April 29, 2024

Bhavana Tv

Its Your Channel

ಹೊನ್ನಾವರದ ಇಕೋ ಬೀಚ್ ನಲ್ಲಿ ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ಕನ್ನಡಕ್ಕಾಗಿ ನಾವು ಕಾರ್ಯಕ್ರಮ

ಹೊನ್ನಾವರ: ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ಕನ್ನಡಕ್ಕಾಗಿ ನಾವು, ಕಾರ್ಯಕ್ರಮ ಹೊನ್ನಾವರದ ಇಕೋ ಬೀಚ್ ನಲ್ಲಿ ತಾಲ್ಲೂಕಾ ಆಡಳಿತದ ಆಶ್ರಯದಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು.

ಇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಪಕರಾದ ಡಾ. ಶ್ರೀಪಾದ ಶೆಟ್ಟಿಯವರು
ಕನ್ನಡದ ಹಿರಿಮೆ ಹೆಚ್ಚಿಸುವ ಗಾಯನಕ್ಕೆ ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಅರ್ಥಪೂರ್ಣ ರಾಜ್ಯೋತ್ಸವಕ್ಕೆ ಮುಂದಾಗಿರುವುದು ಉತ್ತಮ ಕಾರ್ಯ ಎಂದರು.

ಕನ್ನಡ ಭಾಷೆ ತನ್ನದೇ ಆದ ಹಿರಿಮೆ ಹೊಂದಿದೆ. ಕನ್ನಡದ ಗತಕಾಲದ ವೈಭವ ಸಾರುವ ಗೀತೆಗಳನ್ನು ಕೇಳಿದಾಗ ಮೈಯೆಲ್ಲ ರೋಮಾಂಚನವಾಗಿದೆ. ಸರ್ಕಾರದ ಕಾರ್ಯಕ್ರಮದ ಜೊತೆ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದವರನ್ನು ಸನ್ಮಾನಿಸಿ ಗೌರವಿಸುವ ಜೊತೆ ಅವರು ನಡೆದ ಬಂದ ದಾರಿಯಲ್ಲಿ ನಾವು ಸಾಗಬೇಕಿದೆ ಎಂದರು.

ಪ್ರಭಾರಿ ಕಾರ್ಯನಿರ್ವಹಣಾದಿಕಾರಿ ಅವಿನಾಶ ಸಿಂಧೆ ಮಾತನಾಡಿ ನಮ್ಮ ನಾಡಿನ ವಿವಿಧಡೆ ಕನ್ನಡ ಭಾಷೆ ಶೈಲಿ ಬದಲಿದ್ದರೂ ಏಕತಾ ಸ್ವರೂಪದಿಂದ ಕನ್ನಡ ಪ್ರೇಮ ನಾಡಿನೆಲ್ಲಡೆಯೂ ಇರುವುದು ಈ ಭಾಷೆಯ ವಿಶೇಷವಾಗಿದೆ. ದೇಶದ ೮ ಪ್ರಮುಖ ಭಾಷೆಯಲ್ಲಿ ಕನ್ನಡ ಭಾಷೆ ಬಹು ಸೊಗಸಾಗಿದ್ದು, ಮುಂದಿನ ಜನಾಂಗಕ್ಕೂ ಭಾಷಾಭಿಮಾನ ಮೂಡಿಸಲು ಸರ್ಕಾರ ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ ನಾಗರಾಜ ವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕನ್ನಡನಾಡಿನ ಜವಬ್ದಾರಿಯುತ ಪ್ರಜೆಯಾದ ನಾನು ಕನ್ನಡದಲ್ಲೆ ಮಾತನಾಡುತ್ತೇನೆ. ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿಯೂ ಕನ್ನಡ ಬಳಸುತ್ತೇನೆ. ನಾಡಿನಲ್ಲಿ ವಾಸವಿರುವ ಇತರರಿಗೂ ಕನ್ನಡ ಕಲಿಸುವ ಜೊತೆ ನಾಡು ನುಡಿ, ಸಂಸ್ಕçತಿ, ಪರಂಪರೆ ಉಳಿಸಲು ಬದ್ದನಾಗಿದ್ದೇನೆ ಎಂದು ಸಂಕಲ್ಪ ತೆಗೆದುಕೊಳ್ಳಲಾಯಿತು. ತಾಲೂಕಿನ ೬ ಶಾಲೆಯ ವಿದ್ಯಾರ್ಥಿಗಳು ಕನ್ನಡತನ ಸಾರುವ ಗೀತೆಗಳನ್ನು ಪ್ರಸುತ್ತಪಡಿಸಿದರು.

ವೇದಿಕೆಯಲ್ಲಿ ಇ.ಓ ಸುರೇಶ ನಾಯ್ಕ, ಪಿಎಸೈ ಸಾವಿತ್ರಿ ನಾಯ್ಕ, ಕಾಸರಕೋಡ ಗ್ರಾ.ಪಂ. ಅಧ್ಯಕ್ಷ ಮಂಜು ಗೌಡ, ಪ.ಪಂ. ಮುಖ್ಯಾಧಿಕಾರಿ ಪ್ರವೀಣ ಕುಮಾರ, ಮಂಕಿ ಪ.ಪಂ. ಮುಖ್ಯಾಧಿಕಾರಿ ಅಜಯ ಭಂಡಾರಕರ್ ಬಿ.ಇ.ಓ ಸವಿತಾ ನಾಯಕ, ಕ್ಷೇತ್ರ ಸಮನ್ವಾಯಧಿಕಾರಿ ಎಸ್.ಎನ್.ಹೆಗಡೆ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಐ.ಟಿ.ಐ ಪ್ರಾಚಾರ್ಯ ಜಗದೀಶ, ಅರಣ್ಯ ಇಲಾಖೆಯ ಶಿವಾನಂದ, ಗ್ರಾ.ಪಂ. ಪಿಡಿಓ ನಾಗರಾಜ, ಗೋವಿಂದ ತಾಂಡೇಲ್, ಯುವಜನಸೇವಾ ಕ್ರೀಡಾದಿಕಾರಿ ಸುಧೀಶ ನಾಯ್ಕ ಉಪಸ್ಥಿತರಿದ್ದರು.
ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ

error: