April 29, 2024

Bhavana Tv

Its Your Channel

ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಉದ್ಯೋಗದ ಖಚಿತತೆ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಡಾ. ಪಿ. ವಿ. ಪಂಡಿತ ಅಭಿಮತ.

ಹೊನ್ನಾವರ: ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಸಹಜವಾಗಿ ಬೆಳೆಸುವ ಉದ್ದೇಶ ಹೊಂದಿದೆ. ಈ ನೀತಿಯು ವಿದ್ಯಾರ್ಥಿಗಳಿಗೆ ಉದ್ಯೋಗದ ಖಚಿತತೆ ನೀಡಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಂಖ್ಯಾಶಾಸ್ತçದ ಮುಖ್ಯಸ್ಥರಾದ ಡಾ. ಪಿ. ವಿ. ಪಂಡಿತ ಹೇಳಿದರು. 
ಅವರು ಪಟ್ಟಣದ ಎಸ್.ಡಿ.ಎಂ. ಪದವಿ ಕಾಲೇಜು ಮತ್ತು ಕ.ವಿ.ವಿ. ಗಣಿತಶಾಸ್ತç ಶಿಕ್ಷಕರ ಸಂಘ ಧಾರವಾಡ ಇವುಗಳ ಸಹಯೋಗದಲ್ಲಿ ಆರ್. ಎಸ್. ಹೆಗಡೆ ಸಭಾಭವನದಲ್ಲಿ ನಡೆದ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 
ಹೊಸ ಶಿಕ್ಷಣ ನೀತಿಯಲ್ಲಿ ಗಣಿತಶಾಸ್ತçಕ್ಕೆÀ ಹೆಚ್ಚಿನ ಮನ್ನಣೆ ದೊರೆತಿದೆ. ಗಣಿತವು ವಿದ್ಯಾರ್ಥಿಗಳಿಗೆ ಬದುಕಿನ ಎಲ್ಲಾ ಬಗೆಯ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ, ಸ್ವಯಂ ಶಿಸ್ತು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು. 

ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಎಂ. ಪಿ. ಇ. ಸೊಸೈಟಿಯ ಕಾರ್ಯದರ್ಶಿಗಳಾದ ಎಸ್. ಎಂ. ಭಟ್ಟ ಮಾತನಾಡಿ ಗುರುವಿಗೆ ಸರಿಯಾದ ಮಾಹಿತಿ ಮತ್ತು ತರಬೇತಿ ಇದ್ದರೆ ಅವರು ಶಿಷ್ಯರಿಗೆ ಒಳ್ಳೆಯ ಶಿಕ್ಷಣ ನೀಡಬಲ್ಲರು. ನಮ್ಮ ಸಂಸ್ಥೆ ಯಾವಾಗಲೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ. ಗಣಿತ ಕಬ್ಬಿಣದ ಕಡಲೆಯಲ್ಲ. ಪ್ರಯೋಗದ ಜೊತೆಜೊತೆಗೆ ಕಲಿತದ್ದು ಸದಾ ನೆನಪಿನಲ್ಲಿ ಇರುತ್ತದೆ ಹಾಗಾಗಿ ಗಣಿತದಲ್ಲಿ ಸೈಲ್ಯಾಬ್ ಪರಿಚಯಿಸುತ್ತಿರುವುದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಮಾತನಾಡಿ ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿದೆ. ವಿದ್ಯಾರ್ಥಿಗಳಿಗೆ ಪ್ರತಿ ಕೋರ್ಸಿಗೆ ಪ್ರವೇಶ ಮತ್ತು ನಿರ್ಗಮನದ ವಿಷಯದಲ್ಲಿ ಸಾಕಷ್ಟು ಸ್ವಾತಂತ್ರ್ಯವಿದೆ ಎಂದರು.
ಕ.ವಿ.ವಿ. ಗಣಿತಶಾಸ್ತç ಶಿಕ್ಷಕರ ಸಂಘದ ಕಾರ್ಯದರ್ಶಿ ಟಿ. ವಿ. ಮರಿಗೌಡರ ಕಾರ್ಯಕ್ರಮದ ವರದಿ ವಾಚಿಸಿದರು. ಕಾರ್ಯಾಗಾರದ ಕುರಿತು ಡಾ. ಅಶೋಕಕುಮಾರ ಮತ್ತು ಡಾ. ವಿ. ಬಿ. ಕುಂಬಾರ ಅನಿಸಿಕೆ ವ್ಯಕ್ತಪಡಿಸಿದರು. ಕೆ. ಆರ್. ಶ್ರೀಲತಾ ಪ್ರಾರ್ಥಿಸಿದರು. ಡಾ. ವಿ. ಎಂ. ಭಂಡಾರಿ ಸ್ವಾಗತಿಸಿದರು. ಕ.ವಿ.ವಿ. ಗಣಿತಶಾಸ್ತç ಸಂಘದ ಅಧ್ಯಕ್ಷರಾದ ಡಾ. ಮಹೇಶ ಭಟ್ಟ ವಂದಿಸಿದರು. ಪ್ರೊ. ನಾಗರಾಜ ಅಪಗಾಲ ಮತ್ತು ಪ್ರೊ. ಪ್ರಶಾಂತ ಮೂಡಲಮನೆ ಕಾರ್ಯಕ್ರಮ ನಿರೂಪಿಸಿದರು.

error: