May 10, 2024

Bhavana Tv

Its Your Channel

ಮಲೇರಿಯಾ ಹರಡದಂತೆ ಎಚ್ಚರಿಕೆ ವಹಿಸಿ – ಡಾ ಉಷಾ ಹಾಸ್ಯಗಾರ

ಹೊನ್ನಾವರ: ಅನಾಫಿಲೀಸ್ ಹೆಣ್ಣು ಸೊಳ್ಳೆಯಿಂದ ಹರಡುವ ಮಲೇರಿಯಾ ರೋಗದ ಮರಣ ತೀವ್ರತೆ ಕರೋನಾ ಮಹಾಮಾರಿಗಿಂತ ಹೆಚ್ಚಾಗಿರುತ್ತದೆ ಎಂದು ಹೊನ್ನಾವರ ತಾಲ್ಲೂಕು ವೈದ್ಯಾಧಿಕಾರಿ ಡಾ.ಉಷಾ ಹಾಸ್ಯಗಾರರವರು ತಿಳಿಸಿದರು.

ಅವರು ಗುರುವಾರ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ಮಾಧ್ಯಮ ವರದಿಗಾರರಿಗೆ ಮಲೇರಿಯಾ ಜಾಗ್ರತಿ ಕುರಿತು ಎರ್ಪಡಿಸಿದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆ ರೋಗ ತಾಣವಲ್ಲ. ಆದರೆ ಹೊರ ಜಿಲ್ಲೆ ಹಾಗು ಹೊರ ರಾಜ್ಯಗಳಿಂದ ಆಗಮಿಸಿದ ಮಲೇರಿಯಾ ರೋಗಿಗಳಿಂದ ರೋಗ ಹರಡುವ ಸಾಧ್ಯತೆ ಇರುತ್ತದೆ. ಓರಿಸ್ಸಾ, ಉತ್ತರ ಪ್ರದೇಶ ಹಾಗೂ ಜಾರ್ಕಂಡದಿAದ ಕಟ್ಟಡ ಕೆಲಸಕ್ಕೆ ಆಗಮಿಸುವ ಕಾರ್ಮಿಕರಲ್ಲಿ ಹಾಗೂ ಮೀನುಗಾರಿಕೆ ಆಗಮಿಸಿದ ಕಾರ್ಮಿಕರಲ್ಲಿ ಈ ರೋಗ ಕಂಡು ಬರುತ್ತದೆ.
ಸೊಳ್ಳೆಗಳಿಂದ ವೇಗವಾಗಿ ಹರಡುವ ಈ ರೋಗವು ಒಬ್ಬ ಮಲೇರಿಯಾ ರೋಗದಿಂದ ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಜ್ವರ ಅಥವಾ ಮಲೇರಿಯಾ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ರಕ್ತ ತಪಾಸಣೆ ಮಾಡಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ೨೦೧೮ರಲ್ಲಿ ೩೮, ೨೦೧೯ರಲ್ಲಿ ೧೬, ೨೦೨೦ರಲ್ಲಿ೬ ಪ್ರಕರಣಗಳು ಪತ್ತೆಯಾಗಿದೆ. ಆದರೆ ಈ ವರ್ಷ ಮೇ ೩೧ರವರೆಗೆ ಜಿಲ್ಲೆಯಲ್ಲಿ ಹೊನ್ನಾವರದಿಂದಲೇ ಮೂರು ಮಲೇರಿಯಾ ಕೇಸುಗಳು ಪತ್ತೆಯಾಗಿವೆ. ಎಲ್ಲವು ಹೊರಗಿನಿಂದ ಬಂದವರಿAದಲೇ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ವರದಿ- ವೆಂಕಟೇಶ ಮೇಸ್ತ ಹೊನ್ನಾವರ

error: