May 15, 2024

Bhavana Tv

Its Your Channel

ಜನಪದ ಸಾಹಿತ್ಯಕ್ಕೆ ಡಾಕ್ಟರ್ ಎನ್. ಆರ್. ನಾಯಕ ದಂಪತಿಗಳಿOದ ಕಾರ್ಯ ಶ್ಲಾಘನೀಯ -ಶಾಸಕ ಸುನಿಲ ನಾಯ್ಕ

ಹೊನ್ನಾವರ:- ಜನಪದ ಸಾಹಿತ್ಯಕ್ಕೆ ಹೊಳಪು ಕೊಡುವ ಕೆಲಸ ಡಾಕ್ಟರ್ ಎನ್. ಆರ್.ನಾಯಕ ದಂಪತಿಗಳಿAದ ಆಗಿದೆ.ಬದುಕಿನ ಬಹುಪಾಲು ಸಮಯವನ್ನು ಆ ಕ್ಷೇತ್ರಕ್ಕೆ ಮೀಸಲಿಟ್ಟ ಅಪರೂಪದ ಸಾಧಕರು ಅವರ ಕೊಡುಗೆ ಅಪಾರವಾದದ್ದು ಎಂದು ಶಾಸಕ ಸುನಿಲ ನಾಯ್ಕ ಹೇಳಿದರು.

ಇತ್ತೀಚೆಗೆ ನಾಮಧಾರಿ ವಿದ್ಯಾರ್ಥಿನಿಲಯದಲ್ಲಿ ಹಳೆಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟಣಾ ಸಮಿತಿ ಹಮ್ಮಿಕೊಂಡ ಹಳೆಪೈಕ ನಾಮಧಾರಿ ಜನಪದ ಗೀತೆಗಳು ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಜನಪದ ಸಾಹಿತ್ಯ ನಮ್ಮ ಹಿಂದಿನ ತಲೆಮಾರಿನ ಓದು ಬಾರದ ಅನಕ್ಷರಸ್ಥ ತಾಯಂದಿರು ಕಟ್ಟಿದ ಹಾಡನ್ನು ಸಂಗ್ರಹಿಸಿದ ಡಾಕ್ಟರ ನಾಯಕರ ಸಂಪಾದಕತ್ವದ ಕೃತಿ ಸಂಗ್ರಹಯೋಗ್ಯವಾಗಿದೆ. ನಾಮಧಾರಿ ಜನವರ್ಗದ ಬಾಯಿಂದ ಬಾಯಿಗೆ ಹರಿದು ಬಂದ ಹಾಡು ಆ ಜನವರ್ಗದ ಸಾಂಸ್ಕೃತಿಕ ಬದುಕನ್ನು ಅರ್ಥೈಸಿಕೊಳ್ಳಲು ಸಾಧ್ಯ. ಯಕ್ಷಗಾನವು ಸಹ ಜನಪದ ಕಲೆಯಾಗಿ ನಮ್ಮ ಜಿಲ್ಲೆಯ ಅನೇಕ ಸಾಧಕ ಕಲಾವಿದರಿಂದ ಶ್ರೀಮಂತಗೊoಡಿದೆ.ಅದನ್ನು ಉಳಿಸಿ ಬೆಳೆಸುವ ಕೆಲಸ ನಮ್ಮಿಂದ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆರ್. ಎನ್. ನಾಯ್ಕ ಮಾತನಾಡಿ, ನಾಮಧಾರಿ ಸಮಾಜದ ಜನಪದ ಗೀತೆಗಳು ಇಡೀ ಸಮುದಾಯದ ಸಾಂಸ್ಕೃತಿಕ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಇದೊಂದು ಅಪೂರ್ವ ಕೆಲಸವಾಗಿದ್ದು, ಈ ಗ್ರಂಥ ಪ್ರಕಟಣೆಗೆ ಮುಂದಾದ ಸಮಿತಿಗೆ ಅಭಿನಂದನೆ ಸಲ್ಲಿಸಿದರು. ಇಂತಹ ಸಮಾಜಮುಖಿ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾದ ಅಗತ್ಯತೆ ಇದೆ ಎಂದರು.

ಮುಖ್ಯ ಅತಿಥಿಯಾಗಿ ಕರಾವಳಿ ಮುಂಜಾವು ಪತ್ರಿಕೆ ಸಂಪಾದಕ ಗಂಗಾಧರ ಹಿರೇಗುತ್ತಿ ಮಾತನಾಡಿ,ಜನಪದವು ರಂಗುರAಗಿನ ಆಕರ್ಷಣೀಯ ಕ್ಷೇತ್ರವಲ್ಲ.ಕೆಳವರ್ಗದ ಜನರು ಕಲ್ಪಿಸಿಕೊಂಡ ಅವರವರ ಸಮಾಜದ ಹಾಡುಗಳ ಮೂಲಕ ಆ ಸಮಾಜವನ್ನು ಗುರುತಿಸುವಂತಾಯಿತು. ಒಂದು ಜಾತಿಯು ಇನ್ನೊಂದು ಜಾತಿಯವರನ್ನು ಎತ್ತಿಕಟ್ಟಿ ದ್ವೇಷಿಸುವ ಕಾಲಘಟ್ಟದಲ್ಲಿಯೂ ಜನಪದ ಸಾಹಿತ್ಯ ಎಲ್ಲಾ ಜಾತಿಯವರನ್ನು ಒಂದುಗೂಡಿಸುವ ಶಕ್ತಿ ಹೊಂದಿತ್ತು ಎಂದರು. ಹಿಂದೆ ಬದುಕಿನಲ್ಲಿ ಕಷ್ಟ ಮಾತ್ರ ಇತ್ತು. ಜನಪದರು ತಮ್ಮ ನೋವಿನಲ್ಲೂ ಹಾಡಿನ ಮೂಲಕ ಸಂತೋಷಗಳನ್ನು ಹಂಚಿಕೊoಡು ಮನೋರಂಜನೆ ಒದಗಿಸುತ್ತಿದ್ದರು. ನನಗೆ ಜಾತಿಯಿಲ್ಲ. ಜಾತ್ಯತೀತ ನೆಲೆಯಲ್ಲಿ ಎಲ್ಲರನ್ನೂ ಪ್ರೀತಿಸುವ,ಗೌರವಿಸುವ ಪರಂಪರೆ ನಮ್ಮದಾಗಬೇಕು. ನಾರಾಯಣ ಗುರುಗಳ ಆದರ್ಶಗಳು ಹಿಂದುಳಿದ ಜನಾಂಗಕ್ಕೆ ಅನುಕರಣೀಯವಾದುದು ಎಂದರು.

ಗ್ರAಥ ಸಂಪಾದಕ ಡಾಕ್ಟರ ಎನ್.ಆರ್. ನಾಯಕ್ ಮಾತನಾಡಿ, ಹೊನ್ನಾವರ ನನ್ನ ಬದುಕನ್ನು ರೂಪಿಸಿದ ನೆಲವಾಗಿದೆ. ನಾಮಧಾರಿ ಸಮಾಜದವರ ಪ್ರೀತಿಗೆ ಪಾತ್ರನಾಗಿದ್ದೇನೆ. ನಾನು ಸಂಗ್ರಹಿಸಿದ ಜನಪದ ಹಾಡುಗಳು ಇಂದು ಗ್ರಂಥರೂಪದಲ್ಲಿ ಪ್ರಕಟಿಸಿರುವುದು ಇನ್ನುಳಿದ ಸಮಾಜಕ್ಕೆ ಮಾದರಿಯಾದ್ದದ್ದು ಎಂದರು. ಗ್ರಂಥ ಪ್ರಕಟಣಾ ಸಮಿತಿಯವರನ್ನು ಅಭಿನಂದಿಸಿದರು.

ಇನ್ನೊವ9 ಮುಖ್ಯಅತಿಥಿ ಪತ್ರಕರ್ತ ಜಿ.ಯು. ಭಟ್ಟ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸಮುದಾಯದವರ ಜನಪದ ಸಾಹಿತ್ಯವನ್ನು ತೆರೆದಿಟ್ಟು ತಮ್ಮ ಬದುಕಿನ ಬಹುಪಾಲು ಸಮಯವನ್ನು ಈ ಕ್ಷೇತ್ರಕ್ಕಾಗಿ ಮೀಸಲಿಟ್ಟ ಡಾಕ್ಟರ ಎನ್.ಆರ್. ನಾಯಕರು ಇಡಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿರುತ್ತಾರೆ.ಪ್ರತಿ ಸಮಾಜದವರು ತಮ್ಮ ತಮ್ಮ ಸಮಾಜದ ಬಗ್ಗೆ ತಿಳಿದುಕೊಳ್ಳಬೇಕು. ನಿನ್ನೆಯನ್ನು ತಿಳಿದುಕೊಳ್ಳದೇ ಇಂದಿನ ಬಗ್ಗೆ ಅಭಿಮಾನಪಡಲು ಸಾಧ್ಯವಿಲ್ಲ ಎಂದರು.

ಎಲ್.ಕೆ.ನಾಯ್ಕ ಬೆಂಗಳೂರು ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾಕ್ಟರ ಮೋಹನ್ ಚಂದ್ರಗುತ್ತಿ ಗ್ರಂಥ ಪರಿಚಯಿಸಿ ಮಾತನಾಡಿ, ನಾಮಧಾರಿ ಸಮುದಾಯದ ಗಾಯದ ಗುರುತುಗಳನ್ನು ದಾಖಲಿಸುವ ಮೂಲಕ ಸಮಾಜದ ಸ್ವಾಭಿಮಾನದ ಬದುಕಿನ ಹೆಜ್ಜೆ ಗುರುತನ್ನು ಈ ಕೃತಿಯಲ್ಲಿ ವಿಸ್ತ್ರತವಾಗಿ ದಾಖಲಾಗಿದೆ. ನಾಯಕತ್ವ ಗುಣಗಳ ಮೂಲಕ ಆದರ್ಶದ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡ ಜನಪದ ಗೀತೆಗಳು ಎಲ್ಲಾ ಕಾಲಕ್ಕೂ ಸಲ್ಲುವಂತಾಗಿದೆ ಎಂದರು.

ವೇದಿಕೆಯಲ್ಲಿ ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಸುದೀಶ ನಾಯ್ಕ, ಜಾನಪದ ತಜ್ಞೆ ಶಾಂತಿ ನಾಯಕ, ಜನಪದ ಹಾಡುಗಾರರಾದ ಪಾರ್ವತಿ ನಾಯ್ಕ, ನಾರಾಯಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾಕ್ಟರ ಎನ್.ಆರ್.ನಾಯಕ ದಂಪತಿಗಳನ್ನು ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಹಾಡುಗಾರ್ತಿ ಪಾರ್ವತಿ ನಾಯ್ಕ ದೇವರ ಸ್ಥುತಿಯನ್ನು ಹಾಡಿದರು. ಗ್ರಂಥ ಸಂಪಾದಕ ಸುಮುಖಾನಂದ ಜಲವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲಾವಿದ ಮೋಹನ ನಾಯ್ಕ ಕೂಜಳ್ಳಿ ಸ್ವಾಗತಿಸಿದರೆ, ಎಂ.ಎo.ನಾಯ್ಕ ವಂದಿಸಿದರು. ಪ್ರಕಟನಾ ಸಮಿತಿಯ ಪಿ.ಆರ್. ನಾಯ್ಕ, ವಿನಾಯಕ ನಾಯ್ಕ ಸಹಕರಿಸಿದರು.

error: