May 11, 2024

Bhavana Tv

Its Your Channel

ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರಿಂದ ೨೦೨೨ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ

ವರದಿ:- ವೇಣುಗೋಪಾಲ ಮದ್ಗುಣಿ

ಹೊನ್ನಾವರ: ಮಾನವೀಯ ಕಾರ್ಯವೇ ಧರ್ಮ ಎನ್ನುವುದು. ಯಾವುದು ಸತ್ಕಾರ್ಯ ಅನಿಸುತ್ತದೋ ಅದು ಧರ್ಮಕಾರ್ಯ ಎನಿಸುತ್ತದೆ’ ಎಂದು ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಸ್ವಾಮೀಜಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ನುಡಿದರು. ತಾಲೂಕಿನ ಮಾಳ್ಕೋಡದಲ್ಲಿ ಶುಕ್ರವಾರ ಹಮ್ಮಿಕೊಂಡ ಮನೆ ಹಸ್ತಾಂತರ ಹಾಗೂ ೨೦೨೨ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ಮಾನವೀಯ ಕಾರ್ಯದಲ್ಲಿ ತೊಡಗಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗಿದೆ. ಬಡವ, ದೀನ ದಲಿತರಿಗೆ ಸಹಾಯ ಮಾಡುವುದೇ ಧರ್ಮಕಾರ್ಯ ಎನಿಸುತ್ತದೆ. ಧರ್ಮ ಎಂದರೆ ನಾವು ಮಾಡಿಕೊಂಡ ನಮ್ಮ ನಡುವಿನ ಜಾತಿಗಳಲ್ಲ ಎಂದು ನುಡಿದರು. ಕಳೆದ ಎರಡು ವರ್ಷದ ಹಿಂದೆ ಅಗ್ನಿ ಅವಗಡಕ್ಕೆ ಸಿಲುಕಿ ಸಂಪೂರ್ಣ ಮನೆ ಭಸ್ಮವಾದ ಮಾಲ್ಕೋಡಿನ ಕುಟುಂಬದ ನಾಗಪ್ಪ ಗೌಡ ಅವರಿಗೆ ಒಕ್ಕಲಿಗರ ಯುವ ವೇದಿಕೆ’ ಮನೆ ನಿರ್ಮಿಸಿ ಶುಕ್ರವಾರ ಹಸ್ತಾಂತರ ಮಾಡಿತು. ಜೊತೆಗೆ ಕಳೆದ ಐದು ವರ್ಷದಿಂದ ಸಮಾಜದ ಸಾಧಕರ ಪರಿಚಯಿಸುವ ಕ್ಯಾಲೆಂಡರ್ ಬಿಡುಗಡೆ ಮಾಡುತ್ತ ಬಂದಿದ್ದು, ೨೦೨೨ನೇ ವರ್ಷದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ ಅವರಿಗೆ ಶಾಲು, ನಗದು ೫ ಸಾವಿರ ರೂ ಫಲ, ಪುಷ್ಪಗಳೊಂದಿಗೆ ಸನ್ಮಾನಿಸಲಾಯಿತು. ಕರವೇ ಜಿಲ್ಲಾ ಅಧ್ಯಕ್ಷ ಭಾಸ್ಕರ ಪಟಗಾರ, ನಿವೃತ್ತ ಸೈನಿಕ ತಿಮ್ಮಪ್ಪ ಗೌಡ, ಗೋ ರಕ್ಷಣಾ ವೇದಿಕೆಯ ಅಧ್ಯಕ್ಷ ಬಾಲಚಂದ್ರ ಗೌಡ, ಕರವೇ ತಾಲೂಕಾಧ್ಯಕ್ಷ ಮಂಜುನಾಥ ಗೌಡ, ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಶಂಕರ ಗೌಡ ಗುಣವಂತೆ ಇತರರು ಉಪಸ್ಥಿತರಿದ್ದರು.

error: