಡಿ ಸಮಾಜದ ಸ್ವಾಸ್ತ್ಯ ಕೆಡಿಸುವ ದುರುದ್ದೇಶ ಹೊಂದಿದ್ದಾರೆ. ಇವರಿಗೆ ದೇವರು ಶೀಘ್ರವಾಗಿ ಶಿಕ್ಷೆ ನೀಡಲಿದ್ದಾನೆ ಎಂದರು.
ಸಮಾಜದ ಹಿರಿಯ ಮುಖಂಡ ಮಾಜಿ ಶಾಸಕ ಜೆ.ಡಿ.ನಾಯ್ಕ ‘ ಓರ್ವ ಸಮಾಜದ ಅಧ್ಯಕ್ಷರ ತೇಜೋವದೆ ಮಾಡಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಕೆಟ್ಟ ಚಾಳಿ ಇತ್ತೀಚೆಗೆ ಆರಂಭವಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಕಾರವಾರದ ಸೈಬರ ಕೈಮ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳುತ್ತಾರೆ ಆದರೆ ಅವರ ತನಿಖೆ ಚುರುಕಾಗಬೇಕು ಎಂದರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಎಲ್ಲಾ ಕೂಟ ಅಧ್ಯಕ್ಷ ಸದಸ್ಯ ಹಾಗೂ ಪದಾಧಿಕಾರಿಗಳು ಇದ್ದರು.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ