May 2, 2024

Bhavana Tv

Its Your Channel

ಪುಣ್ಯಕೋಟಿ ಭವನಮ್ ಲೋಕಾರ್ಪಣೆ

ಭಟ್ಕಳ : ತಾಲುಕಿನ ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನಮ್ ಮೇಲುಗಡೆಯಲ್ಲಿ ನಿರ್ಮಿಸಲಾದ ಪುಣ್ಯಕೋಟಿ ಭವನಮ್‌ನ್ನು ಸೋಮವಾರ ಬೆಳಿಗ್ಗೆ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿ ನಾವು ನಮ್ಮ ಮನ:ಪೂರ್ವಕವಾಗಿ ತ್ಯಾಗ ಮಾಡಿದಾಗ ಅದರಲ್ಲಿರುವ ಸಂತಸ ತ್ಯಾಗ ಮಾಡಿದವರಿಗೆ ಮಾತ್ರ ಅನುಭವಕ್ಕೆ ಬರುತ್ತದೆ. ಸಮಾಜದಲ್ಲಿ ತ್ಯಾಗ ಮಾಡುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ. ನಾವು ಸಂಪಾದನೆ ಮಾಡಿದ ಹಣವನ್ನು ಕೂಡಿಟ್ಟಾಗಲೂ ಸಂತಸವಾಗುತ್ತದೆ. ಆದರೆ ನಾವು ಮಾಡಿದ ಸಂಪಾದನೆಯನ್ನು ತ್ಯಾಗ ಮಾಡಿದಾಗ ಸಂತಸ ಇಮ್ಮಡಿಯಾಗಿರುತ್ತದೆ. ಸಮಾಜದಲ್ಲಿ ಉಳ್ಳವರು ಅನೇಕರಿದ್ದರೂ ಸಹ ತ್ಯಾಗ ಮನೊಭಾವನೆಯನ್ನು ಬೆಳೆಸಿಕೊಂಡವರ ಸಂಖ್ಯೆ ಬಹಳ ಕಡಿಮೆ ಇದೆ ಎಂದ ಅವರು ಬಲ್ಸೆ ಕೃಷ್ಣಾನಂದ ಭಟ್ಟ ಅವರ ತ್ಯಾಗ ಅತ್ಯಂತ ಶ್ಲಾಘನೀಯವಾದದ್ದು. ಸಮಾಜಕ್ಕೆ ಏನು ಕೊಟ್ಟರೂ ಕಡಿಮೆ ಎನ್ನುವ ಅವರ ಭಾವನೆಗೆ ತ್ಯಾಗದ ಮೂಲವಾಗಿದೆ ಎಂದರು.
ಪ್ರತಿಯೋರ್ವರೂ ಕೂಡಾ ಸಮಾಜ ಮುಖಿಯಾಗಿ ಚಿಂತನೆ ಮಾಡಿದಾಗ, ಸಮಾಜಕ್ಕಾಗಿ ತ್ಯಾಗ ಮಾಡಲು ಪ್ರೇರಣೆಯಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುವುದು. ಸೂರ್ಯನು ಪ್ರತಿಯೊಂದು ಕಡೆಯಲ್ಲಿಯೂ ತನ್ನ ಕಿರಣವನ್ನು ಸಮಾನವಾಗಿ ಹರಿಬಿಡುವಂತೆ ಪ್ರತಿಯೊರ್ವರಿಗೂ ಕೂಡಾ ಪ್ರೇರಣೆಯಾದರೂ ಸಹ ತ್ಯಾಗ ಮಾಡುವವರ ಸಂಖ್ಯೆ ಮಾತ್ರ ಕಡಿಮೆ ಇದೆ. ಸಮಾಜದಲ್ಲಿ ಉಳ್ಳವರು ಸಮಾಜಮುಖಿಯಾಗಿ ತ್ಯಾಗ ಮಾಡಲು ಮುಂದಾಗಬೇಕು ಆಗ ನಿಮ್ಮ ಬಗ್ಗೆ ನಿಮಗೇನೇ ಸಂತಸ ಮೂಡುತ್ತದೆ, ಆತ್ಮ ತೃಪ್ತಿಯಾಗುತ್ತದೆ ಎಂದೂ ಅವರು ಕರೆ ನೀಡಿದರು.
ಇದಕ್ಕೂ ಪೂರ್ವ ಮಾತನಾಡಿದ ಪುಣ್ಯಕೋಟಿ ಭವನಮ್ ನಿರ್ಮಾತೃ ಬಲ್ಸೆ ಕೃಷ್ಣಾನಂದ ಭಟ್ಟ ಅವರು ಇದು ತನಗೆ ಶ್ರೀಗಳಿಂದಾದ ಪ್ರೇರಣೆಯಿಂದ ಇಷ್ಟು ಸುಂದರವಾಗಿ ಮೂಡಿ ಬಂದಿದೆ. ಸಮಾಜದ ಸಹಕಾರದಿಂದ ಸಭಾ ಭವನ ನಿರ್ಮಾಣವಾಯಿತು. ಶ್ರೀಗಳ ಪ್ರೇರಣೆಯಿಂದ ಆಚಾರ್ಯ ಭವನಮ್ ನಿರ್ಮಾಣವಾಯಿತು. ಗೋವುಗಳ ಪ್ರೇರಣೆಯಿಂದ ಪುಣ್ಯಕೋಟಿ ಭವನಮ್ ನಿರ್ಮಾಣವಾಗಿದ್ದು ಇದು ಸಮಾಜಕ್ಕೆ ಸಮರ್ಪಿಸಬೇಕು ಎನ್ನುವ ಸಂಕಲ್ಪದಿAದ ಸಾಧ್ಯವಾಯಿತು. ನಾನು ಮೊದಲು ಗಳಿಕೆಯ ಹಣವನ್ನು ಕೂಡಿಟ್ಟು ಸಂತಸ ಪಡುತ್ತಿದೆ. ಆದರೆ ಶ್ರೀಗಳ ಪ್ರೇರಣೆಯಿಂದ ಗಳಿಕೆಯ ಹಣವನ್ನು ಸಮಾಜಕ್ಕಾಗಿ ತ್ಯಾಗ ಮಾಡುವ ಸಂಕಲ್ಪ ಮಾಡಿದ ನಂತರ ನನಗಾದ ಸಂತಸ ಇಲ್ಲಿ ವರ್ಣಿಸಲು ಸಾಧ್ಯವಿಲ್ಲದ್ದು ಎಂದ ಅವರು ಮುಂದಿನ ದಿನಗಳಲ್ಲಿ ಭವ್ಯವಾದ ಸ್ವಾಗತ ಗೋಪುರ ನಿರ್ಮಾಣ ಮಾಡುವ ಇಚ್ಚೆಯಿದೆ ಎಂದರು.
ಭಾನುವಾರ ಸಂಜೆ ಬಂದು ಮೊಕ್ಕಾಂ ಹೂಡಿದ್ದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಗುರು ಭಕ್ತರು ಸ್ವಾಗತಿಸಿ ಧೂಳೀ ಪೂಜೆ ನೆರವೇರಿಸಿದರು. ಸೋಮವಾರದ ಭೀಕ್ಷಾ ಸೇವೆಯನ್ನು ಬಲ್ಸೆ ಕೃಷ್ಣಾನಂದ ಭಟ್ಟ ಅವರು ನಡೆಸಿಕೊಟ್ಟರು.

error: