April 29, 2024

Bhavana Tv

Its Your Channel

ವಿವಿಧ ಇಲಾಖೆಗೆ ಸಹಯೋಗದೊಂದಿಗೆ ನಗರದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ

ಭಟ್ಕಳ; ತಾಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘ ಭಟ್ಕಳ, ಅರಣ್ಯ ಇಲಾಖೆ, ಅಭಿಯೋಜನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ಸಹಯೋಗದೊಂದಿಗೆ ನಗರದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಉದ್ಯಾನವನದಲ್ಲಿ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕರಣಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವ ಉದ್ಧೇಶ ಹಾಗೂ ಇಂದಿನ ವಿದ್ಯಾರ್ಥಿಗಳು ಪರಿಸರದ ಕುರಿತು ಅರಿಯ ಬೇಕಾಗಿರುವ ಅಂಶಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಪಿ.ಜಿ. ನಾಯ್ಕ ವರಿಸಿದ್ದರು.
ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಮಾತನಾಡಿ ವಿಶ್ವ ಪರಿಸರ ದಿನಾಚರಣೆಗೂ ಅರಣ್ಯ ಇಲಾಖೆಗೂ ಒಂದು ಅವಿನಾಭಾವ ಸಂಬAಧ ಇದೆ. ಪ್ರತಿ ವರ್ಷವೂ ಕೂಡಾ ಇಲಾಖೆಯ ವತಿಯಿಂದ ಕೊಟ್ಯಾಂತರ ಗಿಡಗಳನ್ನು ಬೆಳೆಸಿ ವಿತರಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಧನ್ಯಕುಮಾರ್ ಜೈನ್, ಜೆ.ಸಿ.ಐ. ಸಿಟಿಯ ರಮೇಶ ಖಾರ್ವಿ ಮಾತನಾಡಿದರು. ವೇದಿಕೆಯಲ್ಲಿ ಜೆ.ಸಿ.ಐ. ಅಧ್ಯಕ್ಷೆ ಶಾಹೀನ್ ಶೇಖ್, ವಕೀಲ ಎಂ.ಜೆ. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: