May 18, 2024

Bhavana Tv

Its Your Channel

ಯಕ್ಷಗುರು ದಿ.ಕೃಷ್ಣ ಭಂಡಾರಿಯವರಿಗೆ ನುಡಿನಮನ

ಹೊನ್ನಾವರ: ಏನು ಅರಿಯದ ಚಿಣ್ಣರಿಂದ ಹಾಗೂ ಯಕ್ಷಗಾನದ ಆಸಕ್ತಿ ಉಳ್ಳ ಸಾಮಾನ್ಯರಿಂದ ಯಕ್ಷಗಾನ ಕಲೆಯನ್ನು ಅರಳಿಸುವ ವಿಶಿಷ್ಟ ಕಲೆ ದಿ.ಕೃಷ್ಣ ಭಂಡಾರಿಯವರಿಗೆ ಇತ್ತು ಎಂದು ನಿವೃತ್ತ ಶಿಕ್ಷಕ ಮುಗ್ವಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಮ್. ನಾಯ್ಕ ಅಭಿಪ್ರಾಯಪಟ್ಟರು.
ಅವರು ಮುಗ್ವಾ ನಾಮಧಾರಿ ಭಜನಾ ಮಂದಿರದಲ್ಲಿ ಇತ್ತೀಚೆಗೆ ಮೃತರಾದ ಯಕ್ಷಗುರು ದಿ.ಕೃಷ್ಣ ಭಂಡಾರಿಯವರಿಗೆ ಅವರ ಶಿಷ್ಯರಿಂದ ಹಾಗೂ ನಾಮಧಾರಿ ಸಂಘ ಮುಗ್ವಾದಿಂದ ಏರ್ಪಡಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸುಸಂಸ್ಕೃತ ಸಜ್ಜನಿಕೆಯ ವ್ಯಕ್ತಿತ್ವದ ದಿ.ಕೃಷ್ಣ ಭಂಡಾರಿ ಭಾಗವತಿಕೆಯಲ್ಲಿ ಪ್ರಸಿದ್ಧರಾದರೂ ಕೂಡ ಯಕ್ಷರಂಗದ ಪ್ರತಿ ಆಯಾಮಗಳ ಅರಿವನ್ನು ಹೊಂದಿದ್ದರು. ಸ್ತಿçà ಪಾತ್ರವಿರಲಿ, ಪುರಷ ಪಾತ್ರವಿರಲಿ, ತರುಣ ಪಾತ್ರವಿರಲಿ, ದೈತ್ಯ ಪಾತ್ರವೇ ಇರಲಿ ಅವುಗಳ ಸಂಪೂರ್ಣ ಅರಿವು ಅವರಿಗಿತ್ತು. ಆದ್ದರಿಂದಲೇ ಅವರು ಸೃಷ್ಠಿಸಿದ ಅನೇಕ ಶಿಷ್ಯರು ಯಕ್ಷವೇದಿಕೆಯಲ್ಲಿ ಮಿಂಚುತ್ತಿದ್ದಾರೆ ಎಂದರು.
ಯಕ್ಷಗಾನ ಕಲಾವಿದ ಕುಮಾರ ಗಣೇಶ ನಾಯ್ಕ ಮಾತನಾಡಿ ಭಾಗವತಿಕೆ, ವೇಷ, ಮದ್ದಳೆ, ಚಂಡೆ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಂಡ ಕೃಷ್ಣ ಭಂಡಾರಿಯವರು ಯಕ್ಷಗಾನದಲ್ಲಿ ಸವ್ಯ ಸಾಚಿಯಾಗಿದ್ದರು. ಅವರಲ್ಲಿ ಶಿಕ್ಷಣ ಪಡೆದ ಶಿಷ್ಯರನ್ನು ಜನ ಗುರುತಿಸುವಂತಾಗಿದೆ. ಯಕ್ಷಗಾನಕ್ಕೆ ನೂರಾರು ಕಲಾವಿದರನ್ನು ಅಣಿಗೊಳಿಸಿ ಗೆಜ್ಜೆ ಕಟ್ಟಿಸಿದ ಕೃಷ್ಣ ಭಂಡಾರಿಯವರ ಸಾಧನೆ ಇತಿಹಾಸದಲ್ಲಿ ದಾಖಲಾಗಿರುತ್ತದೆ ಎಂದರು.
ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಕೃಷ್ಣ ಭಂಡಾರಿ ಓರ್ವ ಸಾಮಾನ್ಯ ಹಿನ್ನಲೆಯಿಂದ ಬಂದ ಕಲಾವಿದನಾದÀರೂ ಯಕ್ಷÀಗಾನವನ್ನು ಶ್ರೀಮಂತಗೊಳಿಸಲು ಅವರು ನೀಡಿದ ಕಾಣಿಕೆ ಅಮೂಲ್ಯವಾದದ್ದು. ಅವರು ಕಲೆಯನ್ನ ಪ್ರೀತಿಸಿದವರಾಗಿದ್ದರು. ಆದ್ದರಿಂದ ಕಲೆಯನ್ನು ಬೆಳೆಸಲು, ಉಳಿಸಲು ತಮ್ಮದೇ ದಾರಿಯನ್ನು ಅವರು ಕಂಡುಕೊoಡಿದ್ದರು. ಇಂತಹ ಉನ್ನತ ಕಲಾವಿದನಿಗೆ ಔಚಿತ್ಯಪೂರ್ಣ ಗೌರವ ದೊರಕಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಮುಗ್ವಾ ನಾಮಧಾರಿ ಭಜನಾ ಮಂದಿರದಲ್ಲಿ ಚಿಣ್ಣರನ್ನು ತರಬೇತುಗೊಳಿಸಿ ರಂಗಕ್ಕೆ ಅಣಿಗೊಳಿಸಿದ ಯಕ್ಷಗುರು ಕೃಷ್ಣ ಭಂಡಾರಿಯವರ ನೆನಪಿಗಾಗಿ ಸಂಘದ ಬಯಲು ರಂಗಮAದಿರದ ಪಕ್ಕದಲ್ಲಿ ತೆಂಗಿನ ಗಿಡಗಳನ್ನು ನೆಡಲಾಯಿತು.

error: