April 29, 2024

Bhavana Tv

Its Your Channel

ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದ ವಿಷಯದಲ್ಲಿ ಹೊನ್ನಾವರಕ್ಕೆ ಮಲತಾಯಿ ಧೋರಣೆ; ಕರುನಾಡ ವಿಜಯಸೇನೆಯಿಂದ ಪ್ರತಿಭಟನೆಯ ಎಚ್ಚರಿಕೆ

ಹೊನ್ನಾವರ; ತಾಲೂಕಿನ ಹಲವು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಮಲತಾಯಿ ಧೋರಣೆ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯದೇ ಹಾಗೆಯೇ ಮುಂದುವರೆದರೇ,ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಗೌರವಧ್ಯಕ್ಷರ ವಿನೋದ ನಾಯ್ಕ ರಾಯಲಕೇರಿ ಎಚ್ಚರಿಸಿದ್ದಾರೆ.
ತಾಲೂಕಿನ ಮತದ ಮೇಲೆ ಕಣ್ಣಿಡುವ ಜನಪ್ರತಿನಿಧಿಗಳು ಇಲ್ಲಿಯ ಸಮಸ್ಯೆಗೆ ಸ್ಪಂದಿಸಲು ಮುಂದಾಗದೇ ಇರುವುದು ವಿಷಾಧನೀಯ. ಐ.ಆರ್.ಬಿ ಕಂಪನಿಯ ಪಟ್ಟಣದ ರಸ್ತೆ ಅಗಲೀಕರಣ ವಿಷಯದಲ್ಲಿ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಲು ಸಂಘಟನೆ ಮುಂದಾಗಿದೆ. ನೆರೆಯ ಮಂಕಿ ಮುರ್ಡೇಶ್ವರ ಭಾಗದಲ್ಲಿ ೪೫ ಮೀಟರ್ ಹಾಗೂ ಸರ್ವೀಸ್ ರಸ್ತೆ ಮಂಜೂರಾಗಿದ್ದು, ಹೊನ್ನಾವರಕ್ಕೆ ಯಾಕಿಲ್ಲ ಈ ಸೌಲಭ್ಯ ಎಂದು ಪ್ರಶ್ನಿಸಿದರು. ಇಲ್ಲಿ ಪಟ್ಟಬದ್ರ ಹಿತಾಸಕ್ತಿಗಳ ಕೈವಾಡವಿದೆ. ಈ ಬಗ್ಗೆ ಶಾಸಕರು, ಸಚಿವರು ಸಂಸದರಿoದ ಹಿಡಿದು ಸಂಬಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲು ಸಂಘಟನೆ ಮುಂದಾಗಲಿದೆ. ಸಮಸ್ಯೆ ಬಗೆಹರಿಯದೇ ಹೋದಲ್ಲಿ ಪ್ರತಿಭಟನೆ ನಡೆಸಲಿದೆ ಎಂದರು.

ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ ತಾಲೂಕಿಗೇ ಎರಡು ಶಾಸಕರಿದ್ದಾರೆ. ಇಲ್ಲಿಯ ಮತದಾರರಿಂದಲೇ ಇವರು ಈ ಹಿಂದೆ ಆಯ್ಕೆಯಾಗಿದ್ದಾರೆ. ಹೆದ್ದಾರಿ ಅಗಲೀಕರಣದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳ ಸಭೆ ನಡೆಸಿ. ನಿಮ್ಮಿಂದ ಸಾಧ್ಯವಾಗದೇ ಹೋದಲ್ಲಿ ತಾಲೂಕಿನ ಪ್ರತೈಕ ವಿಧಾನಸಭಾ ಕ್ಷೇತ್ರ ಮಂಜೂರು ಮಾಡುವಂತೆ ಸವಾಲು ಹಾಕಿದರು.

ಸಂಘಟನೆಯ ಜಿಲ್ಲಾ ವಕ್ತಾರ ಶ್ರೀರಾಮ ಹೊನ್ನಾವರ ಮಾತನಾಡಿ ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಸಂಚರಿಸುತ್ತಾರೆ. ಹಲವು ಬಾರಿ ಭೀಕರ ಅಪಘಾತಗಳು ಸಂಭವಿಸುತ್ತದೆ. ಸರ್ವಿಸ್ ರಸ್ತೆ ತೀರಾ ಅಗತ್ಯವಿದ್ದು, ಬೇಡಿಕೆ ಈಡೇರದೇ ಹೋದಲ್ಲಿ ಆರಂಭಿಕವಾಗಿ ರಸ್ತೆ ತಡೆ, ರೋಡ್ ರೋಖೊ ಪ್ರತಿಭಟಿಸಿ ನಡೆಸಿ ನಂತರ ದಿನದಲ್ಲಿ ಜನಪ್ರತಿನಿಧಿಗಳು ಹೊನ್ನಾವರಕ್ಕೆ ಬಂದಾಗ ವಾಹನ ತಡೆದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೀರೀಶ ನಾಯ್ಕ ಹಡಿಕಲ್, ತಾಲೂಕ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ, ಪದಾಧಿಕಾರಿಗಳಾದ ರಾಹುಲ್ ಮೇಸ್ತ, ನಿತಿನ್ ಅಂಬಿಗ, ಅಲ್ತಾಪ್ ಶೇಖ್, ಮಹೇಶ ಮೇಸ್ತ, ಸದಸ್ಯರು ಹಾಜರಿದ್ದರು.
ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ.

error: