April 29, 2024

Bhavana Tv

Its Your Channel

ಎಸ್. ಡಿ. ಎಂ. ಪದವಿ ಕಾಲೇಜಿನಲ್ಲಿ ಮನಗೆದ್ದ ಸಾಮೂಹಿಕ ಗೀತಗಾಯನ

ಹೊನ್ನಾವರ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನದಂತೆ ‘ಕನ್ನಡಕ್ಕಾಗಿ ನಾವು’ ಕರ್ನಾಟಕ ರಾಜ್ಯೋತ್ಸವ ಅಭಿಯಾನವನ್ನು ಎಸ್. ಡಿ. ಎಂ. ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾದ ಡಾ. ವಿಜಯ ಲಕ್ಷ್ಮಿ ಎಂ. ನಾಯ್ಕ ಉದ್ಘಾಟಿಸಿದರು.


ಸಂಗೀತ ವಿಭಾಗದ ಮುಖ್ಯಸ್ಥರಾದ ಪ್ರೊ. ಗೋಪಾಲಕೃಷ್ಣ ಹೆಗಡೆ, ಕಲ್ಭಾಗ ಮತ್ತು ಇಂಗ್ಲಿಷ್ ವಿಭಾಗದ ಪ್ರೊ. ಕೆ. ಆರ್. ಶ್ರೀಲತಾ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಾದ ಗಾನಾ ಭಂಡಾರಿ, ಭಾಗ್ಯಶ್ರೀ ನಾಯ್ಕ, ನೇಹಾ ಭಟ್ಟ, ನಿಹಾರಿಕಾ ಭಟ್ಟ, ಅಭಿಷೇಕ ಭಂಡಾರಿ ಮತ್ತು ಸಹಸ್ರಾರು ವಿದ್ಯಾರ್ಥಿಗಳು ಏಕಕಾಲದಲ್ಲಿ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಪದ್ಯವನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಗೆದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ನಾಗರಾಜ ಹೆಗಡೆ ಅಪಗಾಲ ಮೂರು ಗೀತೆಗಳ ಸ್ವಾರಸ್ಯವನ್ನು ಮತ್ತು ಎಲ್ಲರೂ ಕನ್ನಡದ ಕೈಂಕರ್ಯವನ್ನು ಮಾಡಬೇಕಾದ ಅವಶ್ಯಕತೆಯನ್ನು ಮನಮುಟ್ಟುವಂತೆ ವಿವರಿಸಿದರು

ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ಪ್ರೊ. ಸಂಜೀವ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪ್ರೊ. ಪ್ರಶಾಂತ ಹೆಗಡೆ ಮೂಡಲಮನೆ ವಂದಸಿದರು. ವಿದ್ಯಾರ್ಥಿ ಒಕ್ಕೂಟದ ಸಲಹೆಗಾರರಾದ ಡಾ. ಸುರೇಶ್ ಎಸ್., ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಹಸ್ರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: