May 3, 2024

Bhavana Tv

Its Your Channel

ಕನ್ನಡಕ್ಕೆ ಕುತ್ತು ಬರುತ್ತಿದೆ -ಅದಕ್ಕೆ ಕಾರವಾರವೂ ಹೊರತಾಗಿಲ್ಲ -ಉದಯಕುಮಾರ್ ಕಾನಲ್ಲಿ

ಹೊನ್ನಾವರ :–ಕರ್ನಾಟಕದಲ್ಲಿ ಕನ್ನಡಕ್ಕೆ ಕುತ್ತು ಬರ್ತಾ ಇದೆ, ಕರ್ನಾಟಕದ ಗಡಿಭಾಗಗಳಲ್ಲಿ ಕನ್ನಡ ಹುಡುಕಬೇಕಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಕನ್ನಡದ ಕಾರವಾರ ದಲ್ಲಿಯೂ ಇದೆ ಪರಿಸ್ಥಿತಿ ಇದೆ. ಕನ್ನಡ ಸಂಘಟನೆಗಳು ಈ ಕುರಿತು ಜಾಗ್ರತೆ ವಹಿಸಿ ಕಾರ್ಯ ಮಾಡಬೇಕು, ಈ ಹೋರಾಟ ಕರ್ನಾಟಕ ಜನರ ಹೋರಾಟ ವಾಗಬೇಕೆಂದು ಬನವಾಸಿಯ ಪತ್ರಕರ್ತ ಉದಯಕುಮಾರ್ ಕಾನಲ್ಲಿ ಹೇಳಿದ್ದಾರೆ. ಅವರು ನವೆಂಬರ್ ೨೧ರವಿವಾರ ಹೊನ್ನಾವರ ತಾಲೂಕು ಸರಳಗಿ ಗ್ರಾಮದಲ್ಲಿ ನಡೆದ ಕನ್ನಡ ಸಂಘಟನೆ ಕದಂಬ ಸೈನ್ಯ ದಶಮಾನೋತ್ಸವ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡುತ್ತಿದ್ದರು. ಗಿಡ ಹಚ್ಚುವ ಕೆಲಸ, ಅದರ ಲಾಲನೆ ಪೋಷಣೆ ಮಾಡುವ ಕೆಲಸ ಯಾರೋ ಮಾಡುತ್ತಾರೆ. ಅದು ಬೆಳೆದು ಹೆಮ್ಮರವಾದ ಮೇಲೆ ಅದರ ಫಲ ಅನುಭವಿಸುವವರು ಹಿಂದೆ ಕೆಲಸ ಮಾಡಿದವರ ಬಗ್ಗೆ ಗೌರವ ಇಡಬೇಕು ಎಂದರು.

  ಸರಳಗಿಯ ಮಲೆನಾಡು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಜಿ ನಾಯ್ಕ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಕೋರಿದರು ಸಭಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಕದಂಬ ಸೈನ್ಯ ಜಿಲ್ಲಾ ಉಪಾಧ್ಯಕ್ಷ ಪುರಂದರ ನಾಯ್ಕ್, ಕನ್ನಡಕ್ಕೆ ಎಲ್ಲೇ ತೊಂದರೆ ಆದರೂ ಕದಂಬ ಸೈನ್ಯ ಧ್ವನಿ ಎತ್ತಿದೆ, ರಾಜ್ಜದ ಗಡಿ ಭಾಗಗಳಲ್ಲಿ ಕನ್ನಡಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೋರಾಟ ನಡೆಸಲಿದೆ ಎಂದರು. ಹತ್ತು ವರ್ಷಗಳ ಹಿಂದೆ ಸರಳಗಿ ಶಾಖೆ ಯನ್ನು ಉದಯಕುಮಾರ್ ಕಾನಲ್ಲಿ ಉದ್ಘಾಟನೆ ಮಾಡಿದ್ದರು, ಇದೀಗ ದಶಮಾನೋತ್ಸವ ಆಚರಣೆಯಲ್ಲಿ ನಾವಿದ್ದೇವೆ ಎಂದರು. 
            ವೇದಿಕೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಾಖಲೆ ಅಂಕ ಗಳಿಸಿದ ಭೂಮಿಕಾ ಕೃಷ್ಣ ನಾಯ್ಕ್, ರಜತ್ ಮದೆವ್ ಉಪ್ಪಾರ್, ಪ್ರದೀಪ್ ಮಂಜುನಾಥ್ ನಾಯ್ಕ್, ದೀಕ್ಷಿತಾ ಮಾದೇವ್ ನಾಯ್ಕ್, ಹಾಗೂ ಜನಪ್ರಿಯ ವೈದ್ಯ ಆಶ್ರಫ್ ಅಲಿ ಮತ್ತು ಉತ್ತಮ ಕಾರ್ಯಕ್ರಮ ನಿರೂಪಕ ರಾದ ಶಿಕ್ಷಕ ಆರ್ ಬಿ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.                    ವೇದಿಕೆ ಯಲ್ಲಿ ಸ್ಮಶಾನ ಕಾಳಿ ದೇವಾಲಯದ ಅರ್ಚಕರು ಮಾರುತಿ ಬಿ ಉಪ್ಪಾರ್, ಆಯಾಜ್ ಫಕೀರ ಸಾಬ್, ಯಾಕೂಬ್ ಸಾಬ್ ಇಸುಬ್ ಸಾಬ್, ಜಾಫರ್ ಸಾಬ್, ಅಜಿದ ಖಾಸಿಂ ಖಾನ್, ಕದಂಬ ಸೈನ್ಯ ಸರಳಗಿ ಘಟಕಾಧ್ಯಕ್ಷ ಗಣಪತಿ ಏನ್ ನಾಯ್ಕ್, ನರಸಿಂಹ ಡಿ ಉಪ್ಪಾರ್, ಹೊನ್ನಪ್ಪ ಎಂ ನಾಯ್ಕ್, ತಾಲೂಕು ಅಧ್ಯಕ್ಷ ಗಣಪತಿ ನಾರಾಯಣ ನಾಯ್ಕ್, ಸುಬ್ರಾಯ ಟಿ ಉಪ್ಪಾರ್, ಘಟಕ ಉಪಾಧ್ಯಕ್ಷ ನಾರಾಯಣ ಎಂ ಉಪ್ಪಾರ್ ಅತಿಸ್ ನಿರ್ಮಲ ಕುಮಾರ್, ಮಾರುತಿ ಜಿ ಉಪ್ಪಾರ್ ಮುಂತಾದವರಿದ್ದರು. ಘಟಕ ಖಜಾಂಚಿ ಪದ್ಮರಾಜ್ ಜಿ ಉಪ್ಪಾರ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಸ್ ಉಪ್ಪಾರ್ ವಂದಿಸಿದರು, ಶಿಕ್ಷಕ ಆರ್ ಬಿ ಶೆಟ್ಟಿ ನಿರ್ವಹಿಸಿದರು.                  

ಅಂದು ಬೆ.೧೦ಗಂಟೆಗೆ ಕನ್ನಡ ಧ್ವಜಾರೋಹಣ ನಂತರ ಶೋಭಾ ಯಾತ್ರೆ ನಡೆಯಿತು. ಘಟಕಾಧ್ಯಕ್ಷ ಗಣಪತಿ ಏನ್ ನಾಯ್ಕ್ ನೇತೃತ್ವದಲ್ಲಿ ಪಧಧಿಕಾರಿಗಳು ಪಾಲ್ಗೊಂಡಿದ್ದರು. ಸಂಜೆ ೬ಘಂಟೆಯಿAದ ಸಭಾ ವೇದಿಕೆ, ಸನ್ಮಾನ, ನಂತರ ಅತಿಥಿ ಕಲಾವಿದರಿಂದ ಯಕ್ಷಗಾನ ನಡೆಯಿತು.

error: